
ಬೀದರ್:ಪೆಟ್ರೋಲ್, ಡೀಸೇಲ್ ಪೂರೈಕೆ ಎಂದಿನಂತೆ ಇರಲಿದೆ. ಹೀಗಾಗಿ, ಬೀದರ್ ಜಿಲ್ಲೆಯ ಸಾರ್ವಜನಿಕರು ಯಾವುದೇ ವದಂತಿ, ಸುಳ್ಳು ಮಾಹಿತಿಗೆ, ಕಿವಿಗೊಡಬೇಡಿ. ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತವಾಗಲಿದೆ ಎನ್ನುವ
ವದಂತಿಯನ್ನು ನಂಬಿದ ಜನ ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನದಿಂದಲೇ ಜನ ಪೆಟ್ರೋಲ್ ಬಂಕ್ ಗಳಿಗೆ ಮುಗಿ ಬಿದ್ದು, ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುವುದು ಕಂಡು ಬಂದಿದೆ.
ಲಾರಿ ಮುಷ್ಕರದಿಂದಾದಿ ತೈಲ ಪೂರೈಕೆ ಇರುವುದಿಲ್ಲ ಎನ್ನುವ ಮಾತನ್ನು ನಂಬಿದ ಜನ ಪೆಟ್ರೋಲ್ ಬಂಕ್ ಗಳತ್ತ ಧಾವಿಸಿದರು.
ಬೈಕ್, ಕಾರು, ವಾಹನಗಳಲ್ಲಿ ತೈಲ ತುಂಬಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು.
ವಿಷಯ ತಿಳಿದ ಜಿಲ್ಲಾಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ತೈಲ ಪೂರೈಕೆ ಎಂದಿನಂತೆ ಇರಲಿದೆ. ಯಾವುದೇ ಆತಂಕ ಬೇಡ ಎಂದು ಜಿಲ್ಲೆಯ ಜನತೆಗೆ ತಿಳಿಸಿದ್ದಾರೆ.
