
ಹರುಷಗೊಂಡ ಕೇಳಿ ಸೀತೆ ನುಡಿ ವಾನರವ್ಯಾಘ್ರ, I
ವಾಕ್ಯ ವಿಶಾರದ ಹನುಮ ಸೀತೆಗೆ ನುಡಿದ: “ ಸ್ತ್ರಿ ಪಾವಿತ್ರ್ಯ,II
ಸ್ವಭಾವದ ನಿನ್ನ ಮಾತುಗಳು ಯೋಗ್ಯ, I
ತರವಲ್ಲ ಪ್ರವಾಸ ನಿನಗೆ ನೂರು ಯೋಜನೆ ದೂರು ಬೆನ್ನ್ಮೇಲೆ; II
‘ಪತಿಯ ಹೊರತು ಮುಟ್ಟರು ಪರಪುರುಷ ದೇಹ ಸ್ತ್ರೀ’I
ಪತಿವ್ರತೆಯಿಂದ ಮಾತ್ರ ಬರಲು ಸಾಧ್ಯ ಈ ಮಾತು; II
ಓ ದೇವಿ, ನಿನ್ನ ಶೋಕ ವ ನಿನ್ನ ನುಡಿಗಳನ್ನು I
ನಾ ಮುಟ್ಟಿಸುವೆ ರಾಮನಿಗೆ, ಸಂಪೂರ್ಣ ವಾರ್ತೆ; ಓ ದೇವಿ, II
ರಾಮನ ಹಿತಕ್ಕಾಗಿ ನಾನೆಲ್ಲ ನುಡಿದೆ, ನಿನ್ನೊಯುವ ಮಾತು, I
ಅಸಾಧ್ಯತೆ ತಿಳಿದು ಸಮುದ್ರ ದಾಟಿ ಲಂಕೆಗೆ ಬರುವ; II
ಓ ನಿಷ್ಕಳಂಕ ಸೀತೆ, ನೀ ನನ್ನೊಂದಿಗೆ ಬರದಿದ್ದರೂI
ರಾಮನಿಗೆ ತೋರಿಸಲು ಕೊಡು ನಿನ್ನ ಗುರುತಾದರೂ”;II
ಕೇಳಿ ಹನುಮನ ನುಡಿ, ಸೀತೆ ನಡಿದಳು:I
“ ನೆನಪಿಸು ನನ್ನ ಪತಿಗೆ ಈ ಘಟನೆ: ಬಹಳ ದಿನಗಳ ಹಿಂದೆ,II
ಹೂ ಹಣ್ಣು ಗೆಡ್ಡೆ ಭರಿತ ಈಶಾನ್ಯ-ಅರಣ್ಯದಲಿI
ವಾಸವಾಗಿದ್ದೆವು ಚಿತ್ರಕೂಟ ಆಶ್ರಮದಲಿ, II
ಸಣ್ಣ ಜಲಪಾತಗಳಲ್ಲಿ ಮಿಂದು ಅಹ್ಲಾದಕರ ಹೂ ಬಳ್ಳಿI
ಮಧ್ಯೆ ಒದ್ದೆಯಾಗಿ ಕುಳಿತಾಗ ಬಂಡೆ ಮೇಲೆ, II
ಬಂತಲ್ಲಿ ಮಾಂಸ ಹುಡುಕುತ ಕಾಗೆಯೊಂದುI
ಶುರುಮಾಡಿತು ಮಾಂಸವೆಂದು ನನ್ನ ವಕ್ಷ ಕುಕ್ಕಲು; II
ನಾನೆಷ್ಟೇ ದೂರಟ್ಟಿದರೂ ಕಾಗೆI
ಪದೇ ಪದೇ ಬಂದು ಕುಕ್ಕಿತು ಆಹಾರವೆಂದೆ, II
ಕಳಚಿತು ಮೇಲುಡಿಗೆ ಕಾಗೆ ಕಾಟಕ್ಕೆI
ರಾಮ ನಕ್ಕನು ಕಂಡು ನನ್ನ ಲಜ್ಜೆ , II
ಮಲಗಿದೆ ರಾಮನ ಮಡಿಲಲಿ ಕೋಪದಿI
ಸಮಾಧಾನ ಪಡಿಸಿದ ನನ್ನ ರಾಮ,II
ಕಾಗೆ ಹಿಂಸೆಗೆ ತೊಯ್ದಗಣ್ಣುಗಳನು ಒರೆಸಿI
ಕಾಗೆ ಉಪಟಳ ಬಗ್ಗೆ ತಿಳಿಸಿದೆ ರಾಮನಿಗೆ, II
ಮಲಗಿದೆ ದೀರ್ಘಕಾಲ ಮಡಿಲಲ್ಲಿ ರಾಮನI,
ಪ್ರತಿಯಾಗಿ ರಾಮನ ಮಲಗಿದ ನನ್ನ ತೋಳುಗಳಲಿ, II
ಪುನಃ ಆ ಕಾಗೆ ನನ್ನ ಬಳಿ ಬಂತುI
ಪದೇ ಪದೇ ಕುಕ್ಕಿತು ನನ್ನ ವಕ್ಷಗಳ, II
ನನ್ನ ರಕ್ತಹನಿಗಳಿಂದ ತೊಯ್ದ ರಾಮ I
ಎಚ್ಚತ್ತ ಸುಖ ನಿದ್ರೆಯಿಂದ, II
ಅಜಾನುಬಾಹು ರಾಮ ನೋಡಿ ಎನ್ನ ರಕ್ತಸಿಕ್ತ I
ಎದೆ ಸರ್ಪದಂತೆ ಬುಸ್ಗುಡುತ ಕೇಳಿದ ಎನಗೆ: “ ಓ ದಿಂಡಿನಂತಹ II
ತೊಡೆಯ ಸೀತೆ, ಯಾರು ಮಾಡಿದರು ಗಾಯ ನಿನ್ನೇದೆಗೆ? I
ಸರ್ಪಕೋಪದೊಡೆ ಆಟವಾಡಿದವರ್ಯಾರು?” II
ರಕ್ತ ಕಲೆ ತೀಕ್ಷಣ ಉಗುರಿನ ಕಾಗೆI
ಕಂಡು ನನ್ನೇದಿರು ಕುಳಿತಿದ್ದನು ರಾಮ, II
ತಕ್ಷಣ ಕೋಪಗೊಂಡ ರಾಮI
ನಿರ್ಧರಿಸಿದ ವಧಿಸಲು ಕಾಗೆಯನು, II
ಹಿರಿದು ಹಾಸಿಗೆಯಿಂದ ಕುಶಹುಲ್ಲಿನ ಗರಿI
ಮಾಡಿದ ಅಸ್ತ್ರ ಸಂಹರಿಸಲು ಕಾಗೆ, II
ಗರಿ-ಅಸ್ತ್ರ ಬೆನ್ನಟ್ಟಲು ಕಾಗೆಯನುI
ಹೆದರಿ ಕಾಗೆ ಬಂತು ರಾಮನ ಶರಣಕ್ಕೆ, II
ತಗೆಯದೆ ರಾಮನ ಅಸ್ತ್ರ ಪ್ರಾಣ,| ಬಲಗಣ್ಣು ತಗೆಯಿತು ಕಾಗೆಯ, ಗೂಡು ಸೇರಿತು ಕಾಗೆ, II
ಎನಗೆ ಉಪಟಳ ಕೊಟ್ಟ ಕಾಗೆ ವಧಿಸಲು ಹುಲ್ಲುಗರಿ ಆಯುಧ I
ಮಾಡಿದ ರಾಮ,ಎನ್ನ ಹೃತನನ್ನು ಕ್ಷಮಿಸುವನೇ? II
ಸುಂದರಕಾಂಡ
ಆದಿಕವಿ ವಾಲ್ಮೀಕಿಯು ಸೀತೆಯು ಹನುಮಾನನೊಂದಿಗೆ ರಾಮನ ಬಳಿ ಹಿಂದಿರುಗಲು ಒಪ್ಪದಿದ್ಧಾಗ ಅವಳಿಂದ ಪ್ರತಿಯಾಗಿ ರಾಮನಿಗೆ ಗುರುತ ಕೊಡಲು ಹನುಮಾನನು ಸೀತೆಯಲ್ಲಿ ಅರುಹಿದಾಗ ಅವರ ಮಧ್ಯೆ ನಡೆದ ಸಂವಾದದ ವಿವರಣೆ ನೀಡಿದ ಹಾಗು ಕೆಲವು ಮಹತ್ವದ ವಿಚಾಗಳನ್ನೂ ಹಂಚಿಕೊಂಡ ಸಂಗತಿಗಳ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ನೀಡಿರುವರು, ಅದರಲ್ಲಿಯ ಮುಖ್ಯಾಂಶಗಳು:(1) ವಾಕ್ಯ ವಿಶಾರದ ಹನುಮನು: ಕಿಷ್ಕಿಂಧಕಾಂಡದಲ್ಲಿ ರಾಮನು ಹನುಮನ ವಿದ್ವತ್ವನ್ನು ಕಂಡು ಹನುಮನನ್ನು ಸಭ್ಯಭಾಷಿ ಎಂದು ಗುರುತಿಸಿದಂತೆ ಇಲ್ಲಿ ಸೀತೆಯು ಅವನನ್ನು ವಾಕ್ಯ ವಿಶಾರದ ಮತ್ತು ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಹೊಂದಿದವನೆಂದು ಹನುಮಾನನ್ನು ಗುರುತಿಸುವಳು. (2) ಪತಿವ್ರತೆ ಸ್ವಭಾವ: ಹನುಮಾನನು ಸೀತೆಯು ತನ್ನ ಬೆನ್ನೇರಲು ಹಿಂಜರಿದಾಗ ಅವಳಗೆ ಹೀಗೆ ನುಡಿದನು “ ಸ್ತ್ರೀ ಪಾವಿತ್ರ್ಯ ಸ್ವಭಾವದ ನಿನ್ನ ಮಾತುಗಳು ಯೋಗ್ಯ, ನಿನಗೆ ನೂರು ಯೋಜನೆ ದೂರು ಬೆನ್ನ್ಮೇಲೆ ಪ್ರವಾಸ ತರವಲ್ಲ; ‘ಸ್ತ್ರೀಯು ಪತಿಯ ಹೊರತು ಪರಪುರುಷನ ದೇಹ ಮುಟ್ಟಳು’ ಈ ಮಾತು ಪತಿವ್ರತೆಯಿಂದ ಮಾತ್ರ ಬರಲು ಸಾಧ್ಯ” ಅಲ್ಲಿ ಹನುಮಾನನು ಪತಿವ್ರತೆ ಸ್ವಭಾವದ ಬಗ್ಗೆ ಉಲ್ಲೇಖಿಸಿರುವನು. (3) ಪ್ರಾಂಜಲ ಮನ: ಹನುಮಾನನ ಮನ ಪ್ರಾಂಜಲವೆಂಬದನ್ನು ರಾವಣನ ಅಂತಪುರದಲ್ಲಿ ಸೀತೆಯನ್ನು ಹುಡುಕಲು ಅನಿವಾರ್ತೆಯಿಂದ ಪರಸ್ತ್ರೀಯರ ಮುಖ ನೋಡಿ ವಿವರಣೆಯಂತೆ ಹನುಮನು ಸೀತೆ ಹೊತ್ತೋಯ್ಯುವ ಉದ್ಧೇಶವು ತನ್ನ ಪ್ರಾಂಜಲ ಮನಸಿನದು ಎಂದು ತನ್ನ ಪ್ರಾಂಜಲ ಮನಸ್ಸಿನ ಬಗ್ಗೆ ತಿಳಿಸಲು ಅವನು ಸೀತೆಗೆ “ ಓ ದೇವಿ, ಹೊತ್ತೋಯ್ಯುವ ಮಾತು ನಾನು ಸಮುದ್ರ ದಾಟಿ ಲಂಕೆಗೆ ರಾಮನು ಬರುವ ಅಸಾಧ್ಯತೆ ತಿಳಿದು ರಾಮನ ಹಿತಕ್ಕಾಗಿ ನುಡಿದೆನು” ಎಂದು ಸ್ಪಷ್ಠಿ ಕರಿಸುವನು. (4) ಸೀತೆ ಗುರುತು: ರಾಮನಿಗೆ ನಿನ್ನ ವಾರ್ತೆಗಳನ್ನು ಹೇಳುವದರ ಜತೆ ಅದನ್ನು ದೃಢಿಕರಿಸಲು ಹನುಮಾನನು “ ಓ ನಿಷ್ಕಳಂಕ ಸೀತೆ, ನೀನು ನನ್ನೊಂದಿಗೆ ಬರದಿದ್ದರೂ ರಾಮನಿಗೆ ತೋರಿಸಲು ನಿನ್ನ ಗುರುತಾದರೂ ಕೊಡು” ಎಂದು ಕೋರಿದಾಗ ಸೀತೆಯು (ಅ) ಚಿತ್ರಕೂಟ ಆಶ್ರಮದಲಿ ಅವರು ವಾಸವಾಗಿದ್ದಾಗ ಸಣ್ಣ ಜಲಪಾತಗಳಲ್ಲಿ ಮಿಂದು ಅಹ್ಲಾದಕರ ಹೂ ಬಳ್ಳಿ ಮಧ್ಯೆ ಒದ್ದೆಯಾಗಿ ಬಂಡೆ ಮೇಲೆ ಕುಳಿತಾಗ ಕಾಗೆಯೊಂದು ಮಾಂಸ ಹುಡುಕುತ ಬಂತಲ್ಲಿ ಹಾಗು ತನ್ನ ವಕ್ಷ ವನ್ನು ಮಾಂಸವೆಂದು ತಿಳಿದು ಕುಕ್ಕಿದ, ಅದನ್ನು ಕಂಡು ರಾಮನಿ ಸಿಟ್ಟಿನಿಂದ ಕಾಗೆಯ ಮೇಲೆ ಹುಲ್ಲಿನ ಅಸ್ತ್ರ ಬಿಟ್ಟ ಘಟನೆ ನೆನಪಿಸುತ ತನಗೆ ಉಪಟಳ ಕೊಟ್ಟ ಕಾಗೆ ವಧಿಸಲು ಹುಲ್ಲುಗರಿ ಆಯುಧ ಮಾಡಿದ ರಾಮನು ನನ್ನ ಅಪಹರಿಸಿದ ರಾವಣನನ್ನು ಕ್ಷಮಿಸುವನೇ? “ ಎಂದು ವಿವರಿಸುತ್ತ ಅದನ್ನು ರಾಮನಿಗೆ ನೆನಪಿಸಲು ಹೇಳಿದಳು, ಮತ್ತು (ಬ) ಸೀತೆಯು ತನ್ನ ಗುರುತಿಗಾಗಿ ಹನುಮಾನನಿಗೆ “ನಾನು ಸತ್ಯ ನುಡಿಯುವೆ, ಪದೇ ಪದೇ ತಿಳಿಸು ರಾಮನಿಗೆ ಒಂದು ಮಾಸ ಮಾತ್ರ ರಾಮನಿಗಾಗಿ ನಾನು ಜೀವಿಸುವೆನು” ಎಂದು ಉಸುರುತ ಸೀತೆಯು ತನ್ನ ತಲ್ಮೇಲಿನ ಚೂಡಾಮಣಿ-ಆಭರಣ ಬಿಚ್ಚಿ ಗುರುತಿಗಾಗಿ ರಾಮನಿಗೆ ಕೊಡಲು ಹನುಮನಿಗೆ ಕೊಟ್ಟುಳು. ಹೀಗೆ ಸೀತೆಗೆ ರಾಮನ ಬಗ್ಗೆ ಮತ್ತು ರಾಮನಿಗೆ ಸೀತೆ ಬಗ್ಗೆ ವಾರ್ತೆ ತಿಳಿದು ಮನವರಿಕೆ ಮಾಡಿಕೊಳ್ಳು ಬಳಸಿತ ಆಭರಣ ಗುರುತು ಮತ್ತು ಘಟನೆಗಳ ಕಥೆ ಸಹಾಯಕ ಮಾದ್ಯಮಗಳಾಗಿದ್ದು ಹಾಗು ರಾಮದೂತ ಹನುಮಾನ ಎಸಗಿದ ಕಾರ್ಯದ ಬಗ್ಗೆ ಅವು ಪುರಾವೆಗಳಾದವು, ತದ್ಮೂಲಕ ಆದಿಕವಿ ವಾಲ್ಮೀಕಿಯು ರಾಜದೂತನ ಕಾರ್ಯ ವೈಖರಿ ಮತ್ತು ರಾಜದೂತಶಾಸ್ತ್ರದ ವಿವರಣೆಯನ್ನು ನೀಡಿರುವರು, ತದ ನಂತರದ ಸಾಹಿತ್ಯಗಳಲ್ಲಿ ಆಭರಣ ಗುರುತು ಮಾಧ್ಯಮ ಬಳಿಕೆ ಪರಂಪರೆ ಆರಂಭವಾಯಿತು ಕವಿಕಾಳಿದಾಸರು ಇದ್ದಕ್ಕೆ ಹೊರತಲ್ಲ. ಕಾಗೆ ಕಥೆ ವಿಷಯದಲ್ಲಿ ನಂತರದ ಕವಿಗಳು, ಸಂಕೀರ್ತನಕಾರರು ವಿಭಿನ್ನ ರೀತಿಯ ವಿವರಣೆಗಳನ್ನು ನೀಡಿರುವರು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
