ಸುಂದರಕಾಂಡ ರಾಮಾಯಣ ಭಾಗ-98

By admin


ಕಂಡು ಭಯಾನಕ ರೂಪ ಹನುಮನI
ಕಮಲಾಕ್ಷಿ ಸೀತೆ ನುಡಿದಳು ಹನುಮನಿಗೆ: II
“ ಓ ಮಹಾನ ವಾನರನೇ, ನಾ ಬಲ್ಲೆ ನಿನ್ನI
ಧೈರ್ಯ, ಪರಾಕ್ರಮ, ಜ್ವಾಲೆಯಂತಹ ತೇಜ, II
ಓ ವಾನರ ಪುಂಗವ, ಸಾಧ್ಯವೇ ಸಾಮಾನ್ಯನಿಗೆI
ನೆಲೆಗಾಣದ ಸಮುದ್ರ ದಾಟಿ ಬರಲೀ ಭೂಮಿಗೆ? II
ಎನ್ನ ಹೊತ್ತೋಯುವ ಸಾಮರ್ಥ್ಯ ನಿನ್ನಲಿದೆ,I
ಆದರೆ ಭಂಗಾಗಬಾರದು ರಾಮನೊಪಾಯ; II
ಓ ನಿಷ್ಕಲಂಕ ವಾನರಶ್ರೇಷ್ಠನೇ, ನಿನ್ನೊಂದಿಗೆ ಬರಲು ಸಾಧ್ಯವೇ!I
ಸಹಿಸಲಾರೆ ನಾ ನಿನ್ನ ವೇಗದ ಗಾಳಿ ಒತ್ತಡ, II
ಆಕಾಶದಲಿ ಹಾರುವಾಗ ಬೀಳಬಹುದು ನಾ I
ಸಮುದ್ರಕ್ಕೆ ನಿನ್ನ ವೇಗಕ್ಕೆ ಹೆದರಿ;II
ಆಹಾರವಾಗಬಹುದು ಸಮುದ್ರಕ್ಕೆ ಬಿದ್ದ ನಾನುI
ತಿಮಿಂಗಿಲ ಮೊಸಳೆ ದೈತ ಜಲಜೀವಿಗಳಿಗೆ; II
ಓ ಶತ್ರು ದ್ವಂಸಕನೇ,ಅಸಾಧ್ಯ ಎನಗೆ ನಿನ್ನೊಂದಿಗೆI
ಬರಲು,ಸ್ತ್ರೀ ರಕ್ಷಣೆ ತೊಂದರೆಯಾದೀತು ನಿನಗೆ; II
ನೀ ನನ್ನೋಯ್ದ ಸುದ್ಧಿ ತಿಳಿದುI
ಬೆನ್ನಟಿ ಬರಬಹುದು ದುಷ್ಟ ರಾವಣ; II
ಗಂಡಾಂತರ ನನ್ನೋಯುವ ಕಾರ್ಯ ನಿನಗೆ ಮುತ್ತುವರು ನಮ್ಮನ್ನು,I
ಶೂರ ರಾಕ್ಷಸರು ಆಯುಧಗಳಿಂದ; II
ಬೆನ್ನಟ್ಟುವರು ಆಯುಧಗಳೊಂದಿಗೆ ರಾಕ್ಷಸರು ಆಕಾಶದಲಿI
ನಿರಾಯುಧ ನೀ ಹೊರಾಡುವೆ ಹೇಗೆ ಅವರೊಂದಿಗೆ? II
ಓ ವಾನರಶ್ರೇಷ್ಠನೇ, ರಾಕ್ಷಸರೊಂದಿಗೆ ಯುದ್ಧಮಾಡುವಾಗ ನೀI
ನಾ ಬೀಳಬಹುದು ಜರಿದು ಸಮುದ್ರಕ್ಕೆ, II
ಇಲ್ಲವೇ ಕಂಡು ನಾ ಬೀಳುವದನು ಪುನಃI
ಹಿಡಿದು ನನ್ನ ಒಯ್ಯುವರು ಲಂಕೆಗೆ; II
ಇಲ್ಲವೇ ಕೊಲ್ಲ ಬಹುದು ನನ್ನ ಬಿಡಿಸಿ ನಿನ್ನ ಕೈಯಿಂದ,I
ಅನಿಶ್ಚಿತ ಜಯ ವ ಅಪಜಯ ಯುದ್ಧದಲಿ; II
ಓ ವಾನರನೇ, ಅವಘಡವಾದೀತು ರಾಕ್ಷಸರಿಂದ ವ್ಯರ್ಥವಾದೀತು I
ನೀ ಬಂದ ಸಾಹಸ; ಇಲ್ಲವೇ ಓಯ್ದು II
ರಹಸ್ಯಸ್ಥಾನದಲಿಟ್ಟಾರು ಎನ್ನ ತೊಂದರೆಯಾದೀತು I
ರಾಮ ಲಕ್ಷ್ಮಣರಿಗೆ ಹುಡುಕಲು ಎನ್ನ; II
ಓ ಹನಮಾ, ನನ್ನ ಗಂಡನಲ್ಲಿಯ ನಿನ್ನ ಭಕ್ತಿ ಅಪಾರ,I
ಆದರೆ ನಾ ಮುಟ್ಟೇನು ದೇಹ ಪರ ಪುರುಷರ; II
ಬಲವಂತವಾಗಿ ರಾವಣ ಮುಟ್ಟಿಹನು ಎನ್ನ ದೇಹI
ರಕ್ಷಣೆಯಿಲ್ಲದೇ ನಾ ಅಸಹಾಯಕಳಾದೆ; II
ರಾವಣನ ಇಲ್ಲಿಯೇ ಕೊಂದು ರಾಮ ನನ್ನ ಹಿಂಪಡೆಯುವದು ಸೂಕ್ತ,|
ನಾ ಯೋಗ್ಯ ರಾಮನಿಗೆ; II
ಸ್ವತಃ ಕಂಡಿರುವೆ ರಾಮನ ಶೌರ್ಯ ಯುದ್ಧದಲಿI
ರಾಮನ ಎದಿರಿಸುವ ಸಾಹಸವಿಲ್ಲ ರಾಕ್ಷಸರಲಿ; II
ಓ ವಾನರಶ್ರೇಷ್ಠನೇ, ಕರೆದು ತಾ ರಾಮ ಲಕ್ಷ್ಮಣI
ವಾನರ ಸೇನೆ, ಹರುಷ ತಂದಿದೆ ನಿನ್ನ ವಾರ್ತೆ”. II
ಸುಂದರಕಾಂಡ

ರಾಮನ ವಾರ್ತೆ ತಂದ ಹುಮಾನನ ಮಾತುಗಳನ್ನು ತಿಳಿದು ಹಾಗು ಅವನಿಂದ ತನ್ನನ್ನು ರಾಮನ ಬಳಿ ಹೊತ್ತೋಯ್ಯುವ ಪ್ರಸ್ತಾವಣೆಯನ್ನು ತಿಳಿದು ಸೀತೆಯು ಹನುಮಾನನಿಗೆ ರಾವಣನ ವಿರುದ್ದ ತನ್ನ ಸೇಡಿನ ಮಾತುಗಳನ್ನು ಆಡುವ ಸಂವಾದವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರ ಮುಖ್ಯಾಂಶಗಳು: (1) ಹೆಣ್ಣಿನ ಸೇಡು: ರಾವಣನು ತನಗೆ ಮಾಡಿದ ಅವಮಾನ, ಹಿಂಸೆಗಳ ಸೇಡು ತೀರಿಸಿಕೊಳ್ಳಲು ಹನುಮಾನನ ಯುದ್ಧಬೆಲೆರಹಿತ ಉಪಾಯವನ್ನು ಸೀತೆಯು ಹೀಗೆ ಕಾರಣಗಳನ್ನು ನೀಡುತ “ ಓ ಹನುಮಾನ, ದೂರದವರೆಗೆ ನನ್ನ ಹೊತ್ತೋಯುವ ಬಯಕೆ ನಿನ್ನಲ್ಲಿ ಹೇಗೆ ಬಂತು? ಇದು ನಿನ್ನ ಕಪಿತ್ವ/ ಮಂಗ ಚೇಷ್ಟೆ, ನೀನು ಚಿಕ್ಕಗಾತ್ರದ ಕಪಿ, ಹೇಗೆ ಹೊತ್ತೋಯುವೆ ನನ್ನನ್ನು ನನ್ನ ಪತಿ ಮಾನವ ರಾಮನ ಬಳಿ?….. ಓ ಮಹಾನ ವಾನರನೇ, ನಾನು ನಿನ್ನ ಧೈರ್ಯ, ಪರಾಕ್ರಮ, ಜ್ವಾಲೆಯಂತಹ ತೇಜ, ಬಲ್ಲೆನು; ಓ ವಾನರ ಪುಂಗವ, ನೆಲೆಗಾಣದ ಸಮುದ್ರ ದಾಟಿ ಲಂಕೆಗೆ ಬರುವದು ಸಾಮಾನ್ಯನಿಗೆ ಸಾಧ್ಯವೇ? ನನ್ನನ್ನು ಹೊತ್ತೋಯುವ ಸಾಮರ್ಥ್ಯ ನಿನ್ನಲಿದೆ ಆದರೆ ಅದರಿಂದ ನನ್ನ ಬಿಡುಗಡೆ ಮಾಡುವ ರಾಮನ ಉಪಾಯ ಭಂಗಾಗಬಾರದು,…. ಓ ನಿಷ್ಕಲಂಕ ವಾನರಶ್ರೇಷ್ಠನೇ, ನಾನು ನಿನ್ನೋದಿಗೆ ಬರಲು ಸಾಧ್ಯವಿಲ್ಲ ಯಾಕೆಂದರೆ ನಾನು ನಿನ್ನ ವೇಗದ ಗಾಳಿ ಒತ್ತಡವನ್ನು ಸಹಿಸಲಾರೆನು, ಆಕಾಶದಲಿ ನೀನು ಹಾರುವಾಗ ನಾನು ನಿನ್ನ ವೇಗಕ್ಕೆ ಹೆದರಿ ಸಮುದ್ರಕ್ಕೆ ಬೀಳಬಹುದು ಹಾಗು ಸಮುದ್ರಕ್ಕೆ ಬಿದ್ದ ನಾನು ತಿಮಿಂಲ ಮೊಸಳೆ ದೈತ ಜಲಜೀವಿಗಳಿಗೆ ಆಹಾರವಾಗಬಹುದು; ಇಂತಹ ಪ್ರಯತ್ನದಿಂದ ನಮಗೆ ಅವಘಡವಾದೀತು, ನೀನು ಬಂದ ಸಾಹಸ ರಾಕ್ಷಸರಿಂದ ವ್ಯರ್ಥವಾದೀತು ಇಲ್ಲವೇ ನನ್ನನ್ನು ರಾಕ್ಷಸರು ಓಯ್ದು ರಹಸ್ಯಸ್ಥಾನದಲಿ ಇಡುವರು ಇದರಿಂದ ರಾಮ ಲಕ್ಷ್ಮಣರಿಗೆ ನನ್ನನ್ನು ಹುಡುಕಲು ಮತ್ತೆ ತೊಂದರೆಯಾಗುವದು,… ಓ ಹನಮಾ, ನನ್ನ ಗಂಡನಲ್ಲಿಯ ನಿನ್ನ ಭಕ್ತಿ ಅಪಾರವಾದದು ಆದರೆ ನಾನು ಪರ ಪುರುಷರ ದೇಹ ಮುಟ್ಟುವದಿಲ್ಲ, ನನ್ನ ದೇಹವನ್ನು ರಾವಣನನು ಬಲವಂತವಾಗಿ ಮುಟ್ಟಿರುವನು, ನಾನು ರಕ್ಷಣೆಯಿಲ್ಲದೇ ಅಸಹಾಯಕಳಾದೆನು; ಅದರ ಪ್ರತೀಕಾರವಾಗಿ ರಾಮನು ರಾವಣನನ್ನು ಇಲ್ಲಿಯೇ ಕೊಂದು ನನ್ನನ್ನು ಹಿಂಪಡೆಯುವದು ಸೂಕ್ತ ಕ್ರಮ ಹಾಗು ನಾನು ರಾಮನಿಗೆ ಯೋಗ್ಯವೆನಿಸುವೆನು” ತಳ್ಳಿಹಾಕುತ ಹನುಮಾನನ ಪ್ರಸ್ತಾವನೆ ತನ್ನ ಸೇಡುಭಾವಣೆಯನ್ನು ವ್ಯಕ್ತಪಡಿಸಿದಳು. (2) ರಾಮ ರಾವಣರ ಯುದ್ಧಕ್ಕೆ ಸೀತೆಯ ಸೇಡು ಕಾರಣ: ಹನುಮಾನನ ಕೋರಿಕೆ ಮೇರಿಗೆ ಸೀತೆಯು ಹನುಮಾನನ ಜೊತೆ ಹೊಡಲು ಸಿದ್ದವಾಗಿದ್ದರೆ ರಾಮ ಮತ್ತು ರಾವಣರ ಮಧ್ಯೆ ಯುದ್ಧ ನಡೆಯುತಿದ್ದಿಲ ಆದರೆ ಸೀತೆಯು ತನಗೆ ಅವಮಾನ ಮಾಡಿದ ಮತ್ತು ಹೊತ್ತುತಂದ ರಾವಣನನ್ನು ರಾಮನೇ ಕೊಂದು ತನನ್ನು ಒಯ್ಯಬೇಕೆಂಬ ಹಠ ಹಿಡಿಯುವಳು; ವಿವಾಹಿತ ಸ್ತ್ರೀಯನ್ನು ಪರ ಪುರುಷರು ಮುಟ್ಟುವದು ದುಷ್ಕೃತ್ಯ ಮತ್ತು ಅದರಂತೆ ವಿಹಾಹಿತ ಸ್ತ್ರೀ ಪರಪುರುಷನನ್ನ ಮುಟ್ಟುವದು ದುಷ್ಕೃತ್ಯವೆಂಬ ತನ್ನಮನಸ್ಸಿನ ಇಂಗಿತವನ್ನು ವ್ಯಕ್ತ ಪಡಿಸುವಳು. ಒಟ್ಟಿನಲ್ಲಿ ಸೀತೆಯು ತನಗಾದ ಅವಮಾನದ ಸೇಡ ತೀರಿಸಿಕೊಳ್ಳು ಹಠ ಹಿಡಿದಿದ್ದರಿಂದ ಯುದ್ಧ ಅನಿವಾರ್ಯವಾಯಿತು ಎಂಬ ಸತ್ಯವನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು, ಹೆಣ್ಣಿನ ಕಣ್ಣೀರು ಮತ್ತು ಸೇಡುಭಾವಣೆ ಪ್ರಳಯಾಂತಕ ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಜಗಕ್ಕೆ ನೀಡಿರುವರು, ಅದು ಸಾರ್ವಕಾಲಿನ ಸತ್ಯವಾಗಿದೆ.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ