ಬಂದರು ರಾಮನದೊತರು ವಾಲ್ಮೀಕಿ ಆಶ್ರಮಕೆ

By admin


ಬಂದರು ರಾಮನದೊತರು ವಾಲ್ಮೀಕಿ ಆಶ್ರಮಕೆI
ಮುನಿಗಳಿಗೆ ಕೈ ಮುಗಿದು ತಿಳಿಸಿದರು ರಾಜಾರಾಮನ ಆಹ್ವಾನ: II
“ಮುನಿಗಳೆ ನಾವು ರಾಮನ ದೂತರು, I
ನೈಮಿಶ ಅರಣ್ಯದ ಗೋಮತಿನದಿ ದಡದಲಿ ಏರ್ಪಡಿಸಿಹರು ಯಜ್ಞ,II
ಆಶ್ರಮವಾಸಿಗಳೊಂದಿಗೆ ಉಪಸ್ಥಿತರಾಗಿ ರಾಜನಿಗೆI
ಆಶಿರ್ವದಿಸಲು ತಮಗೆ ಆಹ್ವಾನ ವಿದೆ”. II
ದೂತರಿಂದ ಸಂದೇಶ ತಿಳಿದ ಮುನಿ ವಾಲ್ಮೀಕಿI
ಸ್ವಾಗತಿಸಿ ದೂತರಿಗೆ ಆತಿಥ್ಯ ನೀಡಿದರು; II
ವಿಶ್ರಮಿಸಿ ಪಯಣ ಮುಂದುವರೆಸಲು ದೂತರಿಗೆI
ಹೇಳಿದರು ವ್ಯಾಧ ಮುನಿ ವಾಲ್ಮೀಕಿ; II
ಸುದ್ಧಿ ತಿಳಿದ ಸೀತೆ ಬಂದಳು ಕಶ ಲವರೊಂದಿಗೆI
ವಾಲ್ಮೀಕಿ ಮುನಿ ಬಳಿ, ಕೋರಿದಳು: II
“ತಂದೆ ಮಹಾಮುನಿ ಎನ್ನ ಮಕ್ಕಳು ಅನಾಥರಲ್ಲI
ಅವರಿಗೆ ಅವರ ಬಂಧುಬಳಗ ತಿಳಿಯುವ ಹಕ್ಕು; II
ತಾವು ತಮ್ಮಶಿಷ್ಯ ಕುಶ ಲವರನ್ನು ಕರೆದೊಯ್ಯಿರಿI
ನಿಮ್ಮೊಂದಿಗೆ, ನೋಡಲಿ ಅವರು ತಂದೆಯನು.” II
ತಾಯಿಯ ಅಳಲನ್ನು ತಿಳಿದ ವಾಲ್ಮೀಕಿ ಮುನಿI
ಸಂತೈಸುತ ಸೀತೆಯನ್ನು ಅವಳಗೆ ನುಡಿದ:” ಮಗಳೇ,II
ಎಲ್ಲವೂ ದೈವದಿಚ್ಚೆ, ಕಾಲಕೂಡಿ ಬಂದಿದೆ,I
ನಿಸ್ಸಂದೇಹ, ಪೂರ್ಣಗೊಳ್ಳಲಿದೆ ನಿನ್ನ ಬಯಕೆ: II
ಸಜ್ಜು ಮಾಡು ಕರೆದೊಯ್ಯುವೆ ಲವ ಕುಶರನುI
ಬರಲಿ ಅವರೊಂದಿಗೆ ಕಾಣಲು ರಾಮನ ಕುಶಜಳು;II
ಸಂತೋಷದಿ ಸೀತೆ ಸಜ್ಜು ಮಾಡಿದಳು ಕುಶ ಲವರನ್ನು I
ಮಕ್ಕಳಿಗೆ ಬೋಧಿಸದಳು:” ಮಕ್ಕಳೇ, ಅದು ಹೊಸ ತಾಣ, II
ಅಕ್ಕ ಕುಶಜಳೊಂದಿಗೆ ಇರಬೇಕು, ಹಠ ಮಾಡಬಾರದು,I
ಮುನಿಗಳ ಅಪ್ಪಣೆಯಿಲ್ಲದೇ ತಿರುಗಬಾರದು ಅತಿತ್ತ; II
ಎಲ್ಲರೊಂದಿಗೆ ವಿನಮ್ರತೆದಿ ವರ್ತಿಸ ಬೇಕು ಮೃದುಭಾಷೆ ಬಳಿಸಬೇಕು,I
ಅಗತ್ಯವಿದ್ದಾಗ ಮಾತನಾಡಬೇಕು;II
ಮುನಿಗಳು ಪರಿಚಯಿಸಿದವರನ್ನು ಕಣ್ಣು ತುಂಬ ನೋಡಿ,I
ಕಂಡು ಅಯೋಧ್ಯೆರಾಜನ ಆತ್ಮೀಯವಾಗಿ ಆನಂದಿಸಿ”.II
ಕುಶಜ, ಕುಶ, ಲವ ಹೊರಟರು ವಾಲ್ಮೀಕಿ ಮುನಿಯೊಂದಿಗೆI
ಅಯೋಧ್ಯಾನಗರಕ್ಕೆ, ಅಶ್ವಮೇಧಯಜ್ಞ ತಾಣಕ್ಕೆ, II
ನದಿ ಕೊಳ್ಳಗಳನ್ನು ದಾಟುತ, ರಾಮನ ಚರಿತೆ ಹಾಡುತ I
ನಾಲ್ಕು ರಾತ್ರಿಗಳ ಕಳೆದು ತಲುಪಿದರು ಅಯೋಧ್ಯೆ; II
ಕಶಜ ಕುಶ ಲವರನ್ನು ಸುತ್ತಾಡಿಸಿ ಮುನಿ ವಾಲ್ಮೀಕಿI
ಅಯೋಧ್ಯೆಯ ದರ್ಶನ ಮಾಡಿಸಿದರು, ರಾಮಕಥಾ ಹಾಡಿಸುತ; II
ಕೇಳಿ ರಾಮ ಚರಿತೆ ಲೋಕಗೀತೆ ಬೆರಗಾದರು ಅಯೋಧ್ಯಾ ವಾಸಿಗಳು, I
ಕೊಂಡಾಡಿದರು ಮುನಿ ವಾಲ್ಮೀಕಿಯನು; II
ಪಯಣ ಬೆಳೆಸಿದರು ಗೋಮತಿ ನದಿ ದಡದಲಿI
ಏರ್ಪಡಿಸಿದ ಅಶ್ವಮೇಧಯಜ್ಷ ತಾಣದತ್ತ ವಾಲ್ಮೀಕಿ ಬಳಗ; II
ನದಿ ದಡದಲಿ ನೈಮಿಶ ಅರಣ್ಯದಲಿ ಹಾಕಿದ ಭವ್ಯ ಮಂಟಪ ಬೀಡಾರಗಳು,I
ಜನಸಂದನಿ ಕಂಡು ಬೆರಗಾದರು;II
ತಂಗಿದರು ನದಿ ದಡದಲಿ ದೂರ ತಾಣದ ಬೀಡಾರದಲಿ,I
ಸಂಜೆಯಾಯಿತು, ಸಂಧ್ಯಾವಂದನೆ ಪೂಜೆ ಸಲ್ಲಿಸಿದರು:II
ಕುಶ ಲವರು ರಾಮಚರಿತೆ ಲೋಕಗೀತೆಯನ್ನುI
ಪ್ರಾರಂಭಿಸಿದರು ಮೀಟುತ ಏಕತಾರಾವನ್ನು;II
ಲವ ಕುಶರ ಮಧುರ ಕಂಠದಲಿ ಹೊರಸೂಸುವI
ರಾಮಚರಿತೆ ಗಂಧ ಹರಡಿತು ಎಲ್ಲ ದೆಸೆಗಳಲ್ಲೂ; II
ಗೀತೆ ಕೇಳಿ ಬೆರಗಾದರು ಋಷಿ ಮುನಿ ಪಂಡಿತ ಪಾಮರI
ಸೈನಿಕರು, ಸೇವಕರು, ರಾಜರು, ಪ್ರಜೆಗಳು; II
ಸ್ತ್ರೀಯರು ಸೀತೆಯಗಾಥೆ ಕೇಳಿ ಕಣ್ಣಿರಿಟ್ಟರು,I
ಮುಟ್ಟಿತು ಸುದ್ದಿ ಅಯೋಧ್ಯೆಯ ರಾಜಮಾತೆಯರಿಗೆ; II
ರಾಮಚರಿತೆ ಲೋಕಗೀತೆಯಲ್ಲಿ ಬಹು ರಾತ್ರಿ ಕಳೆಯಿತು,I
ಕಳೆದರು ಲವ ಕುಶರು ಆ ರಾತ್ರಿ ವಾಲ್ಮೀಕಿ ರಕ್ಷಣೆಯಲಿ;II
ಉತ್ತರಕಾಂಡ

ರಾಮನ ದೂತರು ತನ್ನ ಆಶ್ರಮಕ್ಕೆ ಬಂದು ರಾಮನು ಏರ್ಪಡಿಸಿದ ಅಶ್ವಮೇಧ ಯಜ್ಞಕ್ಕೆ ಬರಲು ಆಮಂತ್ರಣ ನೀಡಿದ, ಸೀತೆ ಆ ವಿಷಯ ತಿಳಿದು ವಾಲ್ಮೀಕಿ ಮುನಿಗಳಲ್ಲಿ ತನ್ನ ಮಕ್ಕಳು ಅವರ ತಂದೆಯನ್ನು ಕಾಣುವ ಹಕ್ಕಿನ ಬಗ್ಗೆ ಮಾಡಿಕೊಂಡ ಕೋರಿಕೆ; ಕುಶ, ಲವ ಮತ್ತು ಕುಶಜಳನ್ನು ಯಜ್ಞಕ್ಕೆ ಕರೆದೋಯ್ಯುವ ಮುನಿಗಳ ಇಂಗಿತ, ಸೀತೆ ಮಕ್ಕಳಿಗೆ ಯಜ್ಞ ಸ್ಥಳದಲ್ಲಿ ಶಿಸ್ತಿನಿಂದ ವರ್ತಿಸಲು ನೀಡಿದ ಉಪದೇಶ, ಲವ ಕುಶರು ವಾಲ್ಮಿಕಿ ಮುನಿಯೊಂದಿಗೆ ಅಯೋಧ್ಯೆ ಬಿದಿ ಬಿದಿ ಸುತ್ತಿ ರಾಮಾಯಣ ಲೋಕ ಗೀತೆ ಹಾಡಿದ, ಅಯೋಧ್ಯಾವಾಸಿಗಳ ಮನಗೆದ್ದ, ಗೋಮತಿನದಿ ದಡದಲಿ ಯಜ್ಞ ನಡೆದ ಸ್ಥಳದಲ್ಲಿ ವಾಲ್ಮೀಕಿ ಮುನಿಗಳೊಂದಿಗೆ ವಾಸವಿದ್ದ ಮತ್ತು ಅಲ್ಲಿ ಲವ ಕುಶರು ರಾಮಾಯಣ ಲೋಕಗೀತೆ ಹಾಡಿದ ಸಂಗತಿಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದಲ್ಲದೆ ಆದಿ ಕವಿಯು (1) ಮಕ್ಕಳ ಹಕ್ಕಿನ ಪ್ರಸ್ತವಣೆ, (2) ತಾಯಿಯಿಂದ ಶಿಸ್ತಿನ ಬೋಧನೆ ಮತ್ತು (3) ರಾಮಾಯಣ ಲೋಕಗೀತೆ. ಹೀಗೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿರುವರು:
ರಾಮನ ದೂತರು ವಾಲ್ಮೀಕಿ ಆಶ್ರಮಕೆ ಬಂದರು, ಮುನಿಗಳಿಗೆ ಕೈ ಮುಗಿದು ರಾಜಾರಾಮನ ಅಶ್ವಮೇಧಯಜ್ಞದ ಆಹ್ವಾನವನ್ನು ತಿಳಿಸಿದರು “ಮುನಿಗಳೆ ನಾವು ರಾಜಾ ರಾಮನ ದೂತರು, ನೈಮಿಶ ಅರಣ್ಯದಲಿ ಗೋಮತಿ ನದಿ ದಡದಲಿ ಏರ್ಪಡಿಸಿರುವರು ಅಶ್ವಮೇಧಯಜ್ಞ, ಆಶ್ರಮವಾಸಿಗಳೊಂದಿಗೆ ಉಪಸ್ಥಿತರಾಗಿ ರಾಜನಿಗೆ ಆಶಿರ್ವದಿಸಲು ತಮಗೆ ಆಹ್ವಾನವಿದೆ.” ದೂತರಿಂದ ಸಂದೇಶ ತಿಳಿದ ಮುನಿ ವಾಲ್ಮೀಕಿಯು ದೂತರಿಗೆ ಸ್ವಾಗತಿಸಿ ಆತಿಥ್ಯ ನೀಡಿದರು; ಕೆಲಕಾಲ ವಿಶ್ರಮಿಸಿ ಪಯಣ ಮುಂದುವರೆಸಲು ದೂತರಿಗೆ ವ್ಯಾಧ ಮುನಿ ವಾಲ್ಮೀಕಿ ಹೇಳಿದರು ಅಶ್ವಮೇಧಯಜ್ಞ ಸುದ್ಧಿ ತಿಳಿದ ಸೀತೆಯು ಕಶ ಲವರೊಂದಿಗೆ ವಾಲ್ಮೀಕಿ ಮುನಿ ಬಳಿ ಬಂದು ಕೋರಿದಳು “ತಂದೆ ಮಹಾಮುನಿ ನನ್ನ ಮಕ್ಕಳು ಅನಾಥರಲ್ಲ, ಅವರಿಗೆ ಅವರ ಬಂಧುಬಳಗ ತಿಳಿಯುವ ಹಕ್ಕುಯಿದೆ; ತಾವು ತಮ್ಮ ಶಿಷ್ಯ ಕುಶ ಲವರನ್ನು ನಿಮ್ಮೊಂದಿಗೆ ಕರೆದೊಯ್ಯಿರಿ, ಅವರು ತಮ್ಮ ತಂದೆಯನು ನೋಡಲಿ.” ತಾಯಿಯ ದುಃಖ ತಿಳಿದ ವಾಲ್ಮೀಕಿ ಮುನಿಯು ಸೀತೆಯನ್ನು ಸಂತೈಸುತ ಅವಳಗೆ ನುಡಿದರು ” ಮಗಳೇ, ಎಲ್ಲವೂ ದೈವದಿಚ್ಚೆ, ಕಾಲಕೂಡಿ ಬಂದಿದೆ, ನಿಸ್ಸಂದೇಹ, ನಿನ್ನ ಬಯಕೆ ಪೂರ್ಣಗೊಳ್ಳಲಿದೆ; ಸಜ್ಜು ಮಾಡು ಲವ ಕುಶರನು ಅವರನ್ನು ಕರೆದೊಯ್ಯುವೆ, ಅವರೊಂದಿಗೆ ಕಾಣಲು ರಾಮನ ಕುಶಜಳು ಬರಲಿ.” ಸಂತೋಷದಿಂದ ಸೀತೆಯು ಕುಶ ಲವರನ್ನು ಸಜ್ಜು ಮಾಡಿದಳು ಹಾಗು ಮಕ್ಕಳಿಗೆ ಬೋಧಿಸದಳು”ಮಕ್ಕಳೇ, ಅದು ಹೊಸ ತಾಣ, ಅಕ್ಕ ಕುಶಜಳೊಂದಿಗೆ ಇರಬೇಕು, ಹಠ ಮಾಡಬಾರದು, ಮುನಿಗಳ ಅಪ್ಪಣೆಯಿಲ್ಲದೇ ತಿರುಗಬಾರದು ಅತಿತ್ತ ತಿರುಗಬಾರದು ಅತಿತ್ತ; ಎಲ್ಲರೊಂದಿಗೆ ವಿನಮ್ರತೆಯಿಂದ ವರ್ತಿಸ ಬೇಕು, ಮೃದುಭಾಷೆ ಬಳಿಸಬೇಕು,ಅಗತ್ಯವಿದ್ದಾಗ ಮಾತನಾಡಬೇಕು; ಮುನಿಗಳು ಪರಿಚಯಿಸಿದವರನ್ನು ಕಣ್ಣು ತುಂಬ ನೋಡಿರಿ, ಅಯೋಧ್ಯೆಯ ರಾಜನ್ನು ಆತ್ಮೀಯವಾಗಿ ವಂದಿಸಿರಿ”. ಕುಶಜ, ಕುಶ, ಲವ ವಾಲ್ಮೀಕಿ ಮುನಿಯೊಂದಿಗೆ ಅಯೋಧ್ಯಾನಗರಕ್ಕೆ, ಅಶ್ವಮೇಧಯಜ್ಞ ಆಚರಣೆ ತಾಣಕ್ಕೆ ಹೊರಟರು; ನದಿ ಕೊಳ್ಳಗಳನ್ನು ದಾಟುತ, ರಾಮನ ಚರಿತೆ ಹಾಡುತ ನಾಲ್ಕು ರಾತ್ರಿಗಳ ಕಳೆದು ಅಯೋಧ್ಯೆನು ತಲುಪಿದರು; ಕುಶಜ ಕುಶ ಲವರನ್ನು ಸುತ್ತಾಡಿಸುತ್ತ, ರಾಮಕಥಾ ಹಾಡಿಸುತ ಮುನಿ ವಾಲ್ಮೀಕಿಯು ಅವರಿಗೆ ಅಯೋಧ್ಯೆಯ ದರ್ಶನ ಮಾಡಿಸಿದರು; ಬಾಲಕರಿಂದ ರಾಮ ಚರಿತೆ ಲೋಕಗೀತೆ ಕೇಳಿ ಅಯೋಧ್ಯಾ ವಾಸಿಗಳು ಬೆರಗಾದರು, ಮುನಿ ವಾಲ್ಮೀಕಿಯನು ಕೊಂಡಾಡಿದರು; ಅಲ್ಲಿಂದ ಗೋಮತಿ ನದಿ ದಡದಲಿ ಏರ್ಪಡಿಸಿದ ಅಶ್ವಮೇಧಯಜ್ಷ ತಾಣದತ್ತ ವಾಲ್ಮೀಕಿ ಬಳಗ ಪಯಣ ಬೆಳೆಸಿದರು; ನದಿ ದಡದಲಿ ನೈಮಿಶ ಅರ್ಣ್ಯದಲಿ ಹಾಕಿದ ಭವ್ಯ ಮಂಟಪ ಬೀಡಾರಗಳು, ಜನಸಂದನಿ ಕಂಡು ಕುಶ ಲವರು ಬೆರಗಾದರು; ನದಿ ದಡದಲಿ ದೂರ ತಾಣದ ಬೀಡಾರದಲಿ ಅವರು ವಾಲ್ಮೀಕಿ ಮುನಿಯೊಂದಿಗೆ ತಂಗಿದರು, ಸಂಜೆಯಾಯಿತು, ಸಂಧ್ಯಾವಂದನೆ ಪೂಜೆ ಸಲ್ಲಿಸಿದರು; ಮೀಟುತ ಏಕತಾರಾವನ್ನು ಕುಶ ಲವರು ರಾಮಚರಿತೆ ಲೋಕಗೀತೆಯನ್ನು ಪ್ರಾರಂಭಿಸಿದರು; ಲವ ಕುಶರ ಮಧುರ ಕಂಠದಲಿ ಹೊರ ಸೂಸುವ ರಾಮಚರಿತೆ ಗಂಧವು ಎಲ್ಲ ದೆಸೆಗಳಲ್ಲೂ ಹರಡಿತು; ರಾಮಾಯಣ ಲೋಕಗೀತೆ ಕೇಳಿ ಋಷಿ ಮುನಿ ಪಂಡಿತ ಪಾಮರ ಸೈನಿಕರು, ಸೇವಕರು, ರಾಜರು, ಪ್ರಜೆಗಳು ಬೆರಗಾದರು; ಸ್ತ್ರೀಯರು ಸೀತೆಯಗಾಥೆ ಕೇಳಿ ಕಣ್ಣಿರಿಟ್ಟರು, ಈ ಸುದ್ದಿ ಅಯೋಧ್ಯೆಯ ರಾಜಮಾತೆಯರಿಗೆ ಮುಟ್ಟಿತು; ರಾಮನ ಚರಿತೆ ಲೋಕಗೀತೆಯಲ್ಲಿ ಬಹು ರಾತ್ರಿ ಕಳೆಯಿತು, ಲವ ಕುಶರು ಆ ರಾತ್ರಿಯನು ವಾಲ್ಮೀಕಿ ರಕ್ಷಣೆಯಲಿ ಕಳೆದರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.