ಸುಂದರ
ಲೋಕಕ್ಕೆ ಪೂರ್ಣಚಂದ್ರ ಪ್ರೀಯನಂತೆ ಸನ್ಯಾಸಿ ಬದುಕಿನ ಸ್ತ್ರೀ I
ಕೂಡ್ರುವಳು ಬರಿ ನೆಲದ ಮೇಲೆ, II
ದುಃಖದುಸಿರು ಬಿಡುತಿದ್ದಳು ಪದೇ ಪದೇI
ಭಯದಲಿ ಸರ್ಪ ಬುಸಗುಡುವಂತೆ, ||
ಹೊಗೆ ತುಂಬಿದ ಅಗ್ನಿನಾಲಿಗೆ, ಸಂದೇಹದಿ ದೂರI
ಬಿಸಾಕಿದ ಕೋಶದಂತೆ ಸ್ತ್ರೀ ಕಂಡಳು ಹನುಮಗೆ,II
ವಿಚಲಿತ ನಂಬಿಕೆ, ಸೋತ ಆಶೆ, ಕಠಿಣ ವಿಜಯ,I
ಕಲ್ಮಷ ಮನದಂತೆ ಸ್ತ್ರೀ ಕಂಡಳು ಹನುಮಗೆ, ಹುಸಿ-ಬಿಕ್ಕಟ್ಟಗೆII
ಸೋತ ಖ್ಯಾತಿ, ರಾಮನಿಗಾದ ತೊಂದರೆ ಪೀಡನೆ,I
ರಾವಣದಿ ಅಪಹೃತದ ನೋವುದಿ ಕೊರಗಿದ ಸ್ತ್ರೀಯೇ? II
ಸುರಿವ ಕಣ್ಣಿರು, ವಕ್ರ ಕಪ್ಪು ಹುಬ್ಬ, ಕಳೆಹೀನ ಮುಖ, I
ಬಾಚದ ಕೇಶ, ಅತ್ತಿತ್ತ ಸಹಾಯ ಅರಿಸುವ, ಪದೇ ಪದೇ II
ಉಸಿರು ಬಿಡುವ ಸ್ತ್ರೀ, ಪದೇ ಪದೇ ವೀಕ್ಷಿಸಿದ, I
ತಿಳಿಯಲು ಹವಣಿಸಿದ ಮನದ ಸಂದೇಹ ನಿವಾರಿಸುತ ಹನುಮ, II
ಸಂಸ್ಕೃತಿಹೀನ ವಿಭಿನ್ನರ್ಥದ ವಾಕ್ಯದಂತೆI
ಅನಲಂಕೃತ ದುಃಖಿತ ಸೀತೆ ಕಂಡಳು ಹನುಮಗೆ, II
ಗುರುತಿಸಲು ಸೀತೆಯನು ಹನುಮ ನೆನೆಪಿಸಿಕೊಂಡI
ರಾಮ ಹೇಳಿದ ವಿವರಣೆ ಮಾನದಂಡಗಳ,II
ರಾಮನ ನುಡಿಯಂತೆ, ಅಂಗಗಳಾಕರ್ಷಣೆ ಹೆಚ್ಚಿಸುವI
ಆಭರಣಗಳ ನೋಡಿದ ಸೀತೆ ಅಂಗಗಳ ಮೇಲೆ, II
ಕಿವಿ-ಉಂಗರ, ವಜ್ರಗಳ ಬಾಜುಬಂಧ, ಬಳೆI
ಮೈ ಮೇಲೆ ಅವುಗಳ ಕಪ್ಪು ಕಲೆ, II
ನಿಸ್ಸಂದೇಹ, ಎಲ್ಲವೂ ಇವೆ ರಾಮ ಹೇಳಿದಂತೆ,I
ಸವಕಳಿಯಾದವು ನಾ ಕಾಣೆ, ಇವಳೇ ಸೀತೆ, II
ಚಿನ್ನದ ತಗಡಿನಂತೆ ಹೊಳೆವ ಮೇಲುಡಿಗೆI
ಹೋಲುವದು ವಾನರರು ಪಡೆದ ಕುರುಹಿನಂತೆ, II
ಸೀತೆ ಭೂಮಿಗೆಸದ ಆಭರಣಗಳಂತಹ ಆಭರಣಗಳಿವೆI
ಅವಳ ಮೈಮೇಲೆ, ಅವುಗಳ ನಿನಾದವೂ ಒಂದೆ, II
ಸೀತೆ ಏಸೆದ ಬಟ್ಟೆ ತುಂಡು ಹೋಲುವದುI
ಅವಳ ಮಾಸಿದ ಅದೇ ಬಣ್ಣದ ಉಡುಪು, II
ಸದಾ ಪವಿತ್ರ, ರಾಮನ ಹೃದಯಿವಾಸಿI
ಸೀತೆಯೇ ಈ ಸುವರ್ಣದ ಸ್ತ್ರೀ, II
ಕರುಣೆ, ದಯೆ,ದುಃಖ, ಪ್ರೀತಿ ನಾಲ್ಕು ವಿಧI
ಹಿಂಸೆ ಬಳಲಿದ ರಾಮನ ಸೀತೆ, ಇವಳೆ, II
ರಾಮ ವರ್ಣಿಸಿದಂತೆ ಎಲ್ಲ ಅಂಗಗಳ ಮೈಕಟ್ಟು,I
ಕಪ್ಪು-ಕಣ್ಣು ನೋಟ, ಹೋಲಿಕೆಗಳ ಸ್ತ್ರೀ,ಸೀತೆ ಇವಳೆ,II
ರಾಮ ಸೀತೆ ಜೀವಂತವಿರಲು ಇಂದು ಕಾರಣ ಇರುವದು I
ರಾಮನ ಹೃದಯದಲಿ ಸೀತೆ, ಸೀತೆ ಹೃದಯದಲಿ ರಾಮ, II
ನೆನಪಿಸಿಕೊಂಡ ರಾಮನ ಹೃದಯಿದಲಿ ಹನುಮI
ಸಂತೋಷಪಟ್ಟ ಸೀತೆಯನು ಕಂಡ ಹನುಮ.II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಹನುಮಾನನು ಅಶೋಕವನದಲ್ಲಿ ಕಂಡ ಅಸಹಾಯಕ ಸ್ತ್ರೀಯು ಸೀತೆ ಆಗಿರಬೇಕೆಂದು ಊಹಿಸಿದನ್ನು ವಿವರಿಸಿರುವರು, ಅದರ ಮುಖ್ಯಾಂಶಗಳು ಇಂತಿವೆ:(1) ಸನ್ಯಾಸಿ ಬುದುಕು ಸಂಹಿತೆ ಪಾಲಕಿ: ಹನುಮನು ಸೀತೆಯನ್ನು ಸಂನ್ಯಾಸಿ ಸಂಹಿತೆ ಪಾಲಕಿಯಂತೆ ಕಂಡದ್ದನ್ನು ಆದಿಕವಿ ಹೀಗೆ ಮಂಡಿಸಿರುವರು “ ಲೋಕಕ್ಕೆ ಪೂರ್ಣಚಂದ್ರ ಪ್ರೀಯವಿದ್ದಂತೆ ಸನ್ಯಾಸಿ ಬದುಕಿಗೆ ಬರಿ ನೆಲದ ಮೇಲೆ ಕೂಡ್ರುವದು ಪ್ರೀಯ”. ಸಂನ್ಯಾಸಿಗಳು ಸಹಜ, ಸರಳ ಜೀವನ ಬಯಸುವದನ್ನು ಆದಿಕವಿ ಈ ಪ್ರಸಂಗ ಮೂಲಕ ನಿವೇದಿಸಿರುವರು. ಇಂದಿನ ಯುಗದ ಸನ್ಯಾಸಿ,ಸ್ವಾಮೀಜಿಗಳು ಐಶ್ವರ್ಯ ಕಾರುಗಳಲ್ಲಿ ಓಡಾಡುವರು, ಹವಾನಿಯಂತ್ರಿತ ಕೊಠಡಿ, ಮೆತ್ತನ ಹಾಸಿಗೆ ಮತ್ತುಕುರ್ಚಿಗಳನ್ನು ಬಳಿಸುವರು, ಅವರಿಗೆ ಈ ಸಂಹಿತೆ ಗಳು ಅನ್ವಯಿಸುವುದಿಲ್ಲ ಏನೋ! (2) ಭಾವಾರ್ಥ ಚಲುವೆ: ಹನುಮನು ಕಂಡ ಸೀತೆಯ ಭಾವನಾ-ಒಳ ಸೌಂದರ್ಯವನ್ನು ಆದಿಕವಿ ನಿರೂಪಿಸಿದ್ದು ಹೀಗೆ “ ವಿಚಲಿತ ನಂಬಿಕೆ, ಸೋತ ಆಶೆ, ಕಠಿಣ ವಿಜಯ, ಕಲ್ಮಷ ಮನದಂತೆ, ಹುಸಿ-ಬಿಕ್ಕಟ್ಟಗೆ ಸೋತ ಖ್ಯಾತಿ, ರಾಮನಿಗಾದ ತೊಂದರೆಗಳ ಪೀಡನೆ, ರಾವಣನಿಂದ ಅಪಹೃತದ ನೋವುಗಳಿಂದ ಕೊರಗಿದ ಸೀತೆ”. ಶಬ್ದ ಭಾವನೆಗಳನ್ನು ಕುಣಿಸಿದ ಆದಿಕವಿಯ ಚಿತ್ರಕವಿತ್ವ ಸಿರಿತನವು ಇಲ್ಲಿ ಹೊಳೆಯುವದು. (3) ವಿಭಿನ್ನಾರ್ಥದ ವಾಕ್ಯ: ಹನುಮಾನನಿಗೆ ಅನಲಂಕೃತ ದುಃಖಿತ ಸೀತೆಯು “ ಸಂಸ್ಕೃತಿಹೀನ ವಿಭಿನ್ನಾರ್ಥದ ವಾಕ್ಯ”ದಂತೆ ಕಂಡಳು, ಇಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯನ್ನು ಉಪಮಾ ಉಪಮೆ ಅಲಂಕಾರಗಳಿಲ್ಲದ ವಿಭಿನ್ನಾರ್ಥ ನೀಡಬಲ್ಲ ವಾಕ್ಯಕ್ಕೆ ಹೊಲಿಸುವ ಮೂಲಕ ವ್ಯಾಕರಣ-ಶಾಸ್ತ್ರದ ಪರಿಚಯ ನೀಡುವ ಮೂಲಕ “ವಾಕ್ಯ” ಭಾಷ್ಯ ನೀಡಿರುವರು. (4) ಗುರುತಿನ ಮಾನದಂಡ: ರಾಮನು ಸೀತೆಯನು ಗುರುತಿಸಲು ನೀಡಿದ ವರ್ಣನೆ ಅವಳ ಗುರುತಿನ ಮಾನದಂಡಗಳನ್ನು ಆದಿಕವಿ ನಿರೂಪಿಸಿದ್ದು ಹೀಗೆ “ಅಂಗಗಳಾಕರ್ಷಣೆ ಹೆಚ್ಚಿಸುವ ಕಿವಿ-ಉಂಗರ, ವಜ್ರಗಳ ಬಾಜುಬಂಧ, ಕೈ-ಬಳೆ ಆಭರಣಗಳು, ಮೈ ಮೇಲಿನ ಆ ಆಭರಣಗಳ ಕಪ್ಪು ಕಲೆಗಳು, ಸರ್ವಾಂಗ ಮೈಕಟ್ಟು, ಕಪ್ಪು-ಕಣ್ಣು ನೋಟ, ವಕ್ರ-ಹುಬ್ಬಗಳು” ಆದರೆ ಹನುಮಾನ ಕಂಡ ಮಾನದಂಡ “ಸೀತೆ ಹೃದಯದಲಿ ರಾಮ ಇರುವದು”; ರಾಮ ಮತ್ತು ಸೀತೆ ಅಂದು ಜೀವಂತವಿರಲು ಅವರ ಈ ಅನ್ಯೋನ್ಯತೆಯೇ ಕಾರಣವೆಂದು ಮಾಡಿಕೊಂಡು ಹನುಮನ ಮನವರಿಕೆ,ವಿಶೇಷಮಾನದಂಡ. ಒಟ್ಟಿನಲ್ಲಿ, ರಾಮನು ಸೀತೆಯನು ಗುರುತಿಸಲು ನೀಡಿದ ವರ್ಣನೆಯಂತೆ ಆ ಸ್ತ್ರೀಯ ಎಲ್ಲ ಅಂಗಗಳ ಮೈಕಟ್ಟು, ಕಪ್ಪು-ಕಣ್ಣು ನೋಟ, ಹೋಲಿಕೆಗಳು ಸೀತೆಯನ್ನು ಹೋಲುತಿದ್ದವು; ರಾಮನ ಹೃದಯದಲಿ ಸೀತೆ, ಸೀತೆ ಹೃದಯದಲಿ ರಾಮ ಇರುವದು ಕಂಡ ಹನುಮಾನ ರಾಮ ಮತ್ತು ಸೀತೆ ಇಂದು ಜೀವಂತವಿರಲು ಅವರ ಈ ಅನ್ಯೋನ್ಯತೆಯೇ ಕಾರಣವೆಂದು ಮನವರಿಕೆ ಮಾಡಿಕೊಂಡು ರಾಮನನ್ನು ಹೃದಯಿದಲಿ ನೆನಪಿಸಿಕೊಂಡನು ಮತ್ತು ಸೀತೆಯನು ಕಂಡು ಸಂತೋಷಪಟ್ಟನು. ಆದಿಕವಿ ವಾಲ್ಮೀಕಿಯು ಈ ಮೂಲಕ ರಾಮ ಮತ್ತು ಸೀತೆ ಅವರ ನಡುವೆ ಇದ್ದ ಅನ್ಯೋನ್ಯತೆ ಮತ್ತು ಪತಿವ್ರತೆ ಸ್ತ್ರೀಯ ಕಠೋರತೆಯನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
