ಪ್ರಸವನ ಪರ್ತತಗುಹೆಯಲಿ: ಲಕ್ಷ್ಮಣನಿಗೆ ರಾಮ ನುಡಿದ:|

By admin

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕರು ಬೆಳಗಾವಿ.
ಪ್ರಸವನ ಪರ್ತತಗುಹೆಯಲಿ: ಲಕ್ಷ್ಮಣನಿಗೆ ರಾಮ ನುಡಿದ:I
“ಪರ್ವತಗಾತ್ರದ ಮಳೆ ಮೋಡುಗಳು ಮುಸುಕಿವೆ, II
ಮಹಾಸಾಗರವು ಸೂರ್ಯನ ಕಿರಣಗಳಿಗೆ ಗರ್ಭಧರಿಸಿ,I
ಸಲುಹಿ ನವಮಾಸ , ನೀಡುತಿಹವು ಜೀವಜಲಕ್ಕೆ ಜನ್ಮ, II
ಮೋಡಗಳ ನಿಚ್ಚಣಿಕೆ: ಏರಬಹುದಾಕಾಶಕ್ಕೆ, ಕಂಡಿವೆI
ಕಾಡಮಲ್ಲಿಗೆ ಅರ್ಜುನ-ಹೂ ಹಾರಗಳಂತೆ ಸೂರ್ಯನಿಗೆ, II
ಸಂಜೆಹೊತ್ತು ಮೋಡಗಳಂಚಿನ ಬಿಳಿಗೆಂಪುI
ನೋಡು, ಬಟ್ಟೆಗಳ್ಹಾಸಿದಂತೆ ಕಾಣುತಿಹವು,II
ಬೀಸುವ ತಂಗಾಳಿ, ಗಂಧಲೇಪನದಂತೆ ಸೂರ್ಯಾಸ್ತ,I
ಪ್ರೇಮದುಸಿರಾಗಿ ಸೂಸುತಿವೆ ಮೋಡುಗಳ್ಮುಖದಿಂದ, II
ಹೊಸಜಲದಿ ತೋಯ್ಯಿಸುತಿದೆ ಬೆಂದ ಭೂಮಿ ಬಿಸಿಲಿಗೆ,I
ಒಳ ಹೊರ ಸುರಿಯುವ ಸೀತೆ ಕಣ್ಣಿರಿನಂತೆ; II
ಮೋಡುದರದಿಂದ ಬೀಸುವ ತಂಗಾಳಿ: ಕರ್ಪುರ ಕಂಪು,I
ಕೇದಗಿ ತುಂಬಿದ ಬೊಗಸೆದಿ ಸೂಸುವ ಕಂಪು, II
ವೈರಿಯನು ಶಾಂತಗೊಳಿಸಿದ ಸುಗ್ರೀವನಿಗೆ ಕೇದಿಗೆ ಅರ್ಜುನI
ಹೂಗಳ ಕಂಪು ಸೂಸುತಿಹದು,ಪ್ರಸವನದಿ, II
ಕಾರ್ಮೋಡಗಳ ಘರ್ಜನೆ: ಬರುತಿಹದು ಪ್ರತಿದ್ವನಿI
ಶಿಖರ ಗುಹೆಗಳಿಂದ ಯುವ-ಶಿಷ್ಯರ ಪಾಠ ಪಠಿಸಿದಂತೆ, II
ಚಿನ್ನದ ಚಾಬೂಕಿನಂತೆ ಏಟ ನೀಡುವ ಮಿಂಚು,I
ಒಳ ಹೊರ ವೇದನೆದಿ ಬಳಲುವ ಮೋಡಗಳು, II
ಮಿಂಚಿನ ಏಟಿಗೆ ಬಳಲುವ ಮೋಡ, ಕಂಡಿತುI
ಎನಗೆ ರಾವಣ-ಬಿಗಿಮುಷ್ಠಿಗೆ ಬಳಲಿದ ಸೀತೆಯಂತೆ,II
ಪ್ರೇಯಸಿ ಜತೆಯಿದ್ದವರಿಗೀ ನೋಟ ಉಲ್ಲಾಸಕರ I
ಪ್ರೇಯಸಿ ಜತೆಯಿಲ್ಲದವರಿಗೀ ನೋಟ ದುಃಖಕರ, II
ಪರ್ವತ ಮಗ್ಗಲಲಿ ಬೆಳೆದ ಕಾಡ ಮಲ್ಲಿಗೆI
ಮುಖ ಒಡ್ಡುವದು ತಂಪು ಮಳೆಹನಿಗೆ, II
ಬೆಸಿಗೆಕಾಲದ ದಗೆ ಧೂಳ ಸದೆಬಡೆದ ತಂಗಾಳಿI
ಯುದ್ದ ಬಳಿಕ ಜಯಶಾಲಿ ರಾಜನ ನಿಟ್ಟುಸಿರಿನಂತೆ, II
ಹೊರಡುವವು ಮಾನಸ-ಸರೋವರದತ್ತ ಹಂಸ, I
ಚಕ್ರವಾಕ  ಪ್ರೇಯಸಿ ಜೊತೆಯಲ್ಲಿಯೇ ಉಳಿವದು, II
ಕಿಷ್ಕಿಂಧಕಾಂಡ ರಾಮಾಯಣ

ವರ್ಷಾ ಋತು ಆರಂಭದಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳನ್ನುಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ವರ್ಷಾ ಋತುವಿನ ವೃತ್ತಾಂತ  ಮತ್ತು ರಾಮನ ಮನಸ್ಸಿನಲ್ಲಿ ಶೋಕ ತಳಮಳವನ್ನು ವಿಭಿನ್ನ ರೀತಿಯಲ್ಲಿ ಉಪಮಾ ಅಲಂಕಾರ ಮಯವಾಗಿ ವರ್ಣಿಸಿರುವನು, ಅದರಲ್ಲಿ ಮೂಡಿ ಬರುವ ಅಂಶಗಳು (1) ಮಳೆಗಾಲದ ಮೋಡಗಳ ಜನ್ಮ__ ಸೂರ್ಯನ ಶಾಖದಿಂದ ಮಹಾಸಾಗರಗಳ ನೀರು ಕಾಯ್ದು ಆವಿಯಾಗಿ ಮೋಡವಾಗುವದು ಹಾಗು ಅದು ಆಕಾಶ ಗರ್ಭದಲ್ಲಿ ಭ್ರೂಣವಾಗಿ ಬೆಳೆದು ಮಳೆಗಾಲ ಬಂದಾಗ ಭೂಮಿಗೆ  ಸುರಿಸಿ ಜೀವಜಲಕ್ಕೆ ಜನ್ಮ ನೀಡುವದು, ಪೃಕೃತಿಯಲ್ಲಿ ನಡೆಯುವ ಭಾಷ್ಪಿಭವನ ಕ್ರಿಯೆಯನ್ನು ಆದಿಕವಿ ವಾಲ್ಮೀಕಿಯು ವ್ಯಕ್ತಿಕರಣಗೊಳಿಸುವ ಮೂಲಕ ತಮ್ಮ ಕಾವ್ಯ ರಚನಾ ಕೈಚಳಕವನ್ನು ಪರಿಚಯಿಸಿರುವರು, ಅವರ ಆ ಕಾವ್ಯ ಶೈಲಿ ಇಂದಿನ ಎಲ್ಲ ಭಾಷೆಗಳ ಸಾಹಿತ್ಯದಲ್ಲಿ ಅಳವಡಿಸಿ ಕೊಂಡದನ್ನು ನೋಡ ಬಹುದು, ಆದರೆ ಯಾರೂ ಎಲ್ಲಯೂ ಆ ಕಾವ್ಯಶೈಲಿ ಜನಕ ಆದಿಕವಿ ವಾಲ್ಮೀಕಿಯ ಹೆಸರನ್ನು ಉಲ್ಲೇಖಿಸಿವದಿಲ್ಲ, ಕೃತಿಚೌರ್ಯ ಕೃತಘ್ನ ಸಾಹಿತಿ ಮತ್ತು ಕವಿಗಳು;  (2) ವರ್ಷಾ-ಋತುವಿನ ಮೋಡಗಳ ದೃಶ್ಯ — ಮೋಡಗಳು ಆಕಾಶಕ್ಕೆ ಹಾಕಿದ ನಿಚ್ಚಣಿಕೆಯಂತೆ ಕಾಣುತ್ತಿವೆ, ಅವುಗಳ ಸಹಾಯದಿಂದ ಆಕಾಶಕ್ಕೆ ಏರಬಹುದು ಎಂಬ ಕಲ್ಪನೆ ; ಸಂಜೆಹೊತ್ತು ಮೋಡಗಳಂಚಿನ ಬಿಳಿಗೆಂಪು ಸೂರ್ಯನಿಗೆ ಕಾಡಮಲ್ಲಿಗೆ ಅರ್ಜುನ-ಹೂ ಹಾರಗಳಂತೆ ಕಾಣುವ  ಹಾಗು  ಬಟ್ಟೆಗಳನ್ನು ಹಾಸಿದಂತೆ ಕಾಣುವ ದೃಶ್ಯ; ಬೀಸುವ ತಂಗಾಳಿ, ಗಂಧಲೇಪನದಂತೆ ಕಾಣುವ ಸೂರ್ಯಾಸ್ತವು ಮೋಡುಗಳ್ಮುಖದಿಂದ ಪ್ರೇಮದುಸಿರಾಗಿ ಹೊರ ಸೂಸುತಿರುವ ಭಾಸ; ಕಾರ್ಮೋಡಗಳ ಘರ್ಜನೆಯು ಯುವ-ಶಿಷ್ಯರ ಪಾಠ ಪಠಿಸಿದಂತೆ ಶಿಖರ ಗುಹೆಗಳಿಂದ  ಕೇಳಿ ಬರುವ ಪ್ರತಿದ್ವನಿ; ಚಿನ್ನದ ಚಾಬೂಕಿನಂತೆ ನೀಡುವ ಮಿಂಚುಗಳ ಏಟಗೆ ಮೋಡಗಳು ಒಳ ಹೊರ ವೇಧನೆಯಿಂದ ಬಳಲುವಂತೆ ಭಾಸ;  ಮಿಂಚಿನ ಏಟಿಗೆ ಬಳಲುವ ಮೋಡವು ರಾಮನಿಗೆ ರಾವಣ-ಬಿಗಿಮುಷ್ಠಿಗೆ ಬಳಲಿದ ಸೀತೆಯಂತೆ ಕಂಡಿತು; ಪ್ರೇಯಸಿ ಜೊತೆಯಿದ್ದವರಿಗೆ  ಮಳೆಗಾಲ ನೋಟ ಉಲ್ಲಾಸಕರ ಆದರೆ ಪ್ರೇಯಸಿ ಜೊತೆಯಿಲ್ಲದವರಿಗೆ ಆ ನೋಟವು ದುಃಖಕರ ಎಂಬ ಸತ್ಯದ ದರ್ಶನ; ಆನೆಗಳಂತೆ ಸಜ್ಜಾಗಿ ಯುದ್ಧಕ್ಕೆ ನಿತ್ತಂತೆ ಮಿಂಚಿನ ಪತಾಕೆಗಳ ಆಭರಣದಲ್ಲಿ ಕಾರ್ಮೋಡಗಳು ನಿಂತ ದೃಶ್ಯ, ಒಟ್ಟಿನಲ್ಲಿ ಆದಿಕಾವ್ಯಮಿಮಾಂಸೆ ಜನಕ ವಾಲ್ಮೀಕಿಯು ವರ್ಷ ಋತುವಿನ ಆಗಮನ, ಪ್ರಕೃತಿಯ ಸಂಭ್ರಮನ , ಮನುಷ್ಯನ ತೊಳಲಾಟ ಇತ್ಯಾದಿಗಳನ್ನು ಬಹು ಅಲಂಕೃತವಾಗಿ ಬಣ್ಣಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ, ಪ್ರಖ್ಯಾತ ಮಹರ್ಷಿ ವಾಲ್ಮೀಕಿ ಸಾಹಿತ್ಯ ಚಿಂತಕರು.