
ದುಃಖ ಖಿನ್ನತೆಯಲಿ ವಾನರರು ತಲೆ ತಲೆ ಬಡಕೊಂಡು I
ಮಾಡುವರು ಪ್ರಾಣ ತ್ಯಾಗ, ದುಃಖದಿ ವಾನರರು, II
ಆಹಾರ, ಸುಖ ತೊರೆದು ಮಡದಿ-ಮಕ್ಕಳೊಂದಿಗೆ I
ಸಾಯುವರು ವಿಷಸೇವಿಸಿ, ಬೆಂಕಿ ಹಚ್ಚಿಕೊಂಡು, II
ಮರಳುವ ಮುನ್ನ ಯೋಚಿಸಲೇ ಬೇಕು ನಾ I
ಇಕ್ಷ್ವಾಕುವಂಶ ವ ವಾನರಕುಲ ಘೋರ-ವಿನಾಶ ಸಂಭವಿತೆ, II
ಸೀತೆಯನ್ನು ಹುಡುಕದೆ ಕಿಷ್ಕಿಂಧಕ್ಕೆ ಹಿಂದಿರುಗೇನು ನಾI
ನೋಡೆನು ಸುಗ್ರೀವನ ಮುಖ,ಸೀತೆ ಸಿಗದೆ, II
ಜೀವಂತಿರುವರು ರಾಮ ಲಕ್ಷ್ಮಣ ವಾನರ ಕುಲI
ಸುದ್ಧಿ ತಿಳಿವ ತವಕದಲಿ, ನಾ ಹಿಂದಿರುಗುವದಿಲ್ಲ, II
ಗೆಡ್ಡೆ, ಗೆಣಸು, ಹಣ್ಣು ತಿಂದು ಜಲ ಸೇವಿಸುತI
ಮರಗಳ ಮೇಲೆ ಸಮುದ್ರದಡದಲಿ ಕಾಲ ಕಳೆಯುವೆ, II
ಇಲ್ಲವೆ, ಅಗ್ನಿಚಿತೆಗೆ ಹಾರಿ ಬಿಡುವೆ ಪ್ರಾಣ,I
ಇಲ್ಲವೆ ಆಮರಣ ಉಪವಾಸ ಮಾಡುವೆ ದಡದಲಿ, II
ಸೀತೆ ಸಿಗದಿದ್ದರೆ ಸೇರುವೆ ನಾ ಜಲ ಸಮಾದಿ,I
ಬಿರುದು ಖ್ಯಾತಿ ಎಲ್ಲ ತೊರೆದು ಬಿಡುವೆ ಪ್ರಾಣ, II
ಆತ್ಮ ಹತ್ಯೆ ಮಹಾಪಾಪ, ಬದುಕಿ ಜಯಿಸಬೇಕು,I
ಗುರಿ ಮುಟ್ಟುವರೆಗೆ ಹೊರಾಡುವೆ ಬುದುಕಿಕೊಂಡು”, II
ಕಂಡಿತು ಪದೇ ಪದೇ ದುಃಖಿಸುವ ಮನಸ್ಥಿತಿ ಹನುಮನ,I
ಪದೇ ಪದೇ ದುಃಖ ಸಾಗರ ದಾಟಿದ ಹನುಮ,II
“ಸೀತೆ ಕದ್ದ ಹತ್ತು ತಲೆ ರಾವಣನ ಹತ್ಯೆಗೈದು, I
ಸೇಡು ತಿರಿಸಿಕೊಳ್ಳುವೆ ರಾಮನಿಗಾಗಿ; ||
ಇಲ್ಲವೆ ಪ್ರಾಣಿಗಳನ್ನು ಹೊತ್ತೋಯ್ದಂತೆI
ಹೊತ್ತೋಯ್ಯುವೆ ರಾವಣನ ರಾಮನ ಬಳಿ”, ||
ಎನ್ನುತ ದುಃಖ ಹೆಚ್ಚಿಸಿಕೊಂಡ ಹನುಮI
ಮಾನಸಿಕ ಅಸ್ಥಿರ ಸುಳಿಯಲಿ ಸಿಲುಕಿದ; II
ಪುನಃ ನುಡಿದ ಹನುಮ “ ಪದೇ ಪದೇ ಹುಡುಕುವೆI
ಸೀತೆಯನು ಲಂಕಾದಲಿ ಸಿಗುವವರೆಗೆ, II
ಮಿತ ಆಹಾರ, ನಿಯಂತ್ರಿತ ಇಂದ್ರಿಗಳದಿ ವಾಸಿಸುವೆI
ಲಂಕೆಯಲಿ, ಬದುಕಿರಲಿ ವಾನರರು ಅಲ್ಲಿ; II
ಕಾಣಿಸುತ್ತಿದೆ ದೂರದಲಿ ದಟ್ಟಮರಗಳ ಅಶೋಕ-ವನ,I
ಸೀತೆಯನ್ನು ನಾ ಹುಡುಕದ ತಾಣ, II
ಹೆಚ್ಚಿಸುವೆ ರಾಕ್ಷಸರ ಶೋಕ, ವಂದಿಸಿI
ವಸು . ಮಾರುತ, ರುದ್ರ, ಆದಿತ್ಯ, ಅಶ್ವಿನಿ;II
ಸಂಹರಿಸಿ ರಾಕ್ಷಸರನು ರಾಮನಿಗೆ ಒಪ್ಪಿಸುವೆ ಸೀತೆI
ಮಹರ್ಷಿಗಳಿಗೆ ಶುದ್ಧ ಫಲಗಳನ್ನು ಅರ್ಪಿಸಿದಂತೆ”; II
ದುಃಖದಿಂದ ಕೊಡವಿಕೊಂಡು ಎದ್ದುI
ನಡೆದ ಅಶೋಕ-ವನದತ್ತ ವಾಯುಪುತ್ರ ಹನುಮ, II
ವಂದಿಸಿ ರಾಮ ಲಕ್ಷ್ಮಣ ಸುಗ್ರೀವ ದೇವತೆಗಳಿಗೆI
ಮನಸ್ಸಿನ ವೇಗದಿ ಚಲಸಿದ ಅಶೋಕ-ವನದತ್ತ; II
ನುಡಿ ಹನುಮ:“ ತುಂಬಿರಬೇಕು ಅಶೋಕವನ ರಾಕ್ಷಸರು,I
ಗಿಡ ಬಳ್ಳಿ, ಪವಿತ್ರ-ಸಂಸ್ಕೃತಿ ,ಮಂದ ವಾಯುವಿನಿಂದ, II
ಕಾಣದಂತೆ ರಾವಣ, ರಾಕ್ಷಸರಿಗೆ ನುಸುಳಬೇಕು ಧರಿಸಿ ಸಣ್ಣ ದೇಹ ನಾ I
ಅಶೋಕವನದಲಿ, ನೋಡುವದೆಂತು ಮುಕ್ಕಾಗದ,II
ನಗುವ,ಶುಭ್ರದಂತಗಳ, ಕಮಲಾಕ್ಷಿ,I
ಚೂಪ ಮೂಗಿನ, ಚಂದ್ರಮುಖಿ ಸೀತೆಯನು, II
ದರ್ಬಲ, ಅಸಹಾಯಕ, ರಾವಣನಿಂದ ಅಪಹೃತI
ಹಿಂಸೆ ಸಹಿಸಿದ ಸೀತೆ ಹೇಗೆ ಕಂಡಾಳು ಎನಗೆ?” II
ಸುಂದರ ಕಾಂಡ
ಸೀತೆಯನ್ನು ಹುಡುಕುತ್ತ ಅಶೋಕವನದತ್ತ ಹನುಮನನು ಪಯಣಿಸಿದಾಗ ಸೀತೆಯನ್ನು ಕಾಣದೆ ನಿರಾಶೆ ಮನಸ್ಸಿನಲ್ಲಿ ಊಹಿಸಿಕೊಂಡದನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಆಗಬಹುದಾದ ಅನಾಹುತಗಳನ್ನು ನೆನಸಿಕೊಂಡನು ಹನುಮಾನ: ಸೀತೆ ಸಿಗದ ದುಃಖ ಖಿನ್ನತೆಯಲಿ ವಾನರರು ತಲೆ ತಲೆ ಬಡಕೊಂಡು ಪ್ರಾಣ ತ್ಯಾಗ ಮಾಡುವರು; ಅವರ ನಾವಿನ ಸರಮಾಲೆ ದುಃಖದಿಂದ ವಾನರರು ಆಹಾರ ಸುಖ ತೊರೆದು ಮಡದಿ-ಮಕ್ಕಳೊಂದಿಗೆ ವಿಷ ಸೇವಿಸಿ,ಬೆಂಕಿ ಹಚ್ಚಿಕೊಂಡು ಸಾಯುವರು; ತಾನು ಲಂಕೆಯಿಂದ ಮರಳುವ ಮುನ್ನ ಇಕ್ಷ್ವಾಕುವಂಶ ಮತ್ತು ವಾನರಕುಲ ಘೋರ-ವಿನಾಶ ಸಂಭವಿತೆಯ ಬಗ್ಗೆ ಯೋಚಿಸಲೇ ಬೇಕು ಎಂದು ಹನುಮಾನನು ನೊಂದುಕೊಳ್ಳುವನು; (2) ಹನುಮಾನನ ಜಿದ್ದು: ಸೀತೆಯನ್ನು ಹುಡುಕದೆ ತಾನು ಕಿಷ್ಕಿಂಧಕ್ಕೆ ಹಿಂದಿರುಗ ಬಾರದೆಂದು ಹಾಗು ಸುಗ್ರೀವನ ಮುಖ ನೋಡುವದಿಲ್ಲ; ತಾನು ಹಿಂದಿರುಗುವದಿಲ್ಲ ಎಂದು ಹನುಮಾನ ಜಿದ್ದು ತೊಡುವನು, ಅದರಂತೆ ರಾಮ ಲಕ್ಷ್ಮಣ ವಾನರಕುಲ ಸೀತೆ ಸುದ್ಧಿ ತಿಳಿವ ತವಕದಲಿ ಜೀವಂತಿರುವರು,ತಾನು ಲಂಕೆಯಲ್ಲಿಯೇ ಗೆಡ್ಡೆ, ಗೆಣಸು, ಹಣ್ಣು ತಿಂದು ಜಲ ಸೇವಿಸುತ ಮರಗಳ ಮೇಲೆ ಸಮುದ್ರದಡದಲಿ ಕಾಲ ಕಳೆಯುವ ಇಲ್ಲವೆ ಅಗ್ನಿಚಿತೆಗೆ ಹಾರಿ ಪ್ರಾಣ ಬಿಡುವ ಇಲ್ಲವೆ ಸಮುದ್ರ ದಡದಲಿ ಆಮರಣ ಉಪವಾಸ ಮಾಡುವ ಹಾಗು ಸೀತೆ ಸಿಗದಿದ್ದರೆ ತಾನು ಜಲ ಸಮಾಧಿ ಸೇರುವ ಮತ್ತು ಬಿರುದು ಖ್ಯಾತಿ ಎಲ್ಲ ತೊರೆದು ಪ್ರಾಣ ಬಿಡುವ ಜಿದ್ದನ್ನು ಹನುಮಾನ ತೊಡುವನು; (3) ಹನುಮಾನ ಮನದಲ್ಲಿ ಋಣಾತ್ಮಕ ವಿಚಾರಗಳನ್ನು ತೊರೆಯವನು: ಆತ್ಮ ಹತ್ಯೆ ಮಹಾಪಾಪ, ಬದುಕಿ ಜಯಿಸಬೇಕು, ತಾನು ಗುರಿ ಮುಟ್ಟುವರೆಗೆ ಬುದುಕಿಕೊಂಡು ಹೊರಾಡ ಬೇಕೆಂದು ಪಣ ತೊಡುವನು ಹಾಗು ಧನಾತ್ಮಕ ವಿಚಾರಗಳಿಗೆ ಮೊರೆ ಹೋಗುವನು; ಆತ್ಮಹತ್ಯೆಯಂತಹ ಋಣಾತ್ಮಕ ವಿಚಾರಗಳು ಸರಿ ಅಲ್ಲ ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಜಗಕ್ಕೆ ನೀಡಿರುವರು; (4) ಹನುಮಾನನ ಮಾನಸಿಕ ಸ್ಥಿರತೆ: ಪದೇ ಪದೇ ದುಃಖಿಸುವ ಮನಸ್ಥಿತಿ ಹನುಮನಲ್ಲಿ ಕಾಣಿಸಿತು ಹಾಗು ಹನುಮನು ಪದೇ ಪದೇ ಆ ದುಃಖದ ಸಾಗರವನ್ನು ದಾಟಿದನು ಹಾಗು ಪ್ರತೀಕಾರದ ಮನಸ್ಸಿನಲ್ಲಿ ಹೀಗೆ ಆಡಿಕೊಳ್ಳುವನು “ಸೀತೆಯನ್ನು ಕದ್ದ ಆ ಹತ್ತು ತಲೆ ರಾವಣನ ಹತ್ಯೆಗೈದು ರಾಮನಿಗಾಗಿ ಸೇಡು ತೀರಿಸಿಕೊಳ್ಳುವೆನು ಇಲ್ಲವೆ ಹೊತ್ತೋಯ್ಯುವೆ ರಾವಣನನ್ನು ರಾಮನ ಬಳಿ ಪ್ರಾಣಿಗಳನ್ನು ಹೊತ್ತೋಯ್ದಂತೆ” ಎನ್ನುತ ಹನುಮಾನನು ಪುನಃ ತನ್ನ ದುಃಖ ಹೆಚ್ಚಿಸಿಕೊಂಡನು; ಮಾನಸಿಕ ಅಸ್ಥಿರ ಸುಳಿಯಲಿ ಸಿಲುಕಿದ ಹನುಮಾನನು ಪುನಃ ಹೀಗೆ ಆಡಿಕೊಳ್ಳುವನು “
ಸೀತೆಯನು ಲಂಕಾದಲಿ ಅವಳು ಸಿಗುವವರೆಗೆ ಪದೇ ಪದೇ ಹುಡುಕುವೆನು; ಮಿತ ಆಹಾರ, ನಿಯಂತ್ರಿತ ಇಂದ್ರಿಗಳಿಂದ ನಾನು ಲಂಕೆಯಲಿ ವಾಸಿಸುವೆ, ವಾನರರು ಕಿಷ್ಕಿಂದದಲ್ಲಿ ಬದುಕಿರಲಿ; ನನಗೆ ದೂರದಲಿ ದಟ್ಟಮರಗಳ ಅಶೋಕ-ವನ ಕಾಣಿಸುತ್ತಿದೆ, ನಾನು ಆ ಸ್ಥಳದಲ್ಲಿ ಸೀತೆಯನ್ನು ಹುಡುಕಿರುವದಿಲ್ಲ; ವಂದಿಸಿ ಮಾರುತ, ರುದ್ರ, ಆದಿತ್ಯ, ಅಶ್ವಿನಿ, ಧನಿಷ್ಠಾ,ಅಷ್ಟದೇವತೆಗಳಿಗೆ ಅಶೋಕವನದಲ್ಲಿ ಸೀತೆಯನ್ನು ಹುಡುಕಿ ರಾಕ್ಷಸರನು ಸಂಹರಿಸಿ ರಾಕ್ಷಸರ ಶೋಕ ಹೆಚ್ಚಿಸುವೆ ಹಾಗು ಸೀತೆಯನ್ನು ರಾಮನಿಗೆ ಒಪ್ಪಿಸುವೆ ಮಹರ್ಷಿಗಳಿಗೆ ಶುದ್ಧ ಫಲಗಳನ್ನು ಅರ್ಪಿಸಿದಂತೆ”, ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಹನುಮಾನನ ಮುಖೇನ ಮನುಷ್ಯನು ತನ್ನ ಪ್ರಯತ್ನವನ್ನು ಬಿಡದೇ ಮುಂದುವರೆಸಬೇಕು ಎಂಬ ಸಂದೇಶವನ್ನು ನೀಡಿರುವರು;(5) ಸೀತೆಯನ್ನು ಹುಡುಕುವ ತವಕ: ವಾಯುಪುತ್ರ ಹನುಮಾನನು ದುಃಖದಿಂದ ಸುಧಾರಿಕೊಂಡು ಎದ್ದು ಅಶೋಕ-ವನದತ್ತ ನಡೆದನು, ವಂದಿಸಿ ರಾಮ ಲಕ್ಷ್ಮಣ ಸುಗ್ರೀವ ಮತ್ತು ದೇವತೆಗಳಿಗೆ ಮನಸ್ಸಿನ ವೇಗದಲಿ ಅಶೋಕ-ವನದತ್ತ ಚಲಸಿದನು ಹಾಗು ಮನಸ್ಸಿನಲ್ಲಿ ಹೀಗೆ ಅಂದುಕೊಂಡನು:“ಅಶೋಕವನವು ಗಿಡ ಬಳ್ಳಿ, ಪವಿತ್ರ-ಸಂಸ್ಕೃತಿ ,ಮಂದ ವಾಯು ಮತ್ತು ರಾಕ್ಷಸರಿಂದ ತುಂಬಿರಬೇಕು; ನಾನು ಧರಿಸಿ ಸಣ್ಣ ದೇಹವನ್ನು ರಾವಣ ಮತ್ತು ರಾಕ್ಷಸರಿಗೆ ಕಾಣದಂತೆ ಅಶೋಕವನದಲಿ ನುಸುಳಬೇಕು; ಊನತೆಯಿಲ್ಲದ, ನಗುವ, ಶುಭ್ರದಂತಗಳ, ಕಮಲಾಕ್ಷಿ, ಚೂಪ ಮೂಗಿನ, ಚಂದ್ರಮುಖಿ ಸೀತೆಯನು ಕಾಣುವ ತವಕ ನನಗೆ; ದರ್ಬಲ, ಅಸಹಾಯಕ, ರಾವಣನಿಂದ ಅಪಹೃತಹಿಂಸೆ ಸಹಿಸಿದ ಸೀತೆ ಹೇಗೆ ಕಂಡಾಳು ಎನಗೆ?”ಎಂದು ಸ್ವ-ಪ್ರಶ್ನಿಕೊಂಡನು ಹನುಮಾನ. ಒಟ್ಟಿನಲ್ಲಿ ಹನುಮಾನನ ಸೀತೆ ಸಿಗದ ಸುದ್ಧಿ ಹೇಳಬೇಕೋ, ಹೇಳಬಾರದೋ ಎಂಬ ದ್ವಂದ್ವ ಹನುಮನ ಮನಸ್ಸನ್ನು ಅಸ್ಥಿರಗೊಳಿದ ಸಹಜ ಮನಸ್ಸಿನ ಪ್ರವೃತಿಯ ವ್ಯಕ್ತ, ಸುದ್ಧಿ ತಿಳಿಸದೇ ಲಂಕಾದಲ್ಲಿಯೇ ತಾನು ಇರಬೇಕು ಎಂಬ ಹನುಮಾನನ ಮನಸ್ಸಿನ ಇಂಗಿತ ಮತ್ತು ಆತ್ಮಹತ್ಯೆ ಮಹಾಪಾಪ ಹಾಗು ‘ಆತ್ಮವಿಶ್ವಾಸದ ಪ್ರಯತ್ನ’ ಋಣಾತ್ಮಕ ಮನೋಬಲಗಳು ಸಹಜ ಮನಸ್ಸಿನ ವಿಭಿನ್ನ ಆಯಾಮಗಳ ವ್ಯಕ್ತ ಒಂದೆಡೆಯಾದರೆ ಅಶೋಕವನದಲ್ಲಿ ಸೀತೆಯನ್ನು ಹುಡುಕಿ ಕಾಣುವ ಹನುಮಾನನ ಮಾನಸಿಕ ಚೈತನ್ಯದ ಆಯಾಮವನ್ನು ಮತ್ತೊಂದೆಡೆ ವ್ಯಕ್ತ ಮಾಡಿದು ಆದಿಕವಿ ವಾಲ್ಮೀಕಿಯ ಮನೋತಜ್ಞೆತೆಯ ಆಳವಾಗಿದೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
