
ಗವಿ ಬೆಟ್ಟಗಳಿಂದ ದನಕರಗಳ ದ್ವನಿI
ಬರುತಿತ್ತು ಮಂದಗಾಳಿಯೊಂದಿಗೆ ಸೂಸಿ, II
ಮಂದಹಾಸ ಬೀರುವ ಹೂ-ಕೊಂಬೆಭರಿತ ನದಿದಡI
ರೇಶ್ಮೆ ಉಡುಪುನಂತೆ ಕಾಣುವ ಜೇಕು-ಹುಲ್ಲು ಹಾಸಿಗೆ, II
ಬೆಟ್ಟಗಳಿಂದ ಸೂಸುವ ಮಂದಾರ ಜತೆ, ಮಕರಂದ ಮದದಲಿI
ಆಟವಾಡುವ ಮಧುಮಕ್ಷಿಕೆ, ಶುಭ್ರ ನದಿಜಲ, II
ಅತ್ತಿತ್ತ ಹರಿದಾಡುವ ಮೀನಗಳು ಪ್ರೀತಮನೊಂದಿಗೆ I
ಇಡೀ ಮಧುರಾತ್ರಿ ಕಳೆದ ಹೆಣ್ಣಿನಂತೆ, II
ದುಂಭಿಗಳ ಜೇಂಕಾರ, ಮದುಮಗಳಂತೆ ಕಾಣುವ ಭೂಮಿ,I
ವಿರಹಿಗಳ ಭೇಟೆಗೆ ಬೆನ್ನಟಿದ ಮನ್ಮಥ,II
ಓ ಲಕ್ಷ್ಮಣಾ! ನೋಡು, ಕುರವಕ್ಕಿ ಮೀನ-ಭೇಟೆಯಾಡುತಿಹವು I
ಶುಭ್ರ ಜಲದಲಿ, ಸರೋವರಗಳು ಹೊಳೆಯುತ್ತಿಹವು, II
ಓ ಲಕ್ಷ್ಮಣಾ!ಬಂದಿದೆ ವೈರಿಗಳ ಭೇಟೆಯಾಡುವ ಕಾಲ,I
ಪ್ರತಿಕಾರ, ಜಯ ಬಯಸುವ ರಾಜರಿಗೆ,II
ರಾಜರಿಗೆ ದಂಡಯಾತ್ರೆ ಕಾಲವಿದು,I
ಸಿದ್ಧನಾಗುತಿಹನೆ ದಂಡಯಾತ್ರೆಗೆ ಸುಗ್ರೀವನು, II
ಶತಮಾನದಂತೆ ಗತಿಸಿತೆನಗೆ ಮಳೆಗಾಲI
ಶೋಕದಲಿ ಮುಳುಗಿರುವೆ ಕಾಣದೇ ಸೀತೆಯ, II
ಚಕ್ರವಾಕ ಜೋಡಿಹಕ್ಕಿಯಂತೆ, ಸೀತೆI
ದಿನಗಳೆದಳು ದಂಡಕಾರಣ್ಯದಲಿ ಪತಿಯೊಂದಿಗೆ, II
ಪ್ರೀಯಜನ, ರಾಜ್ಯಕಳಕೊಂಡ ನಿರಾಶ್ರಿತ ಎನಗೆ,I
ಓ ಲಕ್ಷ್ಮಣಾ, ಕೃಪೆ ತೋರುವನೆ ಸುಗ್ರೀವ ಎನಗೆ,II
ರಾವಣನಿಂದ ದಂಡಿತ, ವಿರಹಪೀಡಿತ,ಅಭದ್ರನೆಂದುI
ತಿಳಿದಿಹನೆ ನಾನು, ಸುಗ್ರೀವ, ಓ ಲಕ್ಷ್ಮಣಾ, II
ಸೀತೆ-ಹುಡುಕಲು ಸಹಾಯ ಮಾಡುವ ಒಪ್ಪಂದI
ಮರೆತಿಹನೆ ಸುಗ್ರೀವ, ತನ್ನ ಸುಖ-ಭೋಗದಲಿ, II
ಓ ಲಕ್ಷ್ಮಣಾ, ಕಿಷ್ಕಿಂಧ ಪ್ರವೇಶಿಸುI
ಎಚ್ಚರಿಸು ಸುಖ-ಭೋಗಿ ಸುಗ್ರೀವನ, II
ಸರಿಯೋ ತಪ್ಪೋ,ವಚನಕೊಟ್ಟಂತೆI
ನಡೆದುಕೊಳ್ಳುವವನೆ ಲೋಕದಲಿ ಪುರುಷೋತ್ತಮ, II
ಓ ಲಕ್ಷ್ಮಣಾ, ನನ್ನ ಶೌರ್ಯ ಸುಗ್ರೀವ ಬಲ್ಲ,I
ನೀನು ನನ್ನ ಸಂಗಡಿಗನೆಂದೂ ಬಲ್ಲ, II
ಓ ಲಕ್ಷ್ಮಣಾ, ಹೊರಡು ಕಿಷ್ಕಿಂಧಕ್ಕೆI
ನನ್ನ ರೋಷ, ರೂಪ ಪರಿಚಯಿಸು ಸುಗ್ರೀವನಿಗೆ, II
ಓ ಸುಗ್ರೀವ, ಕೊಟ್ಟಮಾತಿನಂತೆ ನಡೆದುಕೋI
ಇಲ್ಲವೇ, ವಾಲಿ ಕಂಡ ದಾರಿ ಹಿಡಿದುಕೋ”,II
ಅಣ್ಣನ ಕೋಪ ತಾಪ ಕಂಡ ಲಕ್ಷ್ಮಣI
ವೈರಭಾವತಳೆದ ವಿರುದ್ಧ ಸುಗ್ರೀವನ. II
ಕಿಷ್ಕಿಂಧಕಾಂಡ ರಾಮಾಯಣ
ರಾಮನು ನೀಡಿದ ಶರತ್ ಋತುವಿನ ಪ್ರಕೃತಿ ಸೌಂದರ್ಯ ಮತ್ತು ಅದರ ಚಟುವಟಿಕೆಗಳನ್ನು ವಿವರಿಸಿದನ್ನು ಆದಿಕವಿ ವಾಲ್ಮೀಕಿಯು ರಸವತ್ತಾಗಿ ಬಣ್ಣಿಸಿರುವರು: (1) ಪ್ರಕೃತಿಯ ಚೇಷ್ಟೆಗಳು: ಗವಿ ಬೆಟ್ಟಗಳಿಂದ ಮಂದಗಾಳಿಯೊಂದಿಗೆ ಸೂಸಿ ದನಕರಗಳ ದ್ವನಿ ಕೇಳಿ ಬರುತ್ತಿರುವ; ಮಂದಹಾಸ ಬೀರುವ ಹೂ-ಕೊಂಬೆಗಳ ಭರಿತ ನದಿದಡ, ರೇಶ್ಮೆ ಉಡುಪುನಂತೆ ಕಾಣುವ ಜೇಕು-ಹುಲ್ಲು ಹಾಸಿಗೆ, ಬೆಟ್ಟಗಳಿಂದ ಸೂಸುವ ಮಂದಾರ ಜೊತೆ ಮಕರಂದ ಮದದಲಿ ಆಟವಾಡುವ ಮಧುಮಕ್ಷಿಕೆ (ಜೇನು-ನೋಣಗಳ) ದೃಶ್ಯ ಸಾಮಾನ್ಯವಾಗಿತ್ತು; ಶುಭ್ರ ನದಿಜಲ, ಅದರಲ್ಲಿ ಪ್ರೀತಮನೊಂದಿಗೆ ಇಡೀ ಮಧುರಾತ್ರಿ ಕಳೆದ ಹೆಣ್ಣಿನಂತೆ ಅತ್ತಿತ್ತ ಹರಿದಾಡುವ ಮೀನಗಳು; ದುಂಭಿಗಳ ಜೇಂಕಾರದಿಂದ ತುಂಬಿದ ಮದುಮಗಳಂತೆ ಕಾಣುವ ಭೂಮಿಯು ವಿರಹಿಗಳ ಭೇಟೆಗೆ ಬೆನ್ನಟಿದ ಮನ್ಮಥನನ್ನು ನೆನಪಿಸುತಿತ್ತು, ಶುಭ್ರ ಜಲದಿಂದ ಸರೋವರಗಳು ಹೊಳೆಯುತ್ತಿವೆ ಅವುಗಳ ಜಲದಲ್ಲಿ ಕುರವಕ್ಕಿ ಮೀನ-ಭೇಟೆ ಮಾಡುತಿದ್ದ ದೃಶ್ಯ,ಗಳನ್ನು ಆದಿಕವಿ ರಸವತ್ತಾಗಿ ಬಣ್ಣಿಸಿರುವರು (2) ಶರತ ಋತುವು ದಂಡಯಾತ್ರೆ ಸಮಯ: ಪ್ರತಿಕಾರ, ಜಯ ಬಯಸುವ ರಾಜರಿಗೆ ತಮ್ಮ ವೈರಿಗಳ ಭೇಟೆಯಾಡುವ ಕಾಲ ಶರತರ ಋತು, ರಾಜರಿಗೆ ದಂಡಯಾತ್ರೆ ಕಾಲವಿದು; ಸುಗ್ರೀವನು ದಂಡಯಾತ್ರೆಗೆ ಸಿದ್ಧನಾಗುತಿರುವನೆ; ತಾನು ಸೀತೆಯನ್ನು ಕಾಣದೇ ಶೋಕದಲಿ ಮುಳುಗಿರುವೆ ಹಾಗಾಗಿ ತನಗೆ ಈ ಮಳೆಗಾಲ ಶತಮಾನದಂತೆ ಗತಿಸಿದೆ ಎಂದು ತನ್ನ ದುಃಖ ತೋಡಿಕೊಂಡ ರಾಮನ ಮುಖೇನ ಶರದ ಋತುವಿನ ಮರ್ಮ, ಮಹತ್ವ ಮತ್ತು ದೃಶ್ಯಗಳ ವರ್ಣನೆಯ ವಾಲ್ಮೀಕಿಯು ನೀಡಿರುವರು
(3) ಸೀತೆಯ ನೆನಪು: ಸೀತೆಯು ದಂಡಕಾರಣ್ಯದಲಿ ಚಕ್ರವಾಕ ಜೋಡಿಹಕ್ಕಿಯಂತೆ ಪತಿಯೊಂದಿಗೆ ದಿನಗಳನ್ನು ಕಳೆದಿದ್ದಳು, ತಾನು ನನ್ನ ಪ್ರೀಯಜನ ಮತ್ತು ರಾಜ್ಯ ಕಳೆದುಕೊಂಡ ನಿರಾಶ್ರಿತನಾದೆನು, ಸುಗ್ರೀವನು ತನಗೆ ಕೃಪೆ ತೋರುವನೆ ಇಲ್ಲವೆ ಸುಗ್ರೀವನು ತನ್ನನ್ನು ರಾವಣನಿಂದ ದಂಡಿತ, ವಿರಹಪೀಡಿತ ಮತ್ತು ಅಭದ್ರನೆಂದು ತಿಳಿದಿರುವನೆ; ಸುಗ್ರೀವನು ತನ್ನ ಸುಖ-ಭೋಗದಲ್ಲಿ ಸೀತೆ-ಹುಡುಕಲು ಸಹಾಯ ಮಾಡುವ ಒಪ್ಪಂದವನ್ನು ಮರೆತಿರುವನೆ ಎಂದು ಸೀತೆಯನ್ನು ನೆನಪಿಸಿ ಕೊಂಡು ಸುಗ್ರೀವನ ಬಗ್ಗೆ ಸಂದೇಹವನ್ನು ರಾಮನು ಲಕ್ಷ್ಮಣನ ಮುಂದೆ ವ್ಯಕ್ತ ಪಡಿಸಿದ ಮುಖೇನ ವಾಲ್ಮೀಕಿಯು ರಾಮನು ಸಹಜ ಮನುಷ್ಯನ ಮನಸ್ಥಿತಿ ಹೊಂದಿದ್ದನು ವ್ಯಕ್ತ ಪಡಿಸಿರುವರು, (4) ಕಿಷ್ಕಿಂಧಕ್ಕೆ ಹೋಗಲು ಲಕ್ಷ್ಮಣನಿಗೆ ರಾಮನ ಕೋರಿಕೆ: ಸುಖ-ಭೋಗಿ ಸುಗ್ರೀವನನ್ನು ಎಚ್ಚರಿಸು; ಸರಿಯೋ ತಪ್ಪೋ ಎಂದು ಚಿಂತಿಸದೇ ವಚನ ಕೊಟ್ಟಂತೆ ನಡೆದುಕೊಳ್ಳುವವನೆ ಲೋಕದಲಿ ಪುರುಷೋತ್ತಮ; ಸುಗ್ರೀವನು ತನ್ನ ಶೌರ್ಯವನ್ನು ಬಲ್ಲನು ಹಾಗು ಲಕ್ಷ್ಮಣ ತನ್ನ ಸಂಗಡಿಗನೆಂದೂ ಅವನು ಬಲ್ಲನು; ಕಿಷ್ಕಿಂಧಕ್ಕೆ ಹೊರಡು ಹಾಗು ಅವನಿಗೆ ತನ್ನ ರೋಷ ಮತ್ತು ರೂಪ ಪರಿಚಯ ನೀಡು ಎಂದು ರಾಮನು ಲಕ್ಷ್ಮಣನಿಗೆ ಹೇಳುವನು; ಕೊಟ್ಟಮಾತಿನಂತೆ ನಡೆದುಕೋ ಇಲ್ಲವೇ, ವಾಲಿಯ ಕಂಡ ದಾರಿ ಹಿಡಿದುಕೋ ಎಂದು ಕಿಷ್ಕಿಂಧಕ್ಕೆ ಹೋಗಿ ಸುಗ್ರೀವನ್ನು ಎಚ್ಚರಿಸುವಂತೆ ಕೋಪದಿಂದ ರಾಮನು ನುಡಿದ ಹಾಗು ಅಣ್ಣ ರಾಮನ ಕೋಪ ತಾಪಗಳನ್ನು ಕಂಡ ಲಕ್ಷ್ಮಣನು ಸುಗ್ರೀವನ ವಿರುದ್ಧ ವೈರ ಭಾವತಳೆದನು ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು,
(4) ಆತ್ಮವಿಶ್ವಾಸವು ಮಹಾ ಅಸ್ತ್ರ: “ ಗುರಿ ತಲುಪುವದರಲ್ಲಿ ಯಾವ ಸಂದೇಹವೂ ಇಲ್ಲಾ, ಸಹಾಯ ಸಹಕಾರಗಳಿಲ್ಲದೆ ಗುರಿ ತಲುಪುವದು ವಿಳಂಬವಾದೀತು; ಮಳೆಗಾಲವು ಭೂಮಿಗೆ ತಾಯಿ-ಭಾಗ್ಯ ತಂದು ಕೊಟ್ಟಿತು ಹಾಗು ಮಳೆ ಸುರಿಸದ ಮೋಡಗಳು ನಿರ್ಜಲವಾಗಿ ದಣಿದು ಬೇರೆಡೆ ಸರಿಯಬಹುದು ಆದರೆ ತನ್ನಲಿ ತುಂಬಿದ ರೋಷದ ಪ್ರತಿಕಾರವು ಗುರಿ ಮುಟ್ಟುವ ತನಕ ದಣಿಯದು”ವೆಂಬ ರಾಮನ ಮಾತುಗಳು ಅವರ ಗುರಿ-ಸಾಧನೆಯ ಗಟ್ಟಿತನವನ್ನು ತೋರಿಸುವದು ಅಲ್ಲದೇ ‘ ಕೊಟ್ಟಮಾತಿನಂತೆ ನಡೆದುಕೋ ಇಲ್ಲವೇ, ನೀನೂ ವಾಲಿ ಕಂಡ ದಾರಿ ಹಿಡಿದುಕೋ”ವೆಂದು ಸುಗ್ರೀವನಿಗೆ ಎಚ್ಚರಿಕೆ ನೀಡುವ ಮಾತುಗಳು ರಾಮ ಲಕ್ಷ್ಮಣರ ಆತ್ಮಬಲವನ್ನು ತೋರಿಸುವದು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
