
ಕೇಳಿ ನುಡಿಗಳನು ಸೀತೆಯ ನರಳಾಟದI
ಹೋದರು ರಾವಣನಿಗೆ ವರದಿಸಲು ಕೆಲ ರಾಕ್ಷಸಿಯರು; II
ಬಳಿ ಬಂದು ಕೆಲ ಭಯಾನಕ ರೂಪಿ ರಾಕ್ಷಸಿಯರುI
ಹೀಯ್ಯಾಳಿಸಿದರು ಸೀತೆಯನು ಕಠೊರ ಶಬ್ದಗಳಿಂದ: II
“ಓ ದುಷ್ಟ, ದುರ್ನಿರ್ಧಾರಿತ ಸೀತೆ, ಇಂದು, ಈ ಕ್ಷಣದಲಿI
ಭಕ್ಷಿಸುವೆವು ನಿನ್ನ ಮಾಂಸ ಎಮಗೆ ರುಚಿಸಿದಂತೆ”; II
ಸೀತೆಯನು ಹೆದರಿಸುವ ರಾಕ್ಷಸಿಯರ ಕಂಡುI
ಅದೇ ನಿದ್ರೆಯಿಂದೆದ್ದ ರಾಕ್ಷಸಿ ತ್ರಿಜಟಾ ನುಡಿದಳು; “ಓ ದುಷ್ಟರೇ II
ಸೀತೆ ಬದಲಾಗಿ ನಿಮ್ಮನು ನೀವೇ ತಿಂದುಕೊಳ್ಳಿ, I
ರಾಜಾ ಜನಕನ ಪ್ರೀಯ ಪುತ್ರಿ, ದಶರಥನ ಪ್ರೀಯ ಸೊಸೆ, ಸೀತೆ; II
ರೋಮಾಂಚನ ಭಯಾನಕ ಕನಸ್ಸೊಂದು ಕಂಡೆ ನಾ,I
ರಾಕ್ಷಸರ ನಾಶದ, ರಾಮನ ಕಲ್ಯಾಣದ”; II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ತ್ರೇತಾಯುಗದ ಸಾಮಾಜಿಕ ಮನಶಾಸ್ತ್ರ ಸ್ಥಿತಿಯನ್ನು ವಿವರಿಸಿರುವರು.
ಅದರಲ್ಲಿಯ ಮುಖ್ಯಾಂಶಗಳು: (1) ಸೀತೆಗೆ ರಾಕ್ಷಸಿಯರಿಂದ ಬೆದರಿಕೆ: ಸೀತೆಯ ನರಳಾಟದ ನುಡಿಗಳನು ಕೇಳಿ ಕೆಲ ರಾಕ್ಷಸಿಯರು ರಾವಣನಿಗೆ ವರದಿಸಲು ಹೋದರು, ಇನ್ನು ಕೆಲ ಭಯಾನಕ ರೂಪಿ ರಾಕ್ಷಸಿಯರು ಸೀತೆಯ ಬಳಿ ಬಂದು ಅವಳನ್ನು ಕಠೋರ ಶಬ್ದಗಳಿಂದ ಹೀಗೆ ಹೀಯ್ಯಾಳಿಸಿದರು “ಓ ದುಷ್ಟ, ದುರ್ನಿರ್ಧಾರಿತ ಸೀತೆ, ನಿನ್ನನು ಇಂದು, ಈ ಕ್ಷಣದಲಿ, ನಿನ್ನ ಮಾಂಸ ನಮಗೆ ರುಚಿಸಿದಂತೆ ಭಕ್ಷಿಸುವೆವು”.ದುಷ್ಟ ಕ್ರೂರ ಸ್ವಭಾವದ ಜನ ಇದದ್ದನ್ನು ಆದಿಕವಿ ಈ ಮುಖೇನ ತಿಳಿಸಿರುವರು.(2)ರಾಕ್ಷಸಿ ತ್ರಿಜಟಾಳಿಂದ ರಾಕ್ಷಸಿಯರಿಗೆ ಎಚ್ಚರಿಕೆ: ಸೀತೆಯನು ಹೆದರಿಸುವ ರಾಕ್ಷಸಿಯರ ಕಂಡು ಆಗ ತಾನೆ ನಿದ್ರೆಯಿಂದೆದ್ದ ರಾಕ್ಷಸಿ ತ್ರಿಜಟಾ ನುಡಿದಳು “ಓ ದುಷ್ಟರೇ, ರಾಜಾ ಜನಕನ ಪ್ರೀಯ ಪುತ್ರಿ, ದಶರಥನ ಪ್ರೀಯ ಸೊಸೆ ಸೀತೆಯ ಬದಲಾಗಿ ನಿಮ್ಮನು ನೀವೇ ತಿಂದುಕೊಳ್ಳಿ ನಾನು ರಾಕ್ಷಸರ ನಾಶದ, ರಾಮನ ಕಲ್ಯಾಣದ ರೋಮಾಂಚನ ಭಯಾನಕ ಕನಸ್ಸೊಂದು ಕಂಡೆನು”, ಈ ಮೂಲಕ ತ್ರಿಜಟಾಳು ಸೀತೆಯ ಸಹಾಯಕ್ಕೆ ನಿಲ್ಲುವಳು; ರಾಕ್ಷಸ ಕುಲದಲ್ಲಿಯೂ ಒಳ್ಳೆ ಜನರು ಇದ್ದರು ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಈ ಮುಖೇನ ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
