
ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಹೊಸ ವರ್ಷ ಸಮೀಸುತ್ತಿದಂತೆ ಬಹಳಷ್ಟು ಯುವಕರು ಮದ್ಯೆಪಾನ ಸೇರಿದಂತೆ ಇತರೆ ದುಚಟ್ಟಕ್ಕೆ ಬಲಿಯಾಗದು ಹೆಚ್ಚಾಗಿದೆ ಯುವಕರು ಈ ದುಚಟ್ಟದಿಂದ ದೂರವಿರಬೇಕು
ಗುಣಮಟ್ಟದ ಹಣ್ಣು ಹಂಪಲು ತಿನ್ನುವುದರಿಂದ ಯುವಕರ ಆರೋಗ್ಯದಿಂದ ಸದೃಢರಾಗುತ್ತಾರೆ ಎಂದು ಸಾಮಾಜಿಕ ಹೋರಾಟ ಗಾರ ಉಮೇಶ್ ಕೆ ಮುದ್ನಾಳ ಯುವಕರಿಗೆ ಕಿವಿ ಮಾತು ಹೇಳಿದರು.
ರವಿವಾರ ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮದ ಹಣಮಂತಪ್ಪ ಚಂದಪ್ಪ ಕೋಳಿ ಇವರ ಜಮೀನಲ್ಲಿ
ಸುಮಾರು 5 ವರ್ಷಗಳಿಂದ ಈ ಕಾರ್ಯವನ್ನು ನಾವು ನೈಸರ್ಗಿಕವಾಗಿ ಮತ್ತು ವಿನೂತನವಾಗಿ ಹೊಸ ವರ್ಷ ಆಚರಣೆ ಮಾಡುತ್ತಾ ಬಂದಿದೆವೇ ಕೇಕ್ ಕತ್ತರಿಸೋದು ಬೇಡ ಎಣ್ಣೆ ಪಾರ್ಟಿ ಬೇಡವೆ ಬೇಡ. ಗುಂಡಿನ ಪಾರ್ಟಿ ಮಾಡಿ ದುಂದು ವೆಚ್ಚಕ್ಕೆ ಬ್ರೇಕ್ ಹಾಕಿ ರೈತ ಬೆಳೆದ ಹಣ್ಣು ಹಂಪಲು ಮತ್ತು ತರಕಾರಿ ಖರೀದಿಸಿ ಸೇವನೆ ಮಾಡಿ ಹೊಸ ವರ್ಷ ಆಚರಿಸಿ ಎಂದು ಕರೆ ನೀಡಿದರು.
ಈ ವರ್ಷ ಬರಗಾಲದಿಂದ ರೈತರು ಕಂಗಲಾಗಿದ್ದಾರೆ ಅವರು ಕಷ್ಟವನ್ನು ಎದುರಿಸುತ್ತಿದ್ದಾರೆ ಇಗಾಗಿ ಅವರ ಕಷ್ಟವನ್ನು ನಾವು ನೀಗಿಸಬೇಕೆಂದರೆ ಪ್ರತಿಯೊಬ್ಬರು ಅವರು ಬೆಳೆದಿದೆ ಬೆಳೆಯನ್ನು ಖರೀದಿಸಿ ಹೊಸ ವರ್ಷ ಆಚರಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುನಂದಾ, ಪವನ್, ವಿಶಾಲ್, ಹರ್ಷಿತಾ, ರವಿ, ಅನಿಲ್, ಶಿವು, ವಿಜಯ, ಪ್ರಭು, ಯಲಾಲಿಂಗ, ಜಗದೀಶ್, ಅಂಪಯ್ಯ, ಸಾಬರೆಡ್ಡಿ, ನೇತ್ರಾ, ಸೇರಿದಂತೆ ಅನೇಕ ಇದ್ದರು
