ಸುಂದರಕಾಂಡ ರಾಮಾಯಣ ಭಾಗ-73

By admin

ವೀಕ್ಷಿಸುತ್ತ ಸೀತೆಯನು ಮಾರ್ಗ ಮಾರ್ಗಗಳಲಿI
ಹುಡುಕುತ ಕುಳಿತ ಹನುಮ ವನದಲಿ, II
ಸಂತಾನ ವೃಕ್ಷ ಸಮೂಹ ಶೋಭಿತI
ಪರಿಮಳ ರಸ ಶೋಭಿತ, II
ಎಲ್ಲ ವಿಧದಲಿ ನಂದನವನ ಸಮ ವನI
ಪಕ್ಷಿ ಪ್ರಾಣಿ ಕಟ್ಟಡ ಮಧ್ಯೆ ಕೋಗಿಲಗಳ ಕೂಹುಕಾರ, II
ಕಮಲಗಳಿಂದ ಶೋಭಿತ ಸುವರ್ಣ ಹೊಂಡಗಳು,I
ಅಲಂಕೃತ ಆಸನ,ಹಾಸಿಗೆ,ಬಹು ಗೃಹಗಳು,II
ಸರ್ವ-ಋತು ಪುಷ್ಪ ಫಲ ವೃಕ್ಷಗಳ ರಮ್ಯI
ಸೂರ್ಯೊದಯ ಪ್ರಭೆ ಹೆಚ್ಚಿಸಿತು ಅಂದ, II
ಹೊಂಗಿರಣದಲಿ ಪುಷ್ಪಭರಿತ ಅಶೋಕ ವೃಕ್ಷ ಭವ್ಯತೆ,I
ಶತ ಶತ ಪಕ್ಷಿಗಳು ಕುಕ್ಕುತಿದ್ದವು ನಿಷ್ಪತ್ರ ಶಾಖೆ ಪದೇ ಪದೇ, II
ಬೆಟ್ಟದಾವರೆ, ಮುತ್ತುಗದಂತೆ ಅಡಿದಿ ಮುಡಿವರೆಗೆ ಅಶೋಕವೃಕ್ಷ ಶಾಖೆಗಳುI
ನಿಷ್ಪತ್ರ ಹೂ-ಗೊಚ್ಚಲ ಭೂಮಿಗೆ ಬಾಗಿದ್ದವು, II
ಸೂರ್ಯರಷ್ಮಿ ಹೆಚ್ಚಿಸಿತು ಪುನ್ನಾಗ , ಸಪ್ತಪರ್ಣ , ಚಂಪಕ,I
ಉದ್ದಲಕ ವೃಕ್ಷಗಳ ಪುಷ್ಪಾಲಂಕಾರದ ರಮ್ಯತೆ, II
ಕೆಲವು ಹೊನ್ನದಂತೆ, ಕೆಲವು ಅಗ್ನಿಯಂತೆ ಕೆಲವು ನೀಲಮಣಿ ಯಂತೆ I
ಹೊಳೆದವು ಸಹಸ್ರ ಸಹಸ್ರ ಅಶೋಕವೃಕ್ಷಗಳು,II
ನಂದನ , ಚೈತ್ರರಥ ಸ್ವರ್ಗವನ ರಮ್ಯತೆI
ಮೀರಿದ ಅಶೋಕವನ, ಅನಂತ ದಿವ್ಯ ರಮ್ಯತೆ,II
ಮಧು ಪರಿಮಳ ಸರ್ವ-ಋತು ಪುಷ್ಪಗಳ ಹಾಸಿಗೆ,I
ಪುಷ್ಪರತ್ನಗಳ ಸಾಗರದ ರಮ್ಯ ನೋಟ, II
ಮೃಗ-ಹಿಂಡು ಹಕ್ಕಿಗಳ ಚಿಲಿಪಿಲಿ ನಿನಾದI
ಸುಗಂಧ ಪರಿಮಳ ಪರಿಸರ, ಆತ್ಮಾನಂದ, II
ಕಂಡನು ಹನುಮ ಅಶೋಕವನ ಮಧ್ಯೆ ಹತ್ತಿರದಲಿI
ಕೈಲಾಸ-ಪರ್ವತದಂತಹ ಭವ್ಯ ಕಟ್ಟಡ, II
ಸಹಸ್ರ ಸ್ತಂಭಗಳ,ವಜೃ-ಸೋಪಾನಗಳ,ಹವಳ ನೆಲಹಾಸಿಗೆI
ಗಗನಚುಂಬಿ ಎತ್ತರದ ಕಟ್ಟಡ ರಮ್ಯ ದೃಶ್ಯ, II
ಕೊಳಕು ಉಡುಪು, ಬಡಕಲ ದೇಹ, ದುಃಖಪೀಡಿತI
ರಾಕ್ಷಸಿಯರ ಮಧ್ಯೆ ಬಿದಿಗೆ ಚಂದ್ರನಂತೆ ಕಂಡಳು ಸ್ತ್ರೀ, II
ಜ್ವಾಲೆನಾಲಗಿಯಂತೆ ನಿಧಾನ ಹೊರಹೊಮ್ಮುವI
ಹೊಗೆ ಆವರಿಸಿದ ಕಿರಣದಂತೆ ಕಂಡಳು,ಸ್ತ್ರೀ II
ಮುದುಡಿದ ಹಳದಿ ಬಣ್ಣದ ಉಡುಗೆ,ಕಮಲ, I
ಹೂಗಳ ಶೃಂಗಾರವಿಲ್ಲದ ಮಲೀನ ಉಡುಗೆ ಚಲುವೆ, II
ದುಃಖ ಹಿಂಸೆಗೆ ಸವಿದ ಚಲುವೆI
ಕಂಡಳು ಮಂಗಳಗ್ರಹ ಹತ್ತಿಕ್ಕೆ ರೋಹಿನಿ ನಕ್ಷತ್ರದಂತೆ, II
ಆಹಾರ ನಿದ್ರೆಯಿಲ್ಲದೇ ಸೊರಗಿದI
ಸ್ತ್ರೀ ಸದಾ ಚಿಂತೆಯಲ್ಲಿ ಮಗ್ನ ದೃಶ್ಯ, II
ತನ್ನವರಲ್ಲದ ರಾಕ್ಷಸಿರು ಮಧ್ಯೆ ಕಂಡಳುI
ಬೇಟೆನಾಯಿ ಹಿಂಡಿನಲಿ ಸಿಕ್ಕ ಹೆಣ್ಣು ಜಿಂಕೆಯಂತೆ, II
ಬೇಕು, ಬಿಲದ ಆಶ್ರಯ ಕಪ್ಪು ನಾಗಕ್ಕೆ I
ಮಳೆಗಾಲದ ವಿಕೋಪಗಳಿಂದ ವೃಕ್ಷಗಳಿಗೆ ರಕ್ಷಣೆಯಂತೆ, II
ವಿಶಾಲಕ್ಷಿ, ಸೊರಗಿದ ಮೈ, ಮಲೀನ ಉಡುಪುI
ದುಃಖಿತ ಸ್ತ್ರೀ ಸೀತೆಯಾಗಿರಬೇಕು,ತರ್ಕಿಸಿದ ಹನುಮ, II
ಕಾಮತೃಷೆ ತಿರಿಸಿಕೊಳ್ಳಲು ರಾಕ್ಷಸ ಅಪಹರಿಸಿದ ಸ್ತ್ರಿI
ಸ್ಥಿತಿಗತಿ ರೂಪ ಸಾಮ್ಯತೆ ಹೊಂದಿರುವಳೀ ಸ್ತ್ರೀ, II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಒಂದೆಡೆ ಅಶೋಕವನದ ಸುಂದರ್ಯ ಸಿರಿ ಮತ್ತು ಅದರ ಪರಿಸರ ರಮ್ಯತೆಯನ್ನು ಮನಬಿಚ್ಚಿ ಬಣ್ಣಿಸಿದರೆ ಇನ್ನೊಂದೆಡೆ ಸೀತೆಯ ಒಳ ಹೊರ ಸುಂದರ್ಯಗಳನ್ನು ಬಣ್ಣಿಸಿದ ವ ಪರಿಚಯಿಸಿದ ಪ್ರಮುಖಾಂಶಗಳು ಇಂತಿವೆ: (1) ಅಶೋಕವನದ ಸಿರಿ: ಅಶೋಕ ವನದಲಿ ಅಶೋಕವೃಕ್ಷದಲ್ಲಿ ಹೂ-ಎಳೆಗಳ ಮರೆಯಲ್ಲ್ಲಿವೀಕ್ಷಸಿಸುತ ಸೀತೆಯನು ಮಾರ್ಗ ಮಾರ್ಗಗಳಲಿ ಹುಡುಕುತ ಹನುಮ ಕುಳಿತನು; ಸಂತಾನವೃಕ್ಷ (ಕಲ್ಪವೃಕ್ಷ)ಗಳ ಸಮೂಹ ಶೋಭಿತ ಅವುಗಳಿಂದ ಸೂಸಿ ಬರುವ ಪರಿಮಳ ರಸ ಶೋಭಿತ ಅಶೋಕವನವು ಎಲ್ಲ ವಿಧದಲಿ ನಂದನವನ(ಇಂದ್ರನ ಪವನ)ಕ್ಕೆ ಸಮವಾಗಿತ್ತು; ಪಕ್ಷಿ ಪ್ರಾಣಿ ಕಟ್ಟಡ, ಅವುಗಳ ಮಧ್ಯೆ ಕೋಗಿಲಗಳ ಕೂಹುಕಾರ, ಕಮಲಗಳಿಂದ ಶೋಭಿತ ಸುವರ್ಣ ಹೊಂಡಗಳು, ಅಲಂಕೃತ ಆಸನಗಳು, ಹಾಸಿಗೆ, ಬಹು ಗೃಹಗಳು, ಸರ್ವ-ಋತು ಪುಷ್ಪ ಫಲ ವೃಕ್ಷಗಳ ರಮ್ಯ ನೋಟವು ಅಶೋಕವನದ ಸೌಂದರ್ಯಸಿರಿಯಾಗಿತ್ತು ಹಾಗು ಸೂರ್ಯೊದಯ ಪ್ರಭೆಯು ಅದರ ಅಂದವನ್ನು ಹೆಚ್ಚಿಸಿತ್ತು, ಹೊಂಗಿರಣದಲಿ ಪುಷ್ಪಭರಿತ ಅಶೋಕ ವೃಕ್ಷ ಭವ್ಯತೆ ವರ್ಣನಾತೀತವಾಗಿತ್ತು, ಮರಗಳ ನಿಷ್ಪತ್ರ (ಎಲೆಗಳು ಉದುರಿದ) ಶಾಖೆ (ಕೊಂಬೆ)ಗಳನ್ನು ಶತ ಶತ ಪಕ್ಷಿಗಳು ಪದೇ ಪದೇ ಕುಕ್ಕುತಿದ್ದವು, ಬೆಟ್ಟದಾವರೆ ಮತ್ತು ಮುತ್ತುಗ ಮರದಂತೆ ಅಡಿಯಿಂದ ಮುಡಿವರೆಗೆ ಅಶೋಕವೃಕ್ಷದ ಶಾಖೆಗಳು ನಿಷ್ಪತ್ರ ಹೂ-ಗೊಚ್ಚಲಗಳಿಂದ ಭೂಮಿಗೆ ಬಾಗಿದ್ದವು, ಸೂರ್ಯರಷ್ಮಿಯು ಪುನ್ನಾಗ (ನಾಗಕೇಸರಿ ವೃಕ್ಷ), ಸಪ್ತಪರ್ಣ , ಚಂಪಕ, ಉದ್ದಲಕ ವೃಕ್ಷಗಳ ಪುಷ್ಪಾಲಂಕಾರದ ರಮ್ಯತೆಯನ್ನು ಹೆಚ್ಚಿಸಿತು; ಸಹಸ್ರ ಸಹಸ್ರ ಅಶೋಕವೃಕ್ಷಗಳಲ್ಲಿ ಕೆಲವು ಹೊನ್ನದಂತೆ, ಕೆಲವು ಅಗ್ನಿಯಂತೆ ಕೆಲವು ನೀಲಮಣಿಯಂತೆ ಹೊಳೆದವು, ಅಶೋಕವನದ ಅನಂತ ದಿವ್ಯ ರಮ್ಯತೆಯು ನಂದನ (ಇಂದ್ರನ ಉಪವನವನ), ಚೈತ್ರರಥ(ಕುಬೇರನ ಉಪವನ) ಮತ್ತು ಸ್ವರ್ಗ-ವನ ರಮ್ಯತೆಯನ್ನು ಮೀರಿತ್ತು. (2)ಸೋತ ದೇಹದ ಚಲುವೆ: ಹನುಮನು ಸೀತೆಯನ್ನು ಕಂಡ ಪರಿಯನ್ನು ಆದಿಕವಿ ಹೀಗೆ ಬಣ್ಣಿಸಿರುವರು “ರಾಕ್ಷಸಿಯರ ಮಧ್ಯದಲ್ಲಿ ಕೊಳಕು ಉಡುಪಿನ, ಬಡಕಲ ದೇಹದ, ದುಃಖಪೀಡಿತ, ಬಿದಿಗೆ ಚಂದ್ರನಂತೆ, ಜ್ವಾಲೆನಾಲಗಿಯಂತೆ, ನಿಧಾನ ಹೊರಹೊಮ್ಮುವ ಹೊಗೆ ಆವರಿಸಿದ ಕಿರಣದಂತೆ, ಮುದುಡಿದ ಹಳದಿ ಬಣ್ಣದ ಉಡುಗೆಯಲಿ ಕಮಲ ಹೂಗಳ ಶೃಂಗಾರವಿಲ್ಲದ ಮಲೀನ ಉಡುಗೆ ಚಲುವೆ, ದುಃಖ ಹಿಂಸೆಗೆ ಸವಿದ ಚಲುವೆ, ಮಂಗಳಗ್ರಹ ಹತ್ತಿರಕ್ಕಿದ್ದ ರೋಹಿನಿ ನಕ್ಷತ್ರದಂತೆ, ಆಹಾರ ನಿದ್ರೆಯಿಲ್ಲದೇ ಸೊರಗಿದ ಚಲುವೆ, ಸದಾ ಚಿಂತೆಯಲ್ಲಿನ ರಾಮನ ಮಗ್ನ, ತನ್ನವರಲ್ಲದ ರಾಕ್ಷಸಿರು ಮಧ್ಯೆ” ಸೋತ ದೇಹದ ಸ್ತ್ರೀಯಂತೆ ಸೀತೆ ಕಂಡಳು. (3) ಅಸಹಾಯಕ ಅಬಲೆ: ಹನುಮನು ಸೀತೆಯನ್ನು ಅಸಹಾಯಕ ಸ್ಥಿತಿಯಲ್ಲಿ ಕಂಡದ್ದನ್ನು ಆದಿಕವಿ ಹೀಗೆ ನಿರೂಪಿಸಿರುವರು “ ಬೇಟೆನಾಯಿ ಹಿಂಡಿನಲಿ ಸಿಕ್ಕ ಹೆಣ್ಣು ಜಿಂಕೆಯಂತೆ, ಬಿಲದ ಆಶ್ರಯ ಬಯಸುವ ಕಪ್ಪು ನಾಗದಂತೆ, ಮಳೆಗಾಲದ ವಿಕೋಪಗಳಿಂದ ವೃಕ್ಷಗಳಿಗೆ ರಕ್ಷಣೆ ಅಗತ್ಯದಂತೆ ಸೀತೆಗೆ ರಕ್ಷಣೆ ಅಗತ್ಯವಿದ್ದಂತೆ ಕಂಡಿತು”; ವಿಶಾಲಕ್ಷಿ, ಸೊರಗಿದ ಮೈ, ಮಲೀನ ಉಡುಪಿನ ಆ ದುಃಖಿತ ಸ್ತ್ರೀ ಸೀತೆಯಾಗಿರಬೇಕು ಹನುಮಾನ ತರ್ಕಿಸಿದನು; ತನ್ನ ಕಾಮತೃಷೆ ತಿರಿಸಿಕೊಳ್ಳಲು ಆ ರಾಕ್ಷಸ ರಾವಣ ಅಪಹರಿಸಿದ ಸೀತೆಯ ಸ್ಥಿತಿಗತಿ ರೂಪ ಸಾಮ್ಯತೆ ಆ ಸ್ತ್ರೀಯನ್ನು ಹೊಲುತ್ತದೆ ಎಂದು ಹನುಮಾನನು ತರ್ಕಿಸಿದನ್ನು ಆದಿಕವಿ ವಾಲ್ಮೀಕಿಯು ಸೀತೆಯ ಮೂಲಕ ಪತಿಯಿಂದ ದೂರವಿದ್ದ ಸ್ತ್ರೀಯ ಮನೋಸ್ಥಿತಿಯನ್ನುವಿವರಿಸಿರುವರು.
.ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ