ಸುಂದರಕಾಂಡ ರಾಮಾಯಣ ಭಾಗ-68

By admin


ಚಿತ್ರಕಲೆ, ಬಳ್ಳಿ ಮಧ್ಯೆ ಕತ್ತಲೆಯ ಗೃಹ ಕಂಡನು ಹನುಮI
ಹುಡುಕಲು ಸುಂದರ ಸೀತೆ ದೃಶ್ಯ ಕಾಣಲಿಲ್ಲ ಹನುಮ,II
ಸೀತೆ ಕಾಣದೆ ನಿರಾಶೆದಿ ಅಂದುಕೊಂಡ ಹನುಮ I
“ಯಾವ ದಾರಿದಿ ಹುಡುಕಿದರೂ ಸೀತೆ ಸಿಗುತ್ತಿಲ್ಲ, ಮೃತ್ಯ ಹೊಂದಿರಬೇಕು,II
ತನ್ನ ಪವಿತ್ರತೆ ಕಾಪಾಡಿಕೊಂಡಿರಬೇಕು ಉತ್ತಮ-ಪರಂಪರೆಯ ಸೀತೆ I
ರಾಕ್ಷಸನ ಕುಕೃತ್ಯಕ್ಕಾಗಿ ಖಂಡಿತ ಹತಳಾಗಿರಬೇಕು; II
ಕಂಡು ಕ್ರೂರ ದೃಶ್ಯದ ರಾವಣ-ಪತ್ನಿಯರನುI
ಹೆದರಿ ಹತಳಾಗಿರಬೇಕು ಸೀತೆ, II
ವಾನರರೊಂದಿಗೆ ದೀರ್ಘವಾಗಿ ಅಲೆದು, ಗುರಿ ಮುಟ್ಟದೆ,I
ಸೀತೆಯನು ಕಾಣದೆ, ಮರಳುವದ್ಹೇಗೆ? II
ಸಬಲ ಸುಗ್ರೀವ ನೀಡುವನು ನಮಗೆ ಕಠೋರ ಶಿಕ್ಷೆ,I
ನಮ್ಮ ವಿಫಲತೆಗೆ; ನಗರ ಮಧ್ಯೆ ಎಲ್ಲ ಸ್ಥಳ ಹುಡುಕಿದೆ, II
ಕಂಡೆ ರಾವಣ-ಪತ್ನಿಯರನುI
ಕಾಣಿಸಲಿಲ್ಲ ಎಲ್ಲೂ ಸೀತೆ, ವ್ಯರ್ಥವಾಯಿತು ಪ್ರಯತ್ನ ನನ್ನ, II
ಮಹಾಬಲನೇ, ಅಲ್ಲಿ ಏನು ಮಾಡಿಬಂದೆ ತಿಳಿಸು?I
ಪ್ರಶ್ನೆಗೆ, ಹಿಂದಿರುಗಿ ವಾನರರಿಗೆ ಏನು ಹೇಳಲಿ?II
ಸಮುದ್ರಾಚೆ ದಡದಲ್ಲಿರು ಜಾಂಬವಂತ, ಅಂಗದI
ವಾನರರಿಗೆ ಹೇಗೆ ಉತ್ತರಿಸುವದು, ಸೀತೆ ಕಾಣದೆ? II
ಸುಖಕ್ಕೆ ಮೂಲ ಆತ್ಮವಿಶ್ವಾಸ, ಆತ್ಮವಿಶ್ವಾಸವೇ ಪರಮ ಸುಖ,I
ಎಲ್ಲ ಪುರುಷಾರ್ಥಗಳ ಪ್ರೇರಕವೇ ಆತ್ಮವಿಶ್ವಾಸ,II
ಪ್ರಯತ್ನಕ್ಕೆ ಫಲವಿದೆ, ಕರ್ಮ ಕೃರ್ತುವಿನ ಪ್ರಯತ್ನI
ಫಲಕ್ಕಿಂತ ಪ್ರಯತ್ನ ಮುಖ್ಯ, ಮುಖ್ಯ ನನಗೆ ಪ್ರಯತ್ನ, II
ಹತಾಶೆ ತೊರೆದು, ಹುಡುಕಬೇಕಾದ ರಾವಣನ I
ಎಲ್ಲ ಪ್ರದೇಶಗಳಲಿ ಹುಡುಕುವೆ ಸೀತೆಯನ”, II
ದೂರದ, ಸಮೀಪದ, ಕೂಟದ, ನೆಲಮಾಳಿಯ,I
ಎಲ್ಲ ಮನೆಗಳಲ್ಲೂ ಹನುಮ ಹುಡುಕಿದ ಸೀತೆಯನ; II
ಪುನಃ ಪುನಃ ಜಿಗಿಯುತ, ಎರುತ, ಇಳಿಯುತ,I
ನಡೆಯುತ, ಬಾಗಿಲು ಇಣುಕುತ, ದೂಕುತ, ದೂರುತ, II
ಮನೆಯಿಂದ ಮನೆಗೆ, ಕಟ್ಟಡದಿಂದ ಕಟ್ಟಡಕ್ಕೆI
ಹಾರುತ ಹುಡುಕಿದ ಹನುಮ ಸೀತೆಯನ, II
ಸರೋವರ, ವನ, ವಸತಿ, ದಾರಿಗಳಲ್ಲಿ ಕಂಡರುI
ರಾಕ್ಷಸ-ಸ್ತ್ರೀಯರು, ಹನುಮಗೆ ಸೀತೆ ಕಾಣಲಿಲ್ಲ, II
ಅಪ್ರಥಿಮ ಅಂದದ ವಿಧ್ಯಾಧರ-ಸ್ತ್ರೀ ಕಂಡಳು,I
ಆದರೆ, ಹನುಮಗೆ ಸೀತೆ ಕಾಣಿಸಲಿಲ್ಲ, II
ಆಕರ್ಷಣೀಯ ಪ್ರುಷ್ಠಗಳ ನಾಗಾ ಸುಂದರಿ ಕಂಡಳುI
ಪೂರ್ಣ ಚಂದ್ರನಂತೆ, ಹನುಮಗೆ ಸೀತೆ ಕಾಣಿಸಲಿಲ್ಲ, II
ನಾಗಾ, ಗಂಧರ್ವ, ವಿಧ್ಯಾಧರ, ರಾಕ್ಷಸ ಸುಂದರಿಯರು ಕಂಡರು ಹನುಮಗೆ, I
ಕಾಣಲಿಲ್ಲ ಸೀತೆ, ತ್ರಿಲೋಕ ಸುಂದರಿ; II
ಸಮುದ್ರ ದಾಟಿ ಬಂದು ಸೀತೆ ಹುಡುಕಿದ ಪ್ರಯತ್ನI
ಪದೇ ಪದೇ ವಿಫಲತೆ ಕಂಡು, ಖಿನ್ನತೆಗೊಳಗಾದ ಹನುಮ. II
ಸುಂದರ ಕಾಂಡ

ಹನುಮನು ಚಿತ್ರಕಲೆಗಳ ಮತ್ತು ಬಳ್ಳಿ ಮಧ್ಯೆಯಿದ್ದದು ಕತ್ತಲೆಯ ಗೃಹವನ್ನು ಕಂಡನು, ಅಲ್ಲಿಯೂ ಹುಡುಕಲು ಸುಂದರ ಸೀತೆ ದೃಶ್ಯ ಕಾಣಲಿಲ್ಲ, ಸೀತೆ ಕಾಣದೆ ನಿರಾಶೆಯಿಂದ ಹನುಮನು ಮನದಲ್ಲಿ ನೊಂದುಕೊಂಡದನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: (1) ಹನುಮಾನನ ನಿರಾಶೆ: ಸೀತೆ ಕಾಣದೇ ಇದ್ದಾಗ ಹನುಮಾನನು “ಯಾವ ದಾರಿಯಲ್ಲಿ ಹುಡುಕಿದರೂ ಸೀತೆ ಸಿಗುತ್ತಿಲ್ಲ, ಅವಳು ಮೃತ್ಯು ಹೊಂದಿರಬೇಕು, ರಾಕ್ಷಸ ರಾಜನ ಕುಕೃತ್ಯಕ್ಕಾಗಿ ಖಂಡಿತ ಸೀತೆ ಹತಳಾಗಿ ತನ್ನ ಪವಿತ್ರತೆ, ಉತ್ತಮ-ಪರಂಪರೆಯಗಳನ್ನು ಕಾಪಾಡಿಕೊಂಡಿರಬೇಕು; ಸೀತೆಯು ಕ್ರೂರ ದೃಶ್ಯದ ರಾವಣ-ಪತ್ನಿಯರನು ಕಂಡು ಹೆದರಿ ಹತಳಾಗಿರಬೇಕು; ವಾನರರೊಂದಿಗೆ ದೀರ್ಘವಾಗಿ ಅಲೆದು, ಗುರಿ ಮುಟ್ಟದೆ, ಸೀತೆಯನು ಕಾಣದೆ, ಕಿಷ್ಕಿಂದಕ್ಕೆ ಮರಳುವದ್ಹೇಗೆ? ನಮ್ಮ ವಿಫಲತೆಗಾಗಿ ಸಬಲ ಸುಗ್ರೀವನು ನಮಗೆ ಕಠೋರ ಶಿಕ್ಷೆ ನೀಡುವನು; ಲಂಕಾನಗರ ಮಧ್ಯೆ ಎಲ್ಲ ಸ್ಥಳಗಳಲ್ಲಿ ಸೀತಯನೆನು ಹುಡುಕಿದೆ, ಕಂಡೆ ರಾವಣ-ಪತ್ನಿಯರನು ಕಂಡರು ನನಗೆ ಆದರೆ ಎಲ್ಲೂ ಸೀತೆ ಕಾಣಿಸಲಿಲ್ಲ, ನನ್ನ ಪ್ರಯತ್ನ ವ್ಯರ್ಥವಾಯಿತು, ಸಮುದ್ರಾಚೆ ದಡದಲ್ಲಿರು ಜಾಂಬವಂತ, ಅಂಗದ ವಾನರರು ನನಗೆ ‘ಮಹಾಬಲನೇ, ಅಲ್ಲಿ ಏನು ಮಾಡಿಬಂದೆ ತಿಳಿಸು? ಎಂದು ಕೇಳಿದ ಪ್ರಶ್ನೆಗೆ ಸೀತೆ ಕಾಣದೆ ನಾನು ಅವರಿಗೆ ಏನೆಂದು ಉತ್ತರಿಸಲಿ? ” ಎಂದು ನಿರಾಶೆಯಿಂದ ತನ್ನಲ್ಲಿ ಆಡಿಕೊಳಳುವನು; (2) ತನ್ನ ಖಿನ್ನತೆ ಮತ್ತು ನಿರಾಶೆಗೆ ಹನುಮಾನ ಸ್ವತಃ ಉಪಶಮನ ಹುಡುಕಿಕೊಂಡನು: ಹನುಮಾನನು ಮನಸ್ಸಿನ ಮಾತುಗಳನ್ನು ಹೀಗೆ ಮುಂದುವರೆಸಿದನು “ಸುಖಕ್ಕೆ ಮೂಲ ಆತ್ಮವಿಶ್ವಾಸ, ಆತ್ಮವಿಶ್ವಾಸವೇ ಪರಮ ಸುಖ, ಎಲ್ಲ ಪುರುಷಾರ್ಥಗಳ ಪ್ರೇರಕವೇ ಆತ್ಮವಿಶ್ವಾಸ, ಆತ್ಮವಿಶ್ವಾಸದ ಪ್ರಯತ್ನಕ್ಕೆ ಫಲವಿದೆ, ಕರ್ಮವು ಕೃರ್ತುವಿನ ಪ್ರಯತ್ನ, ಪ್ರಯತ್ನ ಫಲಕ್ಕಿಂತ ಮುಖ್ಯ, ನನಗೆ ನನ್ನ ಪ್ರಯತ್ನ ಮುಖ್ಯ, ಕಾರಣ ತಾನು ಹತಾಶೆಯನ್ನು ತೊರೆದು, ಹುಡುಕಬೇಕಾದ ರಾವಣನ ಎಲ್ಲ ಪ್ರದೇಶಗಳಲಿ ಸೀತೆಯನ್ನು ಹುಡುಕುವೆ”. ಮನುಷ್ಯನು ಹತಾಶಯನಾಗಿ ತನ್ನ ಕಾರ್ಯವನ್ನು ಬಿಡಬಅರದೆಂದು ಈ ಸಂದರ್ಭ ಮೂಲಕ ಆದಿಕವಿ ವಾಲ್ಮೀಕಿಯು ಲೋಕಕ್ಕೆ ಸಂದೇಸ ನೀಡಿರುವರು; (3) ಮನುಷ್ಯ ಆತ್ಮವಿಶ್ವಾಸ ತೊರೆಯಕೂಡದು: ಮನಸ್ಸಿನ ಹತಾಶಯ ತೊರೆದು ಆತ್ಮವಿಶ್ವಾಸದಿಂದ ಹನುಮನು ದೂರದ, ಸಮೀಪದ, ಕೂಟದ, ನೆಲಮಾಳಿಯ, ಎಲ್ಲ ಮನೆಗಳಲ್ಲೂ ಸೀತೆಯನ್ನು ಹುಡುಕಿದನು; ಪುನಃ ಪುನಃ ಜಿಗಿಯುತ, ಎರುತ, ಇಳಿಯುತ, ನಡೆಯುತ, ಬಾಗಿಲು ಇಣುಕುತ, ದೂಕುತ, ದೂರುತ, ಮನೆಯಿಂದ ಮನೆಗೆ, ಕಟ್ಟಡದಿಂದ ಕಟ್ಟಡಕ್ಕೆ ಹಾರುತ ಹನುಮನು ಸೀತೆಯನ್ನು ಹುಡುಕಿದನು; ರಾಕ್ಷಸ-ಸ್ತ್ರೀಯರು ಸರೋವರ, ವನ, ವಸತಿ, ದಾರಿಗಳಲ್ಲಿ ಕಂಡರು ಆದರೆ ಹನುಮಗೆ ಸೀತೆ ಕಾಣಲಿಲ್ಲ, ಅಪ್ರಥಿಮ ಅಂದದ ವಿಧ್ಯಾಧರ-ಸ್ತ್ರೀ ಕಂಡಳು ಹನುಮಗೆ ಆದರೆ ಸೀತೆ ಕಾಣಿಸಲಿಲ್ಲ, ಆಕರ್ಷಣೀಯ ಪ್ರುಷ್ಠಗಳ ನಾಗಾ ಸುಂದರಿ ಕಂಡಳು ಪೂರ್ಣ ಚಂದ್ರನಂತೆ ಹನುಮಗೆ ಆದರೆ ಸೀತೆ ಕಾಣಿಸಲಿಲ್ಲ; ನಾಗಾ, ಗಂಧರ್ವ, ವಿಧ್ಯಾಧರ, ರಾಕ್ಷಸ ಸುಂದರಿಯರು ಕಂಡರು ಹನುಮಗೆ ಆದರೆ ತ್ರಿಲೋಕ ಸುಂದರಿ ಸೀತೆ ಕಾಣಲಿಲ್ಲ; ಸಮುದ್ರ ದಾಟಿ ಬಂದು ಸೀತೆ ಹುಡುಕಿದ ಪ್ರಯತ್ನ ಪದೇ ಪದೇ ವಿಫಲಗೊಂದ್ದರಿಂದ ಹನುಮಾನನು ಖಿನ್ನತೆಗೊಳಗಾದನು, ಆದರೆ ಪ್ರಯತ್ನ ಬಿಡಲಿಲ್ಲ. ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ರಾವಣನ ಅಂತಪುರದಲ್ಲಿ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳಲ್ಲಿ ಸೀತೆಯು ಕಾಣದೇ ಇದ್ದಾಗ ಹನುಮಾನನು ಮನಸ್ಸಿನಲ್ಲಿ ಹತಾಶಯ ಭಾವಣೆ ತಂದುಕೊಂಡು ಖಿನ್ನತೆಗೆ ಒಳಗಾದ ಪ್ರಸಂಗ ವಿವರಿಸುವದರೊಂದಿಗೆ (ಅ) ಸೀತೆ ಹತಳಾಗಿರಬೇಕು, (ಬ) ಕಿಷ್ಕಿಂದಕ್ಕೆ ಮರಳಿ ವಾನರ ವೀರರ ಪ್ರಶ್ನೆಗಳಿಗೆ ಉತ್ತರಿಸುವ ದುಗುಡು (ಕ) ಆತ್ಮವಿಶ್ವಾಸ ಪ್ರಯತ್ನದಿಂದ ಫಲ ಪಡೆಯುವ ವಿಶ್ವಾಸ ಭಾವದ ಜಾಗೃತಿ ಮತ್ತ ಆತ್ಮ-ವಿಶ್ವಾಸದ ಮಹತ್ವ, (ಡ) ನಿರಾಶೆ ತೊರೆದು ಪುನಃ ಸೀತೆಯನ್ನು ಹುಡುಕುವ ಹನುಮಾನನ ಪ್ರಯತ್ನ ಮತ್ತು (ಇ) ನಾಗಾ, ಗಂಧರ್ವ, ವಿಧ್ಯಾಧರ, ರಾಕ್ಷಸ ಸುಂದರಿಯರ ವರ್ಣನೆಗಳನ್ನು ಕಾವ್ಯಾಲಂಕಾರಯುಕ್ತವಾಗಿ ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ