ದಂಡಗುಂಡ ಶ್ರೀಗಳ ಮೌನಾನುಷ್ಠಾನ

By admin

ಕಲಬುರಗಿ: ಅಪಾರ ಭಕ್ತರ ಆರಾಧ್ಯ ದೇವರು, ಬೇಡಿದ ಭಕ್ತರ ಕಾಮದೇನು ಆಗಿರುವ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ದಂಡಗುಂಡ ಮಠದ ಶ್ರೀಗುರುಸಂಗಮೇಶ್ವರ ಗದ್ದುಗೆ ಪಕ್ಕದಲ್ಲಿರುವ ಪವಿತ್ರ ಗವಿಯಲ್ಲಿ ಹಾಲಿ ಪೀಠಾಧಿಪತಿ ಸಂಗನಬಸವ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿ ೨೧ ದಿನಗಳ ಪೂಜಾ ಮೌನಾನುಷ್ಠಾನವನ್ನು ಕೈಗೊಂಡಿದ್ದಾರೆ.
ಶ್ರೀಮಠದ ಗುರು ಪರಂಪರೆಯಲ್ಲಿ ಆಗಿಹೋದ ಎಲ್ಲ ಶಿವಾಚಾರ್ಯರು ಅನುಷ್ಠಾನ ಕೈಗೊಂಡಿರುವ ಗದ್ದುಗೆಯ ಪಕ್ಕದ ಗವಿಯಲ್ಲಿ ಗುರು ಪರಂಪರೆಯಂತೆ ಶ್ರೀಗಳು ಮೌನಾನುಷ್ಠಾನ ಕೈಗೊಂಡಿದ್ದು, ಇದು ಡಿ.೩೧ ರಂದು ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಭಕ್ತರು ಆಗಿರುವ ಸಾಮಾಜಿಕ ಹೋರಾಟಗಾರ, ಪತ್ರಕರ್ತ ಸಂತೋಷಕುಮಾರ ಗುಡಿಮನಿ ತಿಳಿಸಿದ್ದಾರೆ. ಶ್ರೀಗಳು ನಿತ್ಯವಮಧ್ಯಾಹ್ನ ೩ ರಿಂದ ೫ರ ವರೆಗೆ ಭಕ್ತರಿಗೆ ದರ್ಶನ ನೀಡಲಿದ್ದಾರೆಂದು ಅವರು ಹೇಳಿದ್ದಾರೆ. ಮೌನಾನುಷ್ಠಾನದ ಮುಕ್ತಾಯದ ದಿನದಂದು ಗವಿಯ ದರ್ಶನ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.