ಕಂಡನು ಹನುಮ ಗಿರಿಯಿಂದ ಧುಮುಕುವ ನದಿI
ಧುಮುಕುತಿತ್ತು ಪ್ರೇಯಸಿಯಂತೆ ಪ್ರೀತಮನ ಮಡಿಲಲಿ, II
ನೀರಿಗೆ ಬಿದ್ದ ಗಿಡಗಳು ಕಂಡವು ಹನುಮಗೆI
ಪ್ರೀತಮ ರಕ್ಷಿಸಿದಂತೆ ಕೋಪಿತ ಪ್ರೆಯಸಿಯನು,II
ಮರಳಿ ಹಿಂದಕ್ಕೆ ಹರಿವ ನದಿ ಪುನಃ ಕಂಡಿತು ಹನುಮಗೆI
ಸಂಧಾನ ಬಳಿಕ ಪ್ರೀತಮನ ಸೇರಿದ ಪ್ರಯಸಿಯಂತೆ,II
ಕಂಡನು ಹನುಮ ಕೃತ್ರಿಮ ಹೊಂಡ, ಗಿಡಗಳ ಮಧ್ಯೆ I
ಅಲಂಕೃತ ವಿಶ್ವಕರ್ಮ ನಿರ್ಮಿತ ಸುಂದರ ಕಟ್ಟಡ, ಪರ್ವತ ಬಳಿ, II
ಸಜ್ಜಗೊಂದಿದ್ದವು ಹೂ ಹಣ್ಣುಧರಿತ ಪ್ರತಿ ಮರI
ಹೊಂಬಣ್ಣ ಛತ್ರ, ಸಣ್ಣ ದೊಡ್ಡ ವೇದಿಕೆಗಳಿಂದ, II
ದಟ್ಟ ಎಲೆ ಬಳ್ಳಿಗಳಿಂದ ಮುತ್ತಿದ ಹೊಂಬಣ್ಣ ಶಿಂಶಪ ವೃಕ್ಷ,I
ಅದರ ಸುತ್ತ ಚಿನ್ನದ ವೇದಿಕೆ ಕಂಡನು ಮಹಾವಾನರ, II
“ಸೂರ್ಯನಿಂದ ಹೊಂಬಣ್ಣ ಲೇಪಿತ ಮೇರು ಪರ್ವತ,I
ವೃಕ್ಷಗಳಂತೆ ಹೊಂಬಣ್ಣವರ್ಣನಾದೆ ನಾನೂ”ನೆಂದ ಹನುಮ,II
ಕೇಳಿ ಬರುತಿತ್ತು ಬೀಸುಗಾಳಿಗೆ ಹೊಳೆವ ಗೆಜ್ಜೆ ನಿನಾದI
ಶಿಂಶಪ ವ ಮರಗಳಿಂದ, ವಿಷ್ಮಯಗೊಂಡ ಹನುಮ,II
ಬಲಿತ ರೆಂಬೆ ಕೊಂಬೆ ಎಲೆಗಳ ಹೂಗಳ ಅಂದದ ಶಿಂಶಪವೃಕ್ಷI
ಎರಿದ ಹನುಮ ತನ್ನ ಬಲಬಾಹುಗಳ ಬಳಸಿ, II
ಹನುಮ ನುಡಿದ “ ರಾಮ-ದರ್ಶನ ಪ್ರೀಯ ಸೀತೆI
ಅತ್ತಿತ್ತ ದುಃಖದಿ ಸುಳಿದಾಡುವದನು ಇಲ್ಲಿಂದ, II
ದುಷ್ಟ ರಾವಣನ ಅಶೋಕವನ ಅದೆಷ್ಟು ಸುಂದರI
ಚಂಪಕ,ವಕುಲ, ಸ್ರೀಗಂಧ ವೃಕ್ಷಗಳ ಅಂದದ!II
ಹಕ್ಕಿಗಳಾಡುವ ಜಲಹೊಂಡ ಅದೆಷ್ಟು ಸುಂದರI
ರಾಮನ ಪತ್ನಿ ಸೀತೆ ಬರುವಳೀ ಹೊಂಡಕ್ಕೆ,II
ರಾಮನ ಪವಿತ್ರ ಪತ್ನಿ, ಹೃದಯಶ್ರೀ,I
ಅರಣ್ಯ ಅನುಭವಿ ಜಾನಕಿ ಬಂದೇ ಬರುವಳು,II
ಮೃಗಾಕ್ಷಿ, ರಾಮ-ಧ್ಯಾನಿ ಸೀತೆI
ಈ ವನಕ್ಕೆ ಬಂದೇ ಬರುವಳು, II
ರಾಮನ ನೆನಪುಗಳಿಂದ ಹಿಂಸಿಸಿದ ಸುಂದರಾಕ್ಷಿI
ಸದಾ ವನ ಬಯಸುವ ದೇವತೆ ಬಂದೇ ಬರುವಳು, II
ಚಿರಯುವತಿ ಸೀತೆ ಮಾಡುವಳು ನಿತ್ಯ ಸಂಧ್ಯಾವಂದನೆI
ಬಂದೇ ಬರುವಳು ನದಿಗೆ ಮಾಡಲು ಸಂಧ್ಯಾವಂದನೆ, II
ಪತಿನಿಷ್ಠೆ, ರಾಮಪ್ರೀಯ,ಸದ್ಗುಣಿ ಸೀತೆಗಾಗಿI
ಅಶೋಕವನ ತಾಣ ಯೋಗ್ಯ” II
ಅಡಿಗಿಕೊಂಡ ಹೂ ಎಲೆಗಳ ಮಧ್ಯೆI
ಎಲ್ಲ ಕಡೆ ನೋಡುತ ಕುಳಿತ ಶಿಂಶಪದಲಿ ಹನುಮ. II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಅಶೋಕವನದ ಸೊಬಗು ಮತ್ತು ಹನಮಾನನ ಪುಲಕಿತ ಮನೋದೆಸೆಗಳನ್ನು ಅಲಂಕಾರಗಳ ಮೂಲಕ ಬಣ್ಣಿಸಿರುವರು ಅವುಗಳ ಪ್ರಮುಖಾಂಶಗಳು: (1) ಚಿತ್ರಕವಿತ್ವ: ಆದಿಕವಿ ವಾಲ್ಮೀಕಿಯು ತಮ್ಮ ಮಹಾಕಾವ್ಯದುದ್ದಕ್ಕೂ ಶಬ್ದ ವೈಚಿತ್ರಕ್ಕೆ ಹೆಚ್ಚ ಒತ್ತುಕೊಟ್ಟಿರುವರು ಅದು ಅವರ ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇತ್ಯಾದಿಗಳ ಚಿತ್ರಕವಿತ್ವವನ್ನು ಪ್ರತಿನಿಧಿಸುತ್ತದೆ, ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನು ಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕತೆ ಆದಿಕವಿ ವಾಲ್ಮೀಕಿಯಲ್ಲಿ ಎದ್ದ ಕಾಣುವದು; ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವ ಉಪಮಾಲಂಕಾರದ ಸೂಕ್ತ ಉಧಾಹರಣೆ ಪ್ರೀತಮನ ಮಡಿಲು ಜಲಪಾತ ವರ್ಣನೆ ಹೀಗಿದೆ “ಗಿರಿಯಿಂದ ಧುಮುಕುವ ನದಿ ಪ್ರೇಯಸಿಯಂತೆ ಪ್ರೀತಮನ ಮಡಿಲಲಿ ಧುಮುಕುತಿತ್ತು, ಕೋಪಿತ ಪ್ರೇಯಸಿಯನು ಪ್ರೀತಮ ರಕ್ಷಿಸಿದಂತೆ ನೀರಿಗೆ ಬಿದ್ದ ಗಿಡಗಳು ಮತ್ತು ಸಂಧಾನ ಬಳಿಕ ಪುನಃ ಪ್ರೀತಮನ ಸೇರಿದ ಪ್ರೇಯಸಿಯಂತೆ ಮರಳಿ ಹಿಂದಕ್ಕೆ ಹರಿಯುವಂತೆ ಕಂಡವು ಹನುಮಗೆ. ಇಂದಿನ ಶ್ರೀಲಂಕಾ ದೇಶದಲ್ಲಿ ನುವರ ಇಲಿಯಾನದಿ ಜಲಪಾತವು ಆದಿಕವಿ ವಾಲ್ಮೀಕಿ ಬಣ್ಣಿಸಿದ ಜಲಪಾತ, ಅಲ್ಲಿಯ ಜನ ಅದನ್ನು ಸೀತಾಮಾಯಿ ಜಲಪಾತವೆಂದು ಕರೆಯುವರು. ಅದು ಸಿಗಿರಿಯಾ ಮಹಾ ಬಂಡೆ ಶಿಖರ ರಾಜ್ಯ ತಾಣದಿಂದ 161 ಕಿ. ಮಿ ಅಂತರದಲ್ಲಿ ಇದೆ, ಅದರ ಸೌಂದರ್ಯ ಇನ್ನೂ ಆದಿಕವಿ ವರ್ಣಿಸಿದಂತೆಯೇ ಇದೆ. ರಾಮನ ಇತಿಹಾಸಕ್ಕೆ ಅದ್ಭುತ ಸಾಕ್ಷಿ. ಅದರಂತೆ,”ಸೂರ್ಯನಿಂದ ಹೊಂಬಣ್ಣ ಲೇಪಿತ ಮೇರು ಪರ್ವತ, ವೃಕ್ಷಗಳಂತೆ ಹೊಂಬಣ್ಣವರ್ಣನಾದೆ ನಾನೂ”ಎಂದು ಹನುಮನು ಪುಲಕಿತಗೊಂಡನು; ಶಿಂಶಪ ಮತ್ತು ಮರಗಳಿಂದ ಬೀಸುಗಾಳಿಗೆ ಹೊಳೆವ ಗೆಜ್ಜೆಗಳ ಸದ್ದು ಕೇಳಿ ಬರುತಿತ್ತು, ಕೇಳಿ ಹನುಮ ವಿಷ್ಮಯಗೊಂಡನು” ಎಂಬ ವರ್ಣನೆ.(2) ಸೀತೆಯ ವನಪ್ರೇಮ: ಆದಿಕವಿಯು ಹನುಮಾನನ ಮೂಲಕ ಸೀತೆಯ ವನ-ಪ್ರೇಮವನ್ನು ಈ ಸನ್ನಿವೇಶದಲ್ಲಿ ಹೀಗೆ ಉಲ್ಲೇಖಿಸಿರುವರು “ ತನ್ನ ಬಲಬಾಹುಗಳ ಬಳಸಿ ಹನುಮನು ಬಲಿತ ರೆಂಬೆ ಕೊಂಬೆ ಎಲೆಗಳ ಹೂಗಳ ಅಂದದ ಅಶೋಕವೃಕ್ಷವನು ಎರಿದನು ಮತ್ತು ನುಡಿದನು “ ರಾಮ-ದರ್ಶನ ಪ್ರೀಯ ಸೀತೆ ಅತ್ತಿತ್ತ ದುಃಖದಿಂದ ಸುಳಿದಾಡುವದನು ಇಲ್ಲಿಂದ ನೋಡುವೆ, ರಾಮನ ಪತ್ನಿ ಸೀತೆಯು ಈ ಹೊಂಡಕ್ಕೆ ಬರುವಳು; ರಾಮನ ಪವಿತ್ರ ಪತ್ನಿ, ಹೃದಯಶ್ರೀ, ಅರಣ್ಯ ಅನುಭವಿ ಜಾನಕಿ ಬಂದೇ ಬರುವಳು; ಮೃಗನಯನಿ, ರಾಮ-ಧ್ಯಾನಿ ಸೀತೆಯು ಈ ವನಕ್ಕೆ ಬಂದೇ ಬರುವಳು; ರಾಮನ ನೆನಪುಗಳಿಂದ ಹಿಂಸಿಸಲ್ಪಟ್ಟ ಸುಂದರಾಕ್ಷಿ, ಸದಾ ವನವನ್ನೇ ಬಯಸುವ ದೇವತೆ ಸೀತೆ ಬಂದೇ ಬರುವಳು, ನಿತ್ಯ ಸಂಧ್ಯಾವಂದನೆ ಮಾಡುವ ಚಿರಯುವತಿ ಸೀತೆಯು ಸಂಧ್ಯಾವಂದನೆ ಮಾಡಲು ನದಿಗೆ(ಇಲಿಯಾ ನದಿ) ಬಂದೇ ಬರುವಳು; ಪತಿನಿಷ್ಠೆ, ರಾಮಪ್ರೀಯ,ಸದ್ಗುಣಿ ಸೀತೆಗಾಗಿ ಅಶೋಕವನವು ಯೋಗ್ಯ ತಾಣ”.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ

