
ಅಂಗದ ತಾರ ಜತೆ ಸಾಹಸಿ ಹನುಮಾನ ಸಾಗಿದರು ದಕ್ಷಿಣದತ್ತ I
ಸುಗ್ರೀವನ ಮಾರ್ಗದರ್ಶದಂತೆ; ದೂರದ ವಿಂಧ್ಯ-ಪರ್ವತ II
ಪ್ರದೇಶಕ್ಕೆ ಆಗಮಿಸಿ ವಾನರರೊಂದಿಗೆ ಗವಿ ಶಿಖರ ನದಿ I
ಅರಣ್ಯ ಪರ್ವತ ವೃಕ್ಷಗಳನು ಶೋಧಿಸಿದ ಹನುಮ;II
ವಿಂಧ್ಯ-ಪರ್ವತಗಳಲಿ ವಾನರರೂ ಹುಡುಕಿದರು ಸೀತೆಯನುI
ಆದರೆ, ಸಿಗಲಿಲ್ಲವರಿಗೆ ಅಲ್ಲಿ ಸೀತೆ ಸುಳಿವು; II
ಯಾತ್ರೆ ಮಧ್ಯೆ ಅಲ್ಲಲ್ಲಿ ಸೇವಿಸಿದರು ವಾನರರು I
ಅಪರಿಚಿತ ಹಣ್ಣು ಗೆಡ್ಡೆಗಳನು, ಹಸಿವು ಇಂಗಿಸಿಕೊಂಡರು; II
ದಟ್ಟಾರಣ್ಯ, ಧೀರ್ಘಗುಹೆಗಳ, ನಿರ್ಜನ, ನಿರ್ಜಲI
ಭಯಾನಕ ದೃಶ್ಯ ಕಂಡಿತು ಪ್ರದೇಶದಲಿ ಶೋಧಿಸುತ II
ಗುಹೆ ನಿರ್ಜನ ನಿರ್ಜಲ ಪ್ರದೇಶವನು ಪೀಡನೆಗೊಳಗಾದರುI
ವಾನರರು, ಎದೆಗುಂದಲಿಲ್ಲ ವಾನರರು; II
ಅಲ್ಲಿಂದ ಹೊಕ್ಕರು ಮತ್ತೊಂದು ಅತೀ ದುರ್ಗಮ ಪ್ರದೇಶI
ಬತ್ತಿದ ಝರಿ,ಹೂ ಹಣ್ಣು ಗಡ್ಡೆಗಳಿಲ್ಲದ ಪ್ರದೇಶ; II
ಕಾಡಕೋಣಗಳಿಲ್ಲ, ಆನೆಗಳಿಲ್ಲ, ಪಕ್ಷಿಗಳಿಲ್ಲI
ಹುಲಿ ಮೃಗಗಳಿಲ್ಲದ ಪ್ರದೇಶವದು; II
ಸುದೈವಿ ಸತ್ಯವಾದಿ ಶೀಘ್ರಕೋಪಿ ‘ಕಣ್ಡು ‘ನಾಮI
ತಪಸ್ವಿ ಮುನಿ ವಾಸವಿದ್ದ ಪ್ರದೇಶವದು; II
ತನ್ನ ಹತ್ತುವರ್ಷದ ಮಗನ ಕಳಕೊಂಡ ಕಾರಣI
ಕಣ್ಡುಮುನಿ ಶಾಪಕ್ಕೆ ತುತ್ತಾದ ಶಾಪಗ್ರಸ್ಥ ಪ್ರದೇಶವದು; II
ವಾನರರು ಹುಡುಕಿದರು ರಾವಣ, ಸೀತೆನ ಶಾಪಗ್ರಸ್ಥ ಪ್ರದೇಶದ ಪರ್ವತ, I
ಗವಿ, ಅರಣ್ಯ, ನದಿಗಳನ, ಪ್ರವೇಶಿಸಿದರು II
ವಾನರರು ಮತ್ತೊಂದು ದುರ್ಗಮ ಪ್ರದೇಶ,ಅಸುರರಿರುವ I
ಗಿರಿ ಪರ್ವತಗಳ ಅಪಾಯಕಾರಿ ಪ್ರದೇಶ; II
“ನೀವೆಲ್ಲರೂ ಸಾಯುವಿರಿ”ಎಂದು ಗವಿದಿ ಘರ್ಜಿಸುತI
ಪ್ರತ್ಯಕ್ಷನಾದ ಅಸುರ ಕೈಮುಷ್ಠಿ ದೂರುತ; II
“ಅವನು ರಾವಣ”ನೆಂದು ಅಂಗದ, ಶೀಘ್ರI
ಮುಷ್ಠಿಯಿಂದ ಹೊಡೆದುರುಳಿಸಿದಾ ಅಸುರನ; II
ಅಂಗದನೇಟಕ್ಕೆ ಪರ್ವತದಂತೆ ಕುಸಿದು ಬಿತ್ತುI
ನೆಲಕ್ಕೆ ಅಸುರ, ಬಾಯಿಂದ ರಕ್ತ ಹರಿಯಿತು; II
ಅಸುರನಿದ್ದ ಗವಿ ರಾವಣನದಾಗಿರಬೇಕೆಂದುI
ಊಹಿಸಿ, ಗವಿಯಲಿ ಸೀತೆಯನು ಶೋಧಿಸಿದರು; II
ಅದರಾಚೆಯ ಮತ್ತೊಂದು ಭಯಾನಕ ಗವಿ,I
ಅದನ್ನೂ ಶೋಧಿಸಿ ಸೀತೆ ಸಿಗದೆ ನಿರಾಶರಾದರು. II
ಕಿಷ್ಕಿಂಧಕಾಂಡ ರಾಮಾಯಣ
ಅಂಗದ ಮತ್ತು ತಾರ ಜೊತೆ ಸಾಹಸಿ ಹನುಮಾನನು ಸುಗ್ರೀವನ ಮಾರ್ಗದರ್ಶದಂತೆ ದಕ್ಷಿಣದತ್ತ ಸಾಗಿ ಸೀತೆಯನ್ನು ಹುಡುಕಿದ ಸನ್ನಿವೇಶವನ್ನು ಆದಿಭೌಗೋಳಿಕಶಾಸ್ತ್ರಜ್ಞ ವಾಲ್ಮೀಕಿಯು ವಿವರಿಸಿರುವರು ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಇಂದಿನ ಭಾರತದ ದಕ್ಷಿಣ ದಿಕ್ಕಿನ ಪ್ರದೇಶಗಳಲ್ಲಿ ವಾನರರು ಸೀತೆಯನ್ನು ಹುಡುಕಿದ ಭೌಗೋಲಿಕ ಪ್ರದೇಶಗಳ ವಿವರಣೆಯನ್ನು ನೀಡಿರುವರು (1)ವಿಂಧ್ಯ-ಪರ್ವತಗಳ ಪ್ರದೇಶ ವಿವರಣೆ: ಸತ್ಪಡಾ-ಪರ್ವತಗಳ ಶ್ರೇಣಿಯು ಭಾರತವನ್ನು ಉತ್ತರ ಮತ್ತು ದಕ್ಷಿಣವೆಂದು ಇಬ್ಭಾಗಿಸಿದೆ, ಆದರೆ ಸತ್ಪುಡ-ಪರ್ವತಗಳನ್ನು ವಿಂದ್ಯವೆಂದೇ ಉಲ್ಲೇಖಿಸಲಾಗಿದೆ, (2) ದಕ್ಷಿಣ-ತಪ್ಪಲು ಪ್ರದೇಶ: ದಟ್ಟಾರಣ್ಯ, ಧೀರ್ಘಗುಹೆಗಳ, ನಿರ್ಜನ, ನಿರ್ಜಲ ಭಯಾನಕ ಪ್ರದೇಶಗಳ ವಿವರಣೆಯು ವಿದರ್ಭದ ದಕ್ಷಿಣ, ಆಂಧ್ರ/ತೆಲಂಗಣಾ ಪ್ರದೇಶ ಮತ್ತು ಉತ್ತರ ಕರ್ನಾಟಕ ಪ್ರದೇಶಗಳನ್ನು ಒಳಗೊಂಡಿದೆ ; ಅದನ್ನು ಕಣ್ಡುಮುನಿ ಶಾಪಕ್ಕೆ ತುತ್ತಾದ ಶಾಪಗ್ರಸ್ಥ ಪ್ರದೇಶವೆಂದು ಕರೆಯಲಾಗುವದು , ಕಣ್ಣು ಶಬ್ದದ ಅಪಭ್ರಂಶದಿಂದ ಕನ್ನಡ ಪದ ಬಳಕೆಗೆ ಬಂದಿರಬಹುದು, ಮತ್ತು (3) ಅದೇ ಪ್ರದೇಶದಲ್ಲಿ ಗವಿಯಲ್ಲಿ ವಾಸವಾಗಿದ್ದ ಅಸುರನನ್ನು ರಾವಣನೆಂದು ಭಾವಿಸಿ ಅಂಗದನು ಶೀಘ್ರ ತನ್ನ ಮುಷ್ಠಿಯಿಂದ ಹೊಡೆದು ಕೊಂದ ಘಟನೆ ಮತ್ತು ಪ್ರದೇಶಗಳನ್ನು ವಿವರಿಸಿರುವರು. ಆ ಅಸುರನಿದ್ದ ಗವಿಯನ್ನು ರಾವಣನ ತಾಣವಾಗಿರಬೇಕೆಂದು ಊಹಿಸಿ ಗವಿಯಲ್ಲಿ ಸೀತೆಯನ್ನು ಹುಡುಕಿದರು; ಅದರಾಚೆಯ ಮತ್ತೊಂದು ಭಯಾನಕ ಗವಿ ಕಂಡಿತು ವಾನರರು ಅದನ್ನೂ ಶೋಧಿಸಿ ಸೀತೆಯು ಸಿಗದೇ ನಿರಾಶರಾದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
