ಸುಂದರಕಾಂಡ ರಾಮಾಯಣ ಭಾಗ-94

By admin


ಕೇಳಿ ರಾಮನಗಾಥೆ ಹನುಮನಿಂದI
ನುಡಿದಳು ಸೀತೆ ಮಧುರದ್ವನಿದಿ ಮಧುರಾಕ್ಷರಗಳ: II
“ನೀ ರಾಮನ ಸಂಪರ್ಕಿಸಿದ್ದೆಲ್ಲಿ? ಲಕ್ಷ್ಮಣ ಹೇಗೆ ಗೊತ್ತು?I
ವಾನರ ಮಾನವರ ಸಂಗ ಹೇಗಾಯಿತು?, II
ಓ ಹನುಮಾ, ರಾಮ ಲಕ್ಷ್ಮಣರ ಸ್ವಭಾವಗಳೇನು?I
ಪುನಃ ದುಃಖ ಎನಗೆ ಆವರಿಸದಂತೆ ಕಥೆ ಹೇಳು, II
ರಾಮ ಲಕ್ಷ್ಮಣರ ನೋಟ ಯಾವುದು? ರೂಪ ಯಾವುದು?I
ಅವರ ತೊಡೆಗಳ್ಹೇಗೆ? ಬಾಹುಗಳ್ಹೇಗೆ? ಎನಗೆ ಹೇಳು”; II
ಕೇಳಿ ಸೀತೆಯ ಪ್ರಶ್ನೆಗಳನು ಹನುಮI
ರಾಮ ವ ಲಕ್ಷ್ಮಣರ ಸ್ವಭಾವಗಳ ಬಗ್ಗೆ ನುಡಿದ: II
“ಓ ಸೀತಾದೇವಿ, ಕಮಲ ಎಲೆಗಳಂತೆ ಕಾಣುವರು,I
ಅವರ ಬಗ್ಗೆ ತಿಳಿದ ನೀ, ನನ್ನ ಕೇಳಿದ್ದುನೀ ಎನ್ನ ದೈವ; II
ಓ ವಿಶಾಲಾಕ್ಷಿ, ನನ್ನಿಂದ ಕೇಳಲು ಬಯಸಿದ ನೀI
ಕೇಳು ನಾ ಹೇಳುವೆ ರಾಮ ಲಕ್ಷ್ಮಣರ ಸ್ವಭಾವ:II
ಜನ್ಮದಿ ರೂಪ-ಸಂಪನ್ನ, ಕಮಲ ಎಸಳ್ಗಣ್ಣುI
ಸರ್ವ ಸತ್ವ ಮನಮೋಹಕ ರಾಮ, ಓ ಜನಕಪುತ್ರಿ; II
ಸೂರ್ಯ ಸಮ ತೇಜ, ಭೂಮಿಯಂತೆ ತಾಳ್ಮೆI
ಬೃಹಸ್ಪತಿಯಂತೆ ಜಾಣ, ಲೋಕ ಖ್ಯಾತಿ ರಾಮ, II
ಗೌರವದಲಿ ಗೌರವಿತ, ಬ್ರಹ್ಮಚಾರ್ಯ ವ್ರತ ಸದ್ಗುಣ ಬಲ್ಲವ, I
ಆಚರಿಸುವ ರಾಮ, ರಾಜ್ಯಶಾಸ್ತ್ರ ಪರಾಂಗತ,II
ಬ್ರಹ್ಮ-ಜ್ಞಾನಿ, ವೇದ-ಪಂಡಿತ, ವೇದಾಂಗ ಪರಣಿತ I
ಪುರುಷೋತ್ತಮ ರಾಮ, ಓ ಸೀತಾದೇವಿ, ವಿಶಾಲಭುಜ, II
ಮಹಾಬಾಹು, ಶಂಖ-ಕುತ್ತಿಗೆ ಅಗೋಚರ ಕೊರಳೆಲಬು,I
ಕೆಂಗಣ್ಣು, ಆಕರ್ಷಕ ಮೈಕಟ್ಟು ರಾಮನದು, II
ದುಂದುಭಿ -ಸ್ವರ, ಎಣ್ಣೆ-ವರ್ಣ , ಮಹಾಪ್ರತಾಪಿ,I
ಸಮ ಮೈಕಟ್ಟು, ಗಾಢಕಂದು-ವರ್ಣದ ರಾಮ, II
ತ್ರಿ-ಬಲ , ತ್ರಿ-ಲಂಬ , ತ್ರಿ-ಸಮ , ತ್ರಿ-ಉಬ್ಬು , ತಾಮ್ರವರ್ಣ , I
ತ್ರಿ-ಮೃದು , ತ್ರಿ-ಗಾಂಭೀರ , ಸದಾ ಹೊಂದಿದ ರಾಮ, II
ಚತುರ್ನಾದ , ಚತುರ್ಲೇಖ , ಚತುರ್ಕಿಷ್ಕು , ಚತುರ್ಸಮ , I
ಹದಿನಾಲ್ಕು ಸಮ ದ್ವಂದ್ವ , ಚತುರ್ದೃಷ್ಠ , II
ಚತುರ್ಗತಿ ರಾಮ; ದಶ ಚಂದ್ರ, ದಶ ಬೃಹತ, I
ತ್ರಿಭಿ ವ್ಯಾಪಕ ಪರಿಶುದ್ಧನು ಆರೋನ್ನತಿ, ನವ ತೃಪ್ತಿ, II
ತ್ರಿಭಿ ವ್ಯಾಪಕ ರಾಘವ; ಸಮಗ್ರಾನುಗ್ರಹಿ ಸತ್ಯ ಧರ್ಮ ಪಾಲಕI
ದೇಶ ಕಾಲ ಬಲ್ಲ ರಾಮ, ಪ್ರೀಯ ಸರ್ವ ಲೋಕ; II
ಗುಣ ನಡತೆ ನೋಡಿದಲಿ ರಾಮನಿಗೆ ಸಮI
ಮಲ-ಸಹೋದರ ಅಜೇಯ ಲಕ್ಷ್ಮಣ; II
ಉಭಯರು ನರವ್ಯಾಘ್ರು ಹುಡುಕುತ ನಿನ್ನI
ಎಲ್ಲ ಭೂ-ದಿಶೆಗಳಲ್ಲಿ ಬಂದರು ನಮ್ಮಲಿ;II
ರಾಜ್ಯ, ಪತ್ನಿ ಕಳಕೊಂಡು ಅಣ್ಣನಿಂದ ಗರಡಿಪಾರಾದ I
ಅಸಹಾಯಕ ಸುಗ್ರೀವನು ಕುಳಿತಿದ್ದ ಋಷ್ಯಮುಕ ಶಿಖರ್ಮೇಲೆ; II
ವಚನ ನಿಷ್ಠ ವಾನರ ನಾಯಕ ಸುಗ್ರೀವನI
ಸೇವಾರ್ಥ ಅವನ ಬಳಿ ಇದ್ದೆವು ನಾವು; II
ವನವಾಸಿ ವೇಶದ,ಧನುರ್ಧಾರಿ ರಾಮ ಲಕ್ಷ್ಮಣರುI
ಬಂದರು ಋಷ್ಯಮುಕ-ಪರ್ವತ ಬಳಿ;II
ಕಂಡು ನರಶ್ರೇಷ್ಠ ರಾಮ ಲಕ್ಷ್ಮಣರನುI
ವಾನರಶ್ರೇಷ್ಠ ಸುಗ್ರೀವ ನೆಗೆದ ಋಷ್ಯಮುಕ ಶಿಖರದಿ; II
ತಿಳಿಯಲು ಉಭಯ ಸಹೋದರರ ಸಮಾಚಾರI
ಕಳಿಸಿದ ಸುಗ್ರೀವ ಎನ್ನ , ಬಳಿ ಅವರ;II
ರೂಪ ಸಂಪನ್ನ ನರವ್ಯಾಘ್ರ ಸಹೋದರ ಬಳಿI
ಹೋದೆನು ಸುಗ್ರೀವನ ಆಜ್ಞೆ ಪಾಲಿಸಿ, ಕರುಣಾಮಯಿ II
ನರಶ್ರೇಷ್ಠ ರಾಮ ಲಕ್ಷ್ಮಣ ಕೈ ಮುಗಿದು,ಬಂದ ವಿಷಯ ತಿಳಿಸಿ, I
ಭುಜದ್ಮೇಲೆ ಕುಡ್ರಿಸಿ ತಂದೆ ಸುಗ್ರೀವನ ಬಳಿ; II
ತಿಳಿಸಿದೆ ರಾಮ ಲಕ್ಷ್ಮಣರ ವಿಷಯ ಸುಗ್ರೀವನಿಗೆ,I
ಮಾಡಿಕೊಂಡರು ಸಂವಾದ ನಡೆಸಿ ಸ್ನೇಹ-ಒಪ್ಪಂದ; II
ಹಂಚಿಕೊಂಡರು ಸುಖ ದುಃಖಗಳ ಪರಸ್ಪರರಲಿI
ಬೆಳೆಯಿತು ವಿಶ್ವಾಸ ಬಾಂಧವ್ಯ ಪರಸ್ಪರರಲಿ ; II
ರಾಜ್ಯ ವ ಪತ್ನಿ ರುಮಾಳನ್ನು ಸುಗ್ರೀವನಿಗೆI
ಹಿಂದಿರುಗಿಸಲು ವಾಲಿಯನು ವಧಿಸಲು ಒಪ್ಪಿದ ರಾಮ; II
ತಿಳಿಸಿದ ಲಕ್ಷ್ಮಣ ಸುಗ್ರೀವನಿಗೆ ರಾಮನ ದುಃಖ,I
ರಾವಣ ಅಪಹರಿಸಿದ ನಿನ್ನ ವಿಷಯ;II
ಕೇಳಿ ಲಕ್ಷ್ಮಣನಿಂದ ನಿನ್ನ ಹೃತ ಸುದ್ಧಿI
ಗ್ರಹಣ ಹಿಡಿದ ಸೂರ್ಯನಂತೆ ಮಂಕಾದ ಸುಗ್ರೀವ; II
ಅಲ್ಲಲ್ಲಿ ಭೂಮಿಗೆ ಬಿದ್ದಿದ್ದವು ನೀ ಧರಿಸಿದ ಆಭರಣಗಳುI
ರಾವಣ-ಹಿಡಿತದಿ ತಪ್ಪಿಸಿಕೊಳ್ಳುವಾಗ ನೀ; II
ತೋರಿಸಿದ ನೀ ಚಲ್ಲಿದ ಆಭರಣ ರಾಮನಿಗೆ ಸುಗ್ರೀವ, I
ಆದರೆ ತಿಳಿಯಲಿಲ್ಲ ನಮಗೆ ನಿನ್ಯೊಯ್ದ ಮಾರ್ಗ; II
ಗುರುತಿಸಿ ರಾಮ ನಿನ್ನ ಆಭರಣಗಳI
ಶೋಕದಿ ಪ್ರಜ್ಞಾಹೀನನಾದ ರಾಮ; II
ಎಚ್ಚರಿಸಿದೆನು ಸ್ವಾಂತನ ಹೇಳಿ ರಾಮನ,I
ಮಹಾಬಲಿ ರಾಮ ಸೋತಿದ್ದನು ಶೋಕದಲಿ ನಿನ್ನ; II
ಸುಂದರ ಕಾಂಡ

ಹನುಮಾನನ ಬಗ್ಗೆ ಸೀತೆಯಲ್ಲಿ ಮೂಡಿದ ಶಂಕೆಯನ್ನು ಹನುಮಾನ ಹೋಗಲಾಡಿಸಿದ ಪರಿಯನ್ನು ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಸೀತೆಯ ವಿಚಾರಣೆಯ ಪ್ರಶ್ನೆಗಳು: ಹನುಮನಿಂದ ರಾಮನ ಸುದ್ಧಿ ತಿಳಿದ ಸೀತೆಯು ಅವನಿಗೆ ಮಧುರದ್ವನಿಯಲ್ಲಿ ಮಧುರಾಕ್ಷರಗಳನ್ನು ವಿಚಾರಿಸಿದಳು “ನೀನು ರಾಮನನ್ನು ಸಂಪರ್ಕಿಸಿದ್ದು ಏಲ್ಲಿ? ಲಕ್ಷ್ಮಣ ಹೇಗೆ ಗೊತ್ತು? ವಾನರ ಮಾನವರ ಸ್ನೇಹ ಹೇಗಾಯಿತು? ಓ ಹನುಮಾ, ರಾಮ ಲಕ್ಷ್ಮಣರ ಸ್ವಭಾವಗಳೇನು? ನನಗೆ ಪುನಃ ದುಃಖ ಆವರಿಸದಂತೆ ನೀನು ರಾಮನ ವಿಷಯ ಹೇಳು: ರಾಮ ಲಕ್ಷ್ಮಣರ ನೋಟ ಯಾವುದು? ರೂಪ ಯಾವುದು? ಅವರ ತೊಡೆಗಳ್ಹೇಗೆ? ಬಾಹುಗಳ್ಹೇಗೆ? ನನಗೆ ಹೇಳು”.(2)ಹನುಮಾನನಿಂದ ರಾಮ ಮತ್ತು ಲಕ್ಷ್ಮಣರ ಗುಣಗಾನ: ಸೀತೆಯ ವಿಚಾರಣಾ ಪ್ರಶ್ನೆಗಳನ್ನು ಕೇಳಿ ಹನುಮನು ರಾಮ ಮತ್ತು ಲಕ್ಷ್ಮಣರ ಸ್ವಭಾವಗಳ ಬಗ್ಗೆ ಸೀತೆಗೆ ಹೀಗೆ ಹೇಳಿದನು “ಓ ಸೀತಾದೇವಿ, ಅವರು ನೋಡಲು ಕಮಲ ಎಲೆಗಳಂತೆ ಕಾಣುವರು, ಅವರ ಬಗ್ಗೆ ತಿಳಿದ ನೀನು ನನ್ನನ್ನು ಕೇಳಿದ್ದು ನನ್ನ ದೈವ; ಓ ವಿಶಾಲಾಕ್ಷಿ, ನೀನು ಅವರ ಬಗ್ಗೆ ನನ್ನಿಂದ ಕೇಳಲು ಬಯಸಿರುವೆ, ಕೇಳು, ನಾನು ರಾಮ ಲಕ್ಷ್ಮಣರ ಸ್ವಭಾವದ ಬಗ್ಗೆ ಹೇಳುವೆನು: ಓ ಜನಕಪುತ್ರಿ, ಜನ್ಮದಿಂದ ರೂಪ-ಸಂಪನ್ನರು, ಕಮಲ ಎಸಳುಗಳಂತಹ ಕಣ್ಣಗಳನ್ನು ಹೊಂದಿದವರು, ಲೋಕ ಖ್ಯಾತಿ ರಾಮನು ಸರ್ವ ಸತ್ವ ಮನಮೋಹಕ ಮೈಕಟ್ಟಿನವನು, ಸೂರ್ಯನಿಗೆ ಸಮ ತೇಜನು, ಭೂಮಿಯಂತೆ ತಾಳ್ಮೆಯುಳ್ಳವನು, ಬೃಹಸ್ಪತಿಯಂತೆ ಜಾಣನು, ಗೌರವದಲಿ ಗೌರವಿತನು, ಬ್ರಹ್ಮಚಾರ್ಯ ವ್ರತದ ಸದ್ಗುಣ ಆಚರಣೆ ಬಲ್ಲವನು, ರಾಮ, ರಾಜ್ಯಶಾಸ್ತ್ರ ಪರಾಂಗತನು, ಬ್ರಹ್ಮ-ಜ್ಞಾನಿಯು, ವೇದ-ಪಂಡಿತನು, ಆರು ವೇದಾಂಗಗಳ {1. ಶಿಕ್ಷ- ಉಚ್ಚಾರಶಾಸ್ತ್ರ, 2.ಛಂದಸಶಾಸ್ತ್ರ, 3. ವ್ಯಾಕರಣಶಾಸ್ತ್ರ, 4. ನಿರುಕ್ತ – ವೇದ-ಶಬ್ದಕೋಶ, 5. ಜ್ಯೋತಿಷ್ಯಶಾಸ್ತ್ರ. ಮತ್ತು 6. ಕಲ್ಪ -ಸುರರ ಸಾಧನೆಗಳ ನಿರೂಪಣೆ} ಪರಣಿತ ಪುರುಷೋತ್ತಮನು, ಮುಂದುವರೆದು, ಓ ಸೀತಾದೇವಿ, ವಿಶಾಲಭುಜ, ಮಹಾಬಾಹು, ಶಂಖ-ಕುತ್ತಿಗೆ ಅಗೋಚರ ಕೊರಳೆಲಬು, ಕೆಂಗಣ್ಣು, ಆಕರ್ಷಕ ಮೈಕಟ್ಟು ರಾಮನದು; ದುಂದುಭಿ(ಚರ್ಮವಾದ್ಯ)-ಸ್ವರ, ಎಣ್ಣೆ-ವರ್ಣ(ಎಣ್ಣೆ-ಚರ್ಮ/Oily skinned), ಮಹಾಪ್ರತಾಪಿ, ಸಮ ಮೈಕಟ್ಟು, ಗಾಢಕಂದು-ವರ್ಣದವನು ರಾಮ; ರಾಮನು ಸದಾ ತ್ರಿ-ಬಲ— ಎದೆ ನಡು ಮುಷ್ಠಿ, ತ್ರಿ-ಲಂಬ— ಹುಬ್ಬ ಕೈ ಪಾದಗಳು, ತ್ರಿ-ಸಮ— ಸಂದು ಮೊಳಕಲು ಮೊಳಕೈ, ತ್ರಿ-ಉಬ್ಬು— ಎದೆ ಬೆನ್ನು ಹೊಟ್ಟೆಕೀಲ ತಾಮ್ರವರ್ಣ— ಕಣ್ಣಂಚು ಉಗುರು ಹಸ್ತಗಳು, ತ್ರಿ-ಮೃದು— ಕೂದಲು ಕಿಬ್ಬೊಟ್ಟೆ ಪಾದಗಳು, ತ್ರಿ-ಗಾಂಭೀರ— ನಡೆ ದ್ವನಿ ನೋಟಗಳನ್ನು ಹೊಂದಿರುವನು; ರಾಮನು ಚತುರ್ನಾದನು— ಸ್ವರಗಳ ಪರಿಣಿತ, ಚತುರ್ಲೇಖಕನು— ಬರಹ ಪರಿಣಿತ, ಚತುರ್ಕಿಷ್ಕು— ಅಂಕುಡೊಂಕಗಳ ಬಲ್ಲವನು, ಚತುರ್ಸಮ— ಸಮಾನತೆಗಳ ಚತುರನು, ಹದಿನಾಲ್ಕು ಸಮ ದ್ವಂದ್ವ—ಹದಿನಾಲ್ಕು ಸ್ಪರ್ಧೆಗಳ ನಿಪುಣನು, ಚತುರ್ದೃಷ್ಠ— ವಿವೇಕನು, ಚತುರ್ಗತಿ— ಉಪಾಯ ಬಲ್ಲವನು; ರಾಮನು ದಶ ಚಂದ್ರನು, ದಶ ಬೃಹತನು, ತ್ರಿಭಿ— ಖ್ಯಾತಿ, ಮಹಿಮೆ, ವೈಭವ ಮೂರು ಕಾರಣಗಳ ವ್ಯಾಪಕ ಪರಿಶುದ್ಧನು, ಆರೋನ್ನತಿ, ನವ ತೃಪ್ತಿ, ತ್ರಿಭಿ ವ್ಯಾಪಕನು; ರಾಘವನು ಸಮಗ್ರಾನುಗ್ರಹಿ, ಸತ್ಯ ಧರ್ಮ ಪಾಲಕ, ದೇಶ ಕಾಲ ಬಲ್ಲವ, ಸರ್ವ ಲೋಕ ಪ್ರೀಯನು; ಅದರಂತೆ ಗುಣ ನಡತೆಯಲ್ಲಿ ಮಲ-ಸಹೋದರ ಅಜೇಯ ಲಕ್ಷ್ಮಣನು ರಾಮನಿಗೆ ಸಮನು”, ಸೀತೆಯು ಹನುಮಾನನ್ನು ರಾಮ ಲಕ್ಷ್ಮಣರ ಗುಣ ಲಕ್ಷಣಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಿಜವಾಗಿಯೂ ಹನುಮಾನನು ರಾಮನದೂತನೆ ಅಥವಾ ಅಲ್ಲ ಎಂಬ ಸತ್ಯ ತಿಳಿಯಲು ಪ್ರಯತ್ನಿಸುವಳು, ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಯಾರೆ ಅಪರಿಚಿತರು ತಮ್ಮವರ ಸುದ್ಧಿ ಹೇಳಲು ಬಂದಾಗ ಅವನು ನಿಜವಾದ ವ್ಯಕ್ತಿಯೇ ಅಥವಾ ಮೋಸಗಾರನೋ ಎಂಬದನ್ನು ತಿಳಿಯುವ ಅಗತ್ಯವನ್ನು ಸೀತೆಯ ಮುಖೇನ ಜನಸಾಮಾನ್ಯರಿಗೆ ಉಪದೇಶಿಸಿರುವರು; (3) ಹನುಮಾನನು ಸೀತೆಯಗೆ ಮನವರಿಕೆಗಾಗಿ ಸಾಕ್ಷಿಗಳನ್ನು ಸಾದರ ಪಡಿಸುವನು: ಹನುಮಾನನು ಸೀತೆಗೆ ತಾನು ರಾಮನದೂತ ಎಂದು ಮನವರಿಕೆ ಮಾಡಿಕೊಡಲು ಅವಳಿಗೆ ಹೀಗೆ ಹೇಳಿದನು “ಎಲ್ಲ ಭೂ-ದಿಶೆಗಳಲ್ಲಿ ನಿನ್ನ ಹುಡುಕುತ ಉಭಯರು ನರವ್ಯಾಘ್ರು ನಮ್ಮ ಬಳಿ ಬಂದರು; ಅದೇವೇಳೆ ರಾಜ್ಯ, ಪತ್ನಿ ಕಳಕೊಂಡು ಅಣ್ಣನಿಂದ ಗರಡಿಪಾರಾದ ಅಸಹಾಯಕ ಸುಗ್ರೀವನು ಸಂಗಡಿಗರೊಂದಿಗೆ ಋಷ್ಯಮುಕ ಶಿಖರ್ಮೇಲೆ ಕುಳಿತಿದ್ದನು; ವಚನ ನಿಷ್ಠ, ವಾನರ ನಾಯಕ, ಸುಗ್ರೀವನ ಸೇವಾರ್ಥ ನಾವು ಅವನ ಬಳಿ ಇದ್ದೆವು; ವನವಾಸಿ ವೇಶದ ಧನುರ್ಧಾರಿ ರಾಮ ಲಕ್ಷ್ಮಣರು ಋಷ್ಯಮುಕ-ಪರ್ವತ ಬಳಿ ಬಂದರು; ನರಶ್ರೇಷ್ಠ ರಾಮ ಲಕ್ಷ್ಮಣರನು ಕಂಡು ವಾನರಶ್ರೇಷ್ಠ ಸುಗ್ರೀವನು ಋಷ್ಯಮುಕ ಶಿಖರದಿಂದ ಬೇರೆಡೆ ಜಿಗಿದನು; ಉಭಯ ಸಹೋದರರ ಸಮಾಚಾರ ತಿಳಿಯಲು ಸುಗ್ರೀವನು ನನ್ನನ್ನು ಬಳಿ ಅವರ ಕಳುಹಿಸಿದನು; ಸುಗ್ರೀವನ ಆಜ್ಞೆ ಪಾಲಿಸಿ ನಾನು ರೂಪ ಸಂಪನ್ನ ನರವ್ಯಾಘ್ರ ಕರುಣಾಮಯಿ ಸಹೋದರ ಬಳಿ ಹೋದೆನು ಹಾಗು ಅವರಿಗೆ ಕೈ ಮುಗಿದು ಬಂದ ವಿಷಯ ತಿಳಿಸಿ ಅವರನ್ನು ನನ್ನ ಭಜದ್ಮೇಲೆ ಕುಡ್ರಿಸಿಕೊಂಡು ಸುಗ್ರೀವನ ಬಳಿ ಕರೆದು ತಂದೆನು ಮತ್ತು ರಾಮ ಲಕ್ಷ್ಮಣರ ಬಂದ ವಿಷಯ ಸುಗ್ರೀವನಿಗೆ ತಿಳಿಸಿದೆನು; ಪರಸ್ಪರ ಸಂವಾದ ನಡೆಸಿ ರಾಮ ಸುಗ್ರೀವರು ಸ್ನೇಹ-ಒಪ್ಪಂದ ಮಾಡಿಕೊಂಡರು ಹಾಗು ಪರಸ್ಪರರ ಸುಖ ದುಃಖಗಳನ್ನು ಹಂಚಿಕೊಂಡರು, ಪರಸ್ಪರರಲಿ ವಿಶ್ವಾಸ ಬಾಂಧವ್ಯ ಬೆಳೆಯಿತು; ಸುಗ್ರೀವನಿಗೆ ಅವನ ರಾಜ್ಯ ಮತ್ತು ಪತ್ನಿ ರುಮಾಳನ್ನು ಹಿಂದಿರುಗಿಸಲು ವಾಲಿಯನು ವಧಿಸಲು ರಾಮನು ಒಪ್ಪಿದನು; ಲಕ್ಷ್ಮಣನು ಸುಗ್ರೀವನಿಗೆ ರಾಮನ ದುಃಖವನ್ನು ತಿಳಿಸಿದನು, ರಾವಣನು ನಿನ್ನ ಅಪಹರಿಸಿದ ವಿಷಯವನ್ನು ಲಕ್ಷ್ಮಣನಿಂದ ಕೇಳಿ ಸುಗ್ರೀವನು ಗ್ರಹಣ ಹಿಡಿದ ಸೂರ್ಯನಂತೆ ಮಂಕಾದನು; ನೀನು ರಾವಣ-ಹಿಡಿತದಿಂದ ತಪ್ಪಿಸಿಕೊಳ್ಳುವಾಗ ಕೊಸ್ರಾಟದಲ್ಲಿ ನೀನು ಧರಿಸಿದ ಆಭರಣಗಳು ಅಲ್ಲಲ್ಲಿ ಭೂಮಿಗೆ ಬಿದ್ದಿದ್ದವು, ಸುಗ್ರೀವನು ನೀನು ನಮ್ಮಲ್ಲಿ ಚಲ್ಲಿದ ಆಭರಣ ರಾಮನಿಗೆ ತೋರಿಸಿದನು ಆದರೆ ನಮಗೆ ನಿನ್ಯೊಯ್ದ ಮಾರ್ಗ ತಿಳಿಯಲಿಲ್ಲ; ರಾಮನು ನಿನ್ನ ಆಭರಣಗಳ ಗುರುತಿಸಿ ಶೋಕದಿಂದ ಒಂದು ಕ್ಷಣ ಪ್ರಜ್ಞಾಹೀನನಾದನು, ಸ್ವಾಂತನ ಹೇಳಿ ರಾಮನನ್ನು ಎಚ್ಚರಿಸಿದೆನು, ಮಹಾಬಲಿ ರಾಮನು ನಿನ್ನ ಶೋಕದಲಿ ಸೋತಿದ್ದನು; ಓ ಸೀತಾದೇವಿ, ರಾಮನಲಿ ನಿನ್ನ ವಿರಹ ಜ್ವಾಲೆ ಜ್ವಾಲಾಮುಖಿಯಂತೆ ಕುದಿಯುತ್ತಿದೆ; ನಿನ್ನ ನೆನಪಿನ ಶೋಕ ಜ್ವಾಲೆಯು ರಾಮನನ್ನು ಜ್ವಾಲೆ ಮನೆ ಸುಡುವಂತೆ ಸುಡುತ್ತಿದೆ; ನಿನ್ನ ಶೋಕದಲಿ ಭೂ-ಕಂಪನದಿಂದ ಪರ್ವತ ನಡುಗಿದಂತೆ ರಾಮ ನಡಗುತ್ತಿರುವನು” ಸೀತೆಯು ಕಿಷ್ಕಿಂಧದಲ್ಲಿ ಚಲ್ಲಿದ ಆಭರಣಗಳನ್ನು ನೆನಪಿಸಿಕೊಡುತ್ತು ಅವಳಿಗೆ ತಾನು ರಾಮನದೂತನೆಂದು ಮನವರಿಕೆ ಮಾಡಿಕೊಡಲು ಯತ್ನಿಸುವನು. ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ಸೀತೆಯು ನಿಜವಾಗಿಯು ಹನುಮಾನನು ರಾಮದೂತನೆ ಎಂಬ ತನ್ನ ಶಂಕೆಯನ್ನು ನಿವಾರಿಸಿಕೊಳ್ಳಲು ರಾಮ ಲಕ್ಷ್ಮಣರ ಬಗ್ಗೆ ತಿಳಿಸಲು ಹನುಮಾನನಿಗೆ ಪ್ರಶ್ನಿಸುವಳು ಅವಳ ವಿಚಾರಣೆಯಲಿ ಹನುಮನು ಅವಳಿಗೆ ಮನವರಿಕೆಯಾಗುವಂತೆ ಅವಳ ಅಪರಹಣದ ನಂತರದ ಘಟನೆಗಳನ್ನು ಮತ್ತು ರಾಮನ ವ್ಯಕ್ತಿತ್ವ, ಸ್ವಭಾವನ್ನು ವಿವರಿಸಿದ ಪ್ರಸಂಗದ ವರ್ಣನೆ ನೀಡಿರುವರು, ತದ್ಮೂಲಕ ರಾಮನ ಚರಿತೆಯ ಘಟನೆಗಳ ಪುಃನರೋಚ್ಚಾರ ಮೂಲಕ ಅದನ್ನು ಗಟ್ಟಿಗೊಳಿಸುವ ಮಹಾಕಾವ್ಯ ವಿಧಾನವು ಆದಿಕವಿಯ ವಿಶೇಷ ಕೊಡುಗೆ.

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌