
ಒಂದೆಡೆ ನೃತ್ಯ, ಮತ್ತೊಂದೆಡೆ ಸಂಗೀತI
ನಡೆಸಿದವರ್ಯಾರು ಸಂಗಿತ ಕಚೇರಿ ವನದಲಿ? II
ತುಂಬಿ ಹರಿವ ನದಿ, ಅದರ ಮಧ್ಯೆ ಕೊಕ್ಕರಿಗಳ ಹಾರಾಟI
ಕಾಣುವದು, ನದಿ ಬಲತ್ಕರಿಸಲು ಹೊರಟಂತೆ, II
ಕಪ್ಪು ಪರ್ವತಗಳಿಗಿಂತ ಕಪ್ಪುಮೋಡಗಳು ತೊಳೆಯುತಿದ್ದವು I
ಸುಟ್ಟ ಪರ್ವತಗಳನು, ಆನೆಗಳ ಘೀಂಕಾರ, II
ಸಿಂಹಗಳನ್ನೇ ಅಟ್ಟಾಡಿಸುವ ಗೂಳಿ, ಮನಮೋಹಕ I
ಪರ್ವತದಿ ತುಂಬಿತು ಅರಣ್ಯ, ಮೋಡಗಳಿಂದ ಸುರಿವ ನೀರು, II
ತುಂಬಿ ಹೊಂಡ, ಮಡ, ಝರಿ,ತೊರೆ, ನದಿಗಳನ್ನು ,I
ಸಾಗರ ಸೇರಲು ಹೊರಟಿತು ಪ್ರೇಯಸಿಯಂತೆ, II
ರಭಸದಿ ಬೀಳುವ ಮಳೆಹನಿಗಿಂತ ರಭಸದಿ ಹರಿಯಿತುI
ದಡ ಕೊಚ್ಚಿಕೊಂಡು ನದಿ, ಅಭಿಷೇಕ ಮಾಡುವರು II
ಪ್ರಜೆಗಳು ರಾಜನಿಗೆ ಹೊಸ ನೀರಿನ, ಮಾಡಿದಂತೆI
ಪರ್ವತರಾಜನಿಗೆ ಮೋಡಗಳು ಜಲಾಭಿಷೇಕ, II
ಸಿಗವು ಸೂರ್ಯ ಚಂದ್ರ ನಕ್ಷತ್ರ ಮೋಡಗಳ ಆಗಸದಲಿI
ಮಜ್ಜನವಾಗಿಹದು ಭೂಮಿಗೆ ಹೊಸ ಜಲದಿ, II
ತೊಳೆದು ಶುಭ್ರಗೊಂಡ ಪರ್ವತ ಶಿಖರಗಳುI
ಕಂಡವು ಹಾರ-ಆಭರಣಗಳ ವಜೃದಂತೆ, II
ಗಿರಿ ಶಿಖರಗಳಿಂದ ಧುಮಕುವ ಸಣ್ಣ ಜಲಪಾತಗಳುI
ಕಂಡವು ಅವಗಳ ಕೊರಳ ಮುತ್ತಿನ ಹಾರಗಳಂತೆ,II
ಮನೆಕಾರ್ಯದಿ ನಿರತನಾಗಿರಬಹುದು ಆಷಾಡ ಹುಣ್ಣಮೆದಿನI
ರಾಜಾಭರತ, ಅಗತ್ಯ ವಸ್ತು ಸಂಗ್ರಹಿಸಿ ಮಳೆಗಾಲಕ್ಕಾಗಿ, II
ತುಂಬಿ ಹರಿಯುತಿರಬಹುದು ಸರಯೂನದಿ,I
ಅಯೋಧ್ಯೆಯಲಿ ಎನ್ನ ಆಗಮಕ್ಕಾಗಿ, II
ಕಳಕೊಂಡ ಪತ್ನಿ ಹಿಂಪಡೆದ ಸುಗ್ರೀವ,ಧನ್ಯI
ರಾಜ್ಯ ಪತ್ನಿ ಕಳಕೊಂಡ ನಾ ನದಿದಡದಂತೆ ಕೊಚ್ಚಿದ, II
ಸುಗ್ರೀವನೂ ಅನುಭವಿಸಿಹನು ಶೋಕ ನನ್ನಂತೆI
ಅವನಿಗಿದೆ ಎನ್ನ ಶೋಕದರಿವು, ಬಲವಂತಿಕೇಕೆ?, II
ಸ್ಮರಣನೆಯುಂಟು ವೀರನಿಗೆ ಉಪಕಾರದ,I
ಸುಗ್ರೀವನಲ್ಲಿ ಸಂದೇಹವೇಕೆ?”II
ರಾಮನ ಮಳೆಗಾಲ ಪ್ರಲಾಪಗೀತೆ ಕೇಳಿI
ನಿಷ್ಕಲ್ಮಷ ಲಕ್ಷ್ಮಣ ಕೈಮುಗಿದು ರಾಮನಿಗೆ ನುಡಿದ: II
“ಶರತ-ಋತುಗಾಗಿ ಕಾಯು, ಸಹಿಸು ಮಳೆಗಾಲ ಶೋಕ I
ಶತ್ರುನನು ಹುಡುಕೋಣ, ಸುಗ್ರೀವನಲ್ಲಿರಲಿ ನಂಬಿಕೆ”.II
ಕಿಷ್ಕಿಂಧಕಾಂಡ ರಾಮಾಯಣ
ಮಳೆಗಾಲದಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಆದಿಕವಿ ವಾಲ್ಮೀಕಿಯು ಕಾವ್ಯಮಯವಾಗಿ ರಾಮನ ಮುಖೇನ ಬಣ್ಣಿಸಸುವದನ್ನು ಮುಂದುವರೆಸಿದರು, ಅದರಲ್ಲಿಯ ಮುಖ್ಯಾಂಶಗಳು (1)ಒಂದೆಡೆ ನವಿಲುಗಳ ನೃತ್ಯ, ಮತ್ತೊಂದೆಡೆ ನಿಸರ್ಗದ ಸಂಗೀತವು, ಈ ಸಂಗೀತ ಕಚೇರಿಯನ್ನು ವನದಲಿ ನಡೆಸಿದವರ್ಯಾರು? ತುಂಬಿ ಹರಿವ ನದಿ, ಅದರ ಮಧ್ಯೆ ಕೊಕ್ಕರಿಗಳ ಹಾರಾಟವು ನದಿಯನ್ನು ಬಲತ್ಕರಿಸಲು ಹೊರಟಂತೆ ಕಾಣುವದು; ಕಪ್ಪು ಪರ್ವತಗಳಿಗಿಂತ ಹೆಚ್ಚು ಕಪ್ಪಾದ ಮೋಡಗಳು ಬಿಸಿಲಿಗೆ ಸುಟ್ಟ ಪರ್ವತಗಳನು ತೊಳೆಯುತಿದ್ದವು; ಆನೆಗಳ ಘೀಂಕಾರ, ಸಿಂಹಗಳನ್ನೇ ಅಟ್ಟಾಡಿಸುವ ಗೂಳಿ, ಮನಮೋಹಕ ಪರ್ವತ ದೃಶ್ಯಗಳಿಂದ ಅರಣ್ಯವು ತುಂಬಿತು; ಮೋಡಗಳಿಂದ ಸುರಿವ ನೀರು ಹೊಂಡ, ಮಡ, ಝರಿ,ತೊರೆಗಳನ್ನು ತುಂಬಿ ನದಿ ಸಾಗರಗಳನ್ನು ಸೇರಲು ಪ್ರೀತಮನ ಸೇರುವ ಪ್ರೇಯಸಿಯಂತೆ ಹೊರಟಿತು; ರಭಸದಿಂದ ಬೀಳುವ ಮಳೆಹನಿಗಿಂತ ಹೆಚ್ಚ ರಭಸದಿಂದ ನದಿ ದಡ ಕೊಚ್ಚಿಕೊಂಡು ಹರಿಯಿತು; (2) ಚೂನೆ ಮಳೆ ಮಜ್ಜನ— ಚೂನೆಮಳೆಗೆ ತೊಯ್ಯಲು ಪ್ರತಿಯೊಬ್ಬರು ತವಕ ಪಡುವರು; ಪ್ರಜೆಗಳು ಮಳೆಗಾಲದಲ್ಲಿ ರಾಜನಿಗೆ ಹೊಸ ನೀರನ ಅಭಿಷೇಕ ಮಾಡುವ ವಾಡಿಕೆ ಚೂನೆ ಮಳೆ ಮೋಡಗಳು ಗಿರಿ ಪರ್ವತಗಳಿಗೆ ಜಲಾಭಿಷೇಕ ಮಾಡುವವು; ಸೂರ್ಯ ಚಂದ್ರ ನಕ್ಷತ್ರಗಳು ಆಗಸದಲಿ ಹೊಸ ಜಲದಿಂದ ಮಜ್ಜನಕ್ಕಾಗಿ ಮೋಡಗಳಿಗೆ ಸಿಗದಿದ್ದರೂ ಅವು ಭೂಮಿಗೆ ಹೊಸ ಜಲದಿಂದ ಮಜ್ಜನ ಮಾಡುವವು; ಮಳೆ ನೀರಿನಿಂದ ತೊಳೆದು ಶುಭ್ರಗೊಂಡ ಪರ್ವತ ಶಿಖರಗಳು ಹಾರ-ಆಭರಣಗಳ ವಜ್ರದಂತೆ ಕಂಡವು; ಗಿರಿ ಶಿಖರಗಳಿಂದ ಧುಮಕುವ ಸಣ್ಣ ಜಲಪಾತಗಳು ಪರ್ವತಗಳ ಕೊರಳಗೆ ಮುತ್ತಿನ ಹಾರಗಳಂತೆ ಕಂಡವು ಎಂದು ಮಳಿಗಾಲದ ಮಹಾತ್ಮೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು. (3) ಸ್ಮರಣನೆ ತವಕ— ಆಷಾಡ ಹುಣ್ಣಮೆ-ದಿನ ಮಳೆಗಾಲಕ್ಕಾಗಿ ಅಗತ್ಯ ವಸ್ತು ಸಂಗ್ರಹಿಸಿ ಮನೆಯ ಕಾರ್ಯಗಳಿಂದ ಕೋಸಲರಾಜ ಭರತನು ನಿವೃತ್ತನಾಗಿರಬಹುದು, ಮಳೆಗಾಲದಲ್ಲಿ ಜನರು ಸಾಮಾನ್ಯವಾಗಿ ತಮಗೆ ಬೇಕಾಗುವ ಅಗತ್ಯಗಳನ್ನು ಸಂಗ್ರಹವಾಗಿ ಇಟ್ಟುಕೊಳ್ಳುವ ವಾಡಿಕೆ; ಮಿಂಚಿನ ಏಟಿಗೆ ಬಳಲುವ ಮೋಡವು ರಾಮನಿಗೆ ರಾವಣ-ಬಿಗಿಮುಷ್ಠಿಗೆ ಬಳಲಿದ ಸೀತೆಯಂತೆ ಕಂಡಿತು; ಕೋಲ್ಮಮಿಂಚಿನ ಏಟ ತಿಂದು ಸುರಿವ ಮೋಡಗಳ ಮಳೆನೀರು ಸೀತೆಯ ಕಣ್ಣೀರಿನಂತೆ ರಾಮನಿಗೆ ಕಂಡವು; ಹೀಗೆ ಆದಿಕವಿ ವಾಲ್ಮೀಕಿ ಮಳೆಗಾಲ ಮತ್ತು ಮಳೆಗಾಲ ಮೋಡಗಳ ಕರ್ಮಗಳ ಮನಮೋಹಕ ದೃಶ್ಯಗಳನ್ನು ಆದಿಕವಿ ವಾಲ್ಮೀಕಿ ಈ ಸರ್ಗದಲ್ಲಿ ವರ್ಣಿಸಿರುವರು; ಸಂಸ್ಕೃತ ಕವಿ ಕಾಳಿದಾಸರಿಗೆ ‘ಮೇಘಧೂತ’ ಕೃತಿ ರಚಣೆಗೆ ಆದಿಕವಿ ವಾಲ್ಮೀಕಿಯ ಈ ‘ವರ್ಷಾ ಋತು ಶೋಕಗೀತೆ’ ಸರ್ಗವು ಪ್ರೇರಣೆಯಾಗಿರಬೇಕು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
